ರಷ್ಯಾ ವಿರುದ್ಧ ಯುದ್ಧಕ್ಕೆ ಹಣ ಹೊಂದಿಸಲು ಬ್ಲೂಫಿಲಂ ಉದ್ಯಮ ಸಕ್ರಮಕ್ಕೆ ಉಕ್ರೇನ್ ಚಿಂತನೆ

ರಷ್ಯಾ ಉಕ್ರೇನ್ ಯುದ್ಧ ಆರಂಭವಾಗಿ ವರ್ಷಗಳೇ ಉರುಳಿದರೂ 2 ದೇಶಗಳ ನಡುವಿನ ಸಂಘರ್ಷ ಮಾತ್ರ ಇನ್ನೂ ಮುಗಿಯುವ ಹಾಗೆ ಕಾಣುತ್ತಿಲ್ಲ. ಈ ದೀರ್ಘಕಾಲದ ಯುದ್ಧದಿಂದಾಗಿ ಎರಡೂ ದೇಶಗಳು ಆರ್ಥಿಕವಾಗಿ ಹೈರಾಣಾಗಿ ಹೋಗಿವೆ. ಹಾಗಾಗಿ ಹೊಸ ಶಸ್ತ್ರಾಸ್ತ್ರಗಳ ಖರೀದಿಗಾಗಿ ಬೇರೆ ಬೇರೆ ಆದಾಯದ ಮೂಲಗಳನ್ನ ಹುಡುಕುತ್ತಿರುವ ಉಕ್ರೇನ್, ಇದೀಗ ಅಚ್ಚರಿಯ ನಿರ್ಧಾರವೊಂದನ್ನ ತೆಗೆದುಕೊಳ್ಳಲು ಮುಂದಾಗಿದೆ.

ಯುದ್ಧದ ವೆಚ್ಚಕ್ಕಾಗಿ ಪೋರ್ನೋಗ್ರಫಿ ಸಕ್ರಮಕ್ಕೆ ಉಕ್ರೇನ್ ಪ್ಲಾನ್

ರಷ್ಯಾ ವಿರುದ್ಧದ ಹೋರಾಟವನ್ನ ಮುಂದುವರಿಸಲು ಇದೀಗ ಉಕ್ರೇನ್‌ಗೆ ಅಪಾರ ಪ್ರಮಾಣದ ಹಣದ ಅವಶ್ಯಕತೆಯಿದೆ. ಇದಕ್ಕಾಗಿ ಉಕ್ರೇನ್ ಸರ್ಕಾರವು ದೇಶದಲ್ಲಿ ಅಶ್ಲೀಲ ಚಿತ್ರಗಳ (ಪೋರ್ನೋಗ್ರಫಿ) ಉದ್ಯಮವನ್ನ ಸಕ್ರಮಗೊಳಿಸಲು ಗಂಭೀರ ಚಿಂತನೆ ನಡೆಸುತ್ತಿದೆ.

Ukraine Plans to Legalize Porn to Fund War Indian Arrested in Russia Amid Army Recruitment Plot

ಹೌದು, ಪ್ರಸ್ತುತ ಕಾನೂನುಬಾಹಿರವಾಗಿರುವ ಈ ಉದ್ಯಮಕ್ಕೆ ಅಧಿಕೃತ ಮಾನ್ಯತೆ ನೀಡಿ, ಅದರ ಮೇಲೆ ತೆರಿಗೆ ವಿಧಿಸುವ ಮೂಲಕ ಬೊಕ್ಕಸ ತುಂಬಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ. ವರದಿಗಳ ಪ್ರಕಾರ, ಪೋರ್ನೋಗ್ರಫಿ ಸಕ್ರಮ ಮಾಡುವುದರಿಂದ ಉಕ್ರೇನ್ ಸರ್ಕಾರಕ್ಕೆ ವಾರ್ಷಿಕ ಸುಮಾರು 236 ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತದ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ.

ತೆರಿಗೆ ಹಣದಿಂದ ಡ್ರೋನ್ ಖರೀದಿ

ಈ ರೀತಿ ಸಂಗ್ರಹವಾಗುವ ತೆರಿಗೆ ಹಣವನ್ನ ಸಂಪೂರ್ಣವಾಗಿ ರಕ್ಷಣಾ ವಲಯಕ್ಕೆ ಬಳಸಲು ಉಕ್ರೇನ್ ನಿರ್ಧರಿಸಿದೆ. ಮುಖ್ಯವಾಗಿ ರಷ್ಯಾ ವಿರುದ್ಧದ ದಾಳಿಗೆ ಅಗತ್ಯವಾಗಿರುವ ಸುಮಾರು 30 ಸಾವಿರ ಡ್ರೋನ್ ಖರೀದಿ ಮಾಡಲು ಈ ಹಣವನ್ನ ವಿನಿಯೋಗಿಸುವ ಗುರಿ ಹೊಂದಿದೆ.

ಉಕ್ರೇನ್‌ನಲ್ಲಿ ಈಗ ಬ್ಲೂಫಿಲಂ ನಿರ್ಮಾಣ ಮತ್ತು ಶೇರ್‌ ಮಾಡಿದರೆ 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುವಂತಹ ಅಪರಾಧವಾಗಿದೆ. ಕಠಿಣ ನಿಷೇಧದ ನಡುವೆಯೂ ದೇಶದಲ್ಲಿ ಈ ಅಶ್ಲೀಲ ಉದ್ಯಮವು ಭೂಗತವಾಗಿ ವರ್ಷದಿಂದ ವರ್ಷಕ್ಕೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ.

ಹೀಗಾಗಿ, ಇದನ್ನ ಸಕ್ರಮಗೊಳಿಸಿ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ಮುಂದಾಗಿದೆ. ಆದರೆ, ಅಶ್ಲೀಲ ಕಂಟೆಂಟ್‌ಗಳ ಮೂಲಕ ತಾವು ಆದಾಯ ಗಳಿಸುತ್ತಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳಲು ಸೃಷ್ಟಿಕರ್ತರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ರಷ್ಯಾ ಸೇನೆ ಸೇರ್ಪಡೆ ಸಂಚು: ರಷ್ಯಾದಲ್ಲಿ ಭಾರತೀಯನ ಬಂಧನ

ಇತ್ತ ಉಕ್ರೇನ್ ಹಣಕಾಸಿನ ಹೊಂದಾಣಿಕೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ ರಷ್ಯಾದಲ್ಲಿ ಭಾರತೀಯ ಯುವಕನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಉತ್ತರ ಪ್ರದೇಶದ ನೋಯಿಡಾ ಮೂಲದ ಖಾಸಗಿ ಕಂಪನಿಯೊಂದರ ಯೋಜನೆಯ ಭಾಗವಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ತೆರಳಿದ್ದ ಭಾರತೀಯ ಪ್ರಜೆ ಚಂದನ್ ಗುಪ್ತಾ ಅವರನ್ನ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಒಂದರ ಗಾಜನ್ನ ಒಡೆದು ಹಾಕಿದ್ದಾರೆ ಎಂಬ ಆರೋಪದ ಮೇಲೆ ಈತನನ್ನ ಬಂಧಿಸಲಾಗಿದೆ. ಆದರೆ, ರಷ್ಯಾದಲ್ಲಿ ಭಾರತೀಯನ ಬಂಧನವಾಗಿರುವ ಹಿಂದಿನ ಅಸಲಿ ಕಾರಣವೇ ಬೇರೆ ಎಂದು ಚಂದನ್ ಗುಪ್ತಾ ಅವರ ಪತ್ನಿ ಸ್ನೇಹಾ ಗುಪ್ತಾ ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿ ಮೋದಿ ಮೊರೆ ಹೋದ ಪತ್ನಿ

"ನನ್ನ ಪತಿಯ ಮೇಲೆ ಹೊರಿಸಲಾಗಿರುವ ಆರೋಪ ಸಂಪೂರ್ಣ ಸುಳ್ಳು. ಅವರನ್ನ ಬಲವಂತವಾಗಿ ರಷ್ಯಾ ಸೇನೆಗೆ ಸೇರ್ಪಡೆಗೊಳಿಸಿ, ಉಕ್ರೇನ್ ವಿರುದ್ಧದ ಯುದ್ಧಕ್ಕೆ ತಳ್ಳುವ ದೊಡ್ಡ ಸಂಚು ರೂಪಿಸಿ ಈ ರೀತಿ ಬಂಧಿಸಲಾಗಿದೆ" ಎಂದು ಸ್ನೇಹಾ ಗುಪ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ತಮ್ಮ ಪತಿಯನ್ನು ರಕ್ಷಿಸುವಂತೆ ಕೋರಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಷ್ಯಾದಲ್ಲಿರುವ ಭಾರತೀಯ ದೂತಾವಾಸವು, ಗುಪ್ತಾರನ್ನ ತಕ್ಷಣವೇ ಬಂಧಮುಕ್ತಗೊಳಿಸುವಂತೆ ಸ್ಥಳೀಯ ಅಧಿಕಾರಿಗಳ ಬಳಿ ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿ, 'ಇದು ಸ್ಥಳೀಯ ಕಾನೂನಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯವಾಗಿದೆ. ಆದರೂ ನಾವು ಗುಪ್ತಾ ಹಾಗೂ ಅವರ ಪತ್ನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರಕ್ಕೆ ಯತ್ನಿಸುತ್ತಿದ್ದೇವೆ' ಎಂದು ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+