ಕಾಪಾಡಿ.. ಕಾಪಾಡಿ.. ಅಂತಾ ಜಗತ್ತಿನ ಕಾಲು ಹಿಡಿದ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ!

ರಷ್ಯಾ ವಿರುದ್ಧ ಯುದ್ಧದಲ್ಲಿ ನರಳಿ ಹೋಗಿರುವ ಉಕ್ರೇನ್ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಈ ಸಮಯದಲ್ಲಿ, ಜೀವ ಉಳಿಸಿಕೊಂಡರೆ ಸಾಕು ದೇವರೆ ಎಂಬಂತಾಗಿದೆ. ಅದರಲ್ಲೂ ರಷ್ಯಾದ ಮಿಲಿಟರಿ ಉಗ್ರಾಣದಲ್ಲಿ ಬೆಚ್ಚಗೆ ಮಲಗಿರುವ ನ್ಯೂಕ್ಲಿಯರ್ ಬಾಂಬ್‌ಗಳು ಹೊರಗೆ ಬರುತ್ತವೆ ಎಂಬ ಸುದ್ದಿ ಹೊರಬಿದ್ದ ತಕ್ಷಣ, ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೈಕಾಲು ನಡುಗಿ ಹೋಗಿವೆ. ಹೀಗಿದ್ದಾಗಲೇ ಜಗತ್ತಿನ ಎದುರು ಉಕ್ರೇನ್ ಅಧ್ಯಕ್ಷ ಬೇಡಿಕೊಂಡಿದ್ದು ಏನು ಗೊತ್ತೆ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು ಮುಂದಿನ ಫೆಬ್ರವರಿ ತಿಂಗಳಿಗೆ ಅಂದ್ರೆ, 2025ರ ಫೆಬ್ರವರಿ ತಿಂಗಳಿಗೆ ಬರೋಬ್ಬರಿ 3 ವರ್ಷ ಕಂಪ್ಲೀಟ್ ಆಗಲಿದೆ. ಹೀಗಿದ್ದಾಗ ರಷ್ಯಾ ವಿರುದ್ಧವೇ ದಾಳಿ ಮಾಡಲು ಉಕ್ರೇನ್ ಹೊಂಚು ಹಾಕುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಅಲ್ಲದೆ ಇದು ಸಾಲದು ಎನ್ನುವಂತೆ ಖುದ್ದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಈ ರೀತಿ ದಾಳಿ ಮಾಡಲು ಅಮೆರಿಕ & ನ್ಯಾಟೋ ಒಕ್ಕೂಟದ ಒಪ್ಪಿಗೆ ಕೇಳಿದ್ದರು. ಆ ನಂತರ ಮತ್ತಷ್ಟು ಕೆರಳಿ ಕೆಂಡವಾಗಿದ್ದ ರಷ್ಯಾ, ತನ್ನ ಬಳಿ ಇರುವ ನ್ಯೂಕ್ಲಿಯರ್ ಅಂದ್ರೆ ಅಣ್ವಸ್ತ್ರ ಬಳಕೆಗೆ ಸಿದ್ಧವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Ukraine President Volodymyr Zelenskyy Is Requesting For Peace Talks Now

ಉಕ್ರೇನ್ ಅಧ್ಯಕ್ಷರಿಗೆ ಶುರುವಾಯ್ತಾ ಭಯ?

ನ್ಯೂಕ್ಲಿಯರ್ ಬಾಂಬ್ ಅಂದ್ರೆ ಯಾರಿಗೆ ತಾನೆ ಭಯ ಆಗುವುದಿಲ್ಲ ಹೇಳಿ? ಎಂತಹ ಸ್ಟ್ರಾಂಗ್ ದೇಶವೇ ಆಗಿದ್ದರೂ, ನ್ಯೂಕ್ಲಿಯರ್ ಬಾಂಬ್ ಕಂಡರೆ ಹೆದರಿ ಓಡಿ ಹೋಗಲೇಬೇಕು. ಹೀಗೆ, ಅಣ್ವಸ್ತ್ರ ದಾಳಿಯನ್ನು ಸಹಿಸಿಕೊಳ್ಳುವ ಯಾವುದೇ ದೇಶ ಜಗತ್ತಿನಲ್ಲಿ ಇಲ್ಲ. ಉಕ್ರೇನ್ ಕೂಡ ಈ ಮಾತಿಗೆ ಹೊರತಾಗಿಲ್ಲ. ಪರಿಸ್ಥಿತಿ ಕೈಮೀರಿ ಹೋಗಿರುವ ವಿಚಾರ ಅರಿತುಕೊಂಡಿರುವ, ಉಕ್ರೇನ್ ಅಧ್ಯಕ್ಷ ಇದೀಗ ರಷ್ಯಾ ಜೊತೆಗಿನ ಯುದ್ಧ ನಿಲ್ಲಿಸಲು ಕೊನೆಯ ಹಂತದ ಪ್ರಯತ್ನ ಆರಂಭಿಸಿದ್ದಾರೆ. ಹೀಗಾಗಿ ಇದೀಗ ನೇರವಾಗಿ ವಿಶ್ವಸಂಸ್ಥೆಗೆ ಬಂದು, ಪ್ರಪಂಚದ ಪ್ರತಿಯೊಂದು ದೇಶದ ಎದುರು ಏನೆಂದು ಬೇಡಿಕೊಂಡಿದ್ದಾರೆ ಗೊತ್ತೆ?

2ನೇ ಶಾಂತಿ ಸಭೆ ಆಯೋಜನೆ?

ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿರುವ ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ, ಸಂಪೂರ್ಣವಾಗಿ ಯುದ್ಧ ಕೊನೆಗೊಳಿಸಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ನಾವು 2ನೇ ಶಾಂತಿ ಸಭೆಯನ್ನ ಕೂಡ ಆಯೋಜನೆ ಮಾಡಲು ಸಿದ್ಧರಾಗಿದ್ದೇವೆ. ಈ ಸಭೆಯಲ್ಲಿ ಎಲ್ಲರೂ ಭಾಗಿಯಾಗಿ ಎಂದು ಭಾರತ ಸೇರಿದಂತೆ ಜಗತ್ತಿನ ಪ್ರತಿಯೊಂದು ದೇಶದ ಎದುರು ಇದೀಗ ಉಕ್ರೇನ್ ಅಧ್ಯಕ್ಷ ಖುದ್ದು ಅಂಗಲಾಚಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಕಿತ್ತಾಡಿಕೊಳ್ಳದೆ ಎಲ್ಲರೂ ಒಂದಾಗಿ ಯುದ್ಧದ ಬೆಂಕಿಯನ್ನು ಆರಿಸಬೇಕು ಎಂದಿದ್ದಾರೆ ಉಕ್ರೇನ್ ಅಧ್ಯಕ್ಷ. ಆದರೆ ಈ ಮಾತಿಗೆ ರಷ್ಯಾ ಕೂಡ ಗ್ರೀನ್ ಸಿಗ್ನಲ್ ಕೊಡುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+