Russia & Ukraine: ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಬುಧವಾರವೇ ಬ್ರೇಕ್?

ಉಕ್ರೇನ್ ಯುದ್ಧ ಇದೀಗ ಜಾಗತಿಕ ವಿಚಾರವಾಗಿದ್ದು, ಈ ಯುದ್ಧ ನಿಲ್ಲಿಸೋದಕ್ಕೆ ಪ್ರಪಂಚದ ಪ್ರತಿಯೊಂದು ದೇಶವೂ ಕೈಜೋಡಿಸುತ್ತಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಅವರ ನಡೆ ನಿಗೂಢವಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಟ್ರಂಪ್ ಪದೇ ಪದೇ ಚರ್ಚೆ ಮಾಡುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ, ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಬುಧವಾರವೇ ಬ್ರೇಕ್? ಅನ್ನೋ ಸುದ್ದಿ ಜೋರಾಗಿ ಹಬ್ಬುತ್ತಿದೆ!

ರಷ್ಯಾ & ಉಕ್ರೇನ್ ಯುದ್ಧ ನೋಡುತ್ತಿದ್ದರೆ ಒಂದೊಂದು ಕ್ಷಣವೂ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧ ಪರಿಣಾಮ ನರಳಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ ಮಿಲಿಟರಿ, ನೂರಾರು ಕ್ಷಿಪಣಿಗಳನ್ನು ಪ್ರಯೋಗ ಮಾಡುತ್ತಿದೆ. ಈ ಸಮಯದಲ್ಲೇ ದಿಢೀರ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಸೌದಿಗೆ ಹೊರಟು ನಿಂತಿದ್ದಾರೆ!

Ukraine President Visit To Saudi Arabia Is Attracting The World

ಉಕ್ರೇನ್ ಯುದ್ಧಕ್ಕೆ ಬುಧವಾರವೇ ಬ್ರೇಕ್?

ರಷ್ಯಾ ವಿರುದ್ಧ ಒದ್ದಾಡುತ್ತಿರುವ ಉಕ್ರೇನ್ ಬೆನ್ನಿಗೆ ಇದೀಗ ಅಮೆರಿಕ ಕೂಡ ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೈಯಲ್ಲಿ ಕಾಸು ಇಲ್ಲದೆ ಉಕ್ರೇನ್ ಇನ್ನೇನು ಯುದ್ಧ ಸೋಲುವ ಹಂತಕ್ಕೂ ತಲುಪಿದೆ. ಇದು ಸಾಲದು ಎನ್ನವಂತೆ ಉಕ್ರೇನ್ ದೇಶದ ಜನರು ಕೂಡ ತುತ್ತು ಅನ್ನಕ್ಕಾಗಿ ಬೇರೆ ದೇಶಗಳ ಎದುರು ಕೈಚಾಚುವ ಪರಿಸ್ಥಿತಿ ಇದೆ. ಇಷ್ಟೆಲ್ಲದರ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಸೌದಿ ಅರೇಬಿಯಾಗೆ ಹೋಗುತ್ತಿದ್ದಾರೆ.

ಈ ಸಮಯದಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ರಿಯಾದ್‌ಗೆ ಬರುತ್ತಿದ್ದಾರೆ. ಹೀಗಾಗಿ ಇದೇ ವೇದಿಕೆಯಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಸಂಧಾನ ನಡೆಯುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಮತ್ತೊಂದು ಕಡೆ, ಚರ್ಚೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗೇ ಶೀಘ್ರದಲ್ಲೇ ಕದನ ವಿರಾಮ ಘೋಷಣೆ ಆಗಬಹುದು ಅಂತಿದ್ದಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+