ಯುರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕಾಗಿ ಉಕ್ರೇನ್ ಅಧ್ಯಕ್ಷರ ಅಂಕಿತ

ಕೀವ್, ಫೆಬ್ರವರಿ 28: ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ರಾಷ್ಟ್ರಕ್ಕೆ ಸದಸ್ಯತ್ವ ನೀಡುವುದಕ್ಕೆ ಸಂಬಂಧಿಸಿದಂತೆ ಅರ್ಜಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹಿ ಹಾಕಿದ್ದಾರೆ ಎಂದು ದೇಶದ ಸಂಸತ್ತು ಘೋಷಿಸಿದೆ.

ಉಕ್ರೇನ್ ಮೇಲೆ ರಷ್ಯಾದ ನಡೆಸುತ್ತಿರುವ ಯುದ್ಧ ಈಗಾಗಲೇ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಯುರೋಪಿಯನ್ ರಾಷ್ಟ್ರಗಳ ಪರವಾಗಿರುವ ಉಕ್ರೇನ್ ದೇಶಕ್ಕೆ ತಕ್ಷಣ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.

Ukraine President has signed an application for the membership of Ukraine in the European Union

ಉಕ್ರೇನ್ ರಾಷ್ಟ್ರಕ್ಕೆ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ತಕ್ಷಣವೇ ಸದಸ್ಯತ್ವವನ್ನು ನೀಡಬೇಕು. ಏಕೆಂದರೆ ಯುರೋಪಿಯನ್ ದೇಶಗಳ ಜೊತೆಗೆ ಒಂದಾಗಿರುವುದೇ ನಮ್ಮ ಮುಖ್ಯ ಗುರಿಯಾಗಿದೆ. ಮುಖ್ಯವಾಗಿ ಸಮಾನ ಪಾದದಲ್ಲಿರಬೇಕಾಗಿದೆ. ನ್ಯಾಯಯುತವಾದ ನಮ್ಮ ಉದ್ದೇಶವು ಸಾಕಾರಗೊಳ್ಳಲಿದೆ ಎಂದು ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಯುರೋಪಿಯನ್ ಕ್ರೀಡಾಕೂಟಗಳಿಂದ ರಷ್ಯಾ ಔಟ್:
ರಷ್ಯಾದ ಎಲ್ಲಾ ತಂಡಗಳು, ರಾಷ್ಟ್ರೀಯ ಪ್ರತಿನಿಧಿ ತಂಡಗಳು ಅಥವಾ ಕ್ಲಬ್ ತಂಡಗಳು, ಮುಂದಿನ ಸೂಚನೆ ಬರುವವರೆಗೆ FIFA ಮತ್ತು UEFA ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯಿಂದ ಅಮಾನತುಗೊಳಿಸಲು FIFA ಮತ್ತು UEFA ನಿರ್ಧರಿಸಿವೆ.

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಫಿನ್‌ಲ್ಯಾಂಡ್ ಸಿದ್ಧ:
ರಷ್ಯಾದ ದಾಳಿಯನ್ನು ಎದುರಿಸುವುದಕ್ಕೆ ಉಕ್ರೇನ್ ಸೇನೆಗೆ ಶಸ್ತ್ರಾಸ್ತ್ರ ತೀರಾ ಅತ್ಯಗತ್ಯವಾಗಿದೆ. ಈ ಹಿನ್ನೆಲೆ ಫಿನ್‌ಲ್ಯಾಂಡ್ ಸರ್ಕಾರ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸಿದ್ಧವಾಗಿದೆ. ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಇದೊಂದು ಐತಿಹಾಸಿಕ ನಿರ್ಧಾರ ಎಂದು ಹೇಳಿಕೊಂಡಿದ್ದಾರೆ.

36 ದೇಶಗಳ ವಿಮಾನ ಸಂಚಾರಕ್ಕೆ ನಿರ್ಬಂಧ:
ಉಕ್ರೇನ್ ಆಕ್ರಮಣದ ನಂತರ ಹಲವಾರು ರಾಷ್ಟ್ರಗಳು ರಷ್ಯಾವನ್ನು ತನ್ನ ವಾಯುಪ್ರದೇಶದಿಂದ ನಿಷೇಧಿಸಿದೆ. ಇದರ ಬೆನ್ನಲ್ಲೇ ರಷ್ಯಾ ಸರ್ಕಾರವು 36 ದೇಶಗಳಿಂದ ವಿಮಾನಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+