ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೋಡಿದ ಹಳ್ಳಕ್ಕೆ ಬಿದ್ದ ಉಕ್ರೇನ್ ಮಿಲಿಟರಿ?
ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಭೀಕರವಾಗಿದ್ದು, ಎಲ್ಲೆಲ್ಲೂ ರಕ್ತವನ್ನೇ ಚೆಲ್ಲಾಡುವಂತೆ ಮಾಡಿದೆ. ಹೀಗೆ ರಷ್ಯಾ & ಉಕ್ರೇನ್ ರಣಭೀಕರ ಕಾಳಗ ದಿನದಿಂದ ದಿನಕ್ಕೆ, ಭಯಾನಕ ಸ್ವರೂಪ ಪಡೆಯುತ್ತಿದೆ. ಹೀಗಾಗಿ ಕೋಟ್ಯಂತರ ಜನರ ಬದುಕು ಕೂಡ ನಲುಗಿ ಹೋಗಿದ್ದು, ಉಕ್ರೇನ್ ಮಿಲಿಟರಿ ರಷ್ಯಾ ವಿರುದ್ಧ ರಿವೇಂಜ್ ತೆಗೆದುಕೊಳ್ಳಲು ಕಾಯುತ್ತಿತ್ತು. ಹೀಗಿದ್ದಾಗಲೇ ರಷ್ಯಾ ಗಡಿಯ ಒಳಗೆ ನುಗ್ಗಿದ್ದ ಉಕ್ರೇನ್ ಸೈನಿಕರ ಪರಿಸ್ಥಿತಿ ಈಗ ಏನಾಗಿದೆ? ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೋಡಿದ ಹಳ್ಳಕ್ಕೆ ಬಿತ್ತಾ ಉಕ್ರೇನ್ ಮಿಲಿಟರಿ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.
ಕೆಲವು ದಿನಗಳಿಂದ ಉಕ್ರೇನ್ ಸೇನೆ ರಷ್ಯಾ ಗಡಿಯ ಒಳಗೆ ನುಗ್ಗಿರುವ ವಿಚಾರ ದೊಡ್ಡದಾಗಿ ಸದ್ದು ಮಾಡುತ್ತಿತ್ತು. ಇದರ ಜೊತೆಗೆ ರಷ್ಯಾ ಗಡಿ ಭಾಗದಲ್ಲಿ ಇರುವ ಹಳ್ಳಿಗಳ ಜನರನ್ನೆಲ್ಲ ಗುಳೆ ಎಬ್ಬಿಸಿ, ಬೇರೆ ಕಡೆಗೆ ಕರೆದೊಯ್ದ ವಿಚಾರ ಸಂಚಲನ ಸೃಷ್ಟಿ ಮಾಡಿತ್ತು. ಯಾಕಂದ್ರೆ ರಷ್ಯಾ ಗಡಿಯ ಒಳಗೆ ನುಗ್ಗಿದ್ದ ಉಕ್ರೇನ್ ಸೈನಿಕರು ಅಲ್ಲೇ ತಮ್ಮ ಹೊಸ ಕಚೇರಿ & ಅಗತ್ಯ ಸೌಲಭ್ಯಗಳನ್ನ ಸ್ಥಾಪನೆ ಮಾಡಿದ್ದಾರೆ ಎಂಬ ಸುದ್ದಿ ದೊಡ್ಡದಾಗಿ ಹಬ್ಬಿತ್ತು. ಇದೆಲ್ಲ ಸತ್ಯ, ಆದರೆ ವ್ಲಾದಿಮಿರ್ ಪುಟಿನ್ ವಿರುದ್ಧ & ರಷ್ಯಾ ವಿರುದ್ಧ ದಾಳಿ ಮಾಡುತ್ತಿದ್ದೇವೆ ಎನ್ನುವಂತೆ ರಷ್ಯಾ ಒಳಗೆ ನುಗ್ಗಿದ್ದ ಇವರಿಗೆಲ್ಲಾ ವ್ಲಾದಿಮಿರ್ ಪುಟಿನ್ & ತಂಡ ತೋಡಿದ್ದ ಹಳ್ಳ ಗೊತ್ತೇ ಆಗಲಿಲ್ಲ!

ಪುಟಿನ್ ತೋಡಿದ ಹಳ್ಳದಲ್ಲಿ ಉಕ್ರೇನ್?
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ತಮ್ಮ ಸೈನಿಕರು ರಷ್ಯಾ ಒಳಗೆ ನುಗ್ಗಿ ದಾಳಿ ಮಾಡ್ತಿದ್ದಾರೆ ಅಂತಾ ಸಿಕ್ಕಾಪಟ್ಟೆ ಸಂತಸ ಹಂಚಿಕೊಂಡಿದ್ದರು. ಅಲ್ಲದೆ ಈ ವಿಚಾರವಾಗಿ ರಷ್ಯಾ ವಿರುದ್ಧ ವಾರ್ನಿಂಗ್ ಕೊಡುವುದು, ಜೊತೆಗೆ ವಾಗ್ದಾಳಿ ನಡೆಸುವುದು ಕೂಡ ನಡೆಯುತ್ತಿತ್ತು. ಹೀಗಾಗಿ ಎಲ್ಲಾ ಕಡೆಯೂ ಈ ಸುದ್ದಿ ಹಬ್ಬಿತ್ತು. ಇಷ್ಟೆಲ್ಲದರ ನಡುವೆ ಉಕ್ರೇನ್ ಸೈನಿಕರು ರಷ್ಯಾ ಗಡಿ ಒಳಗೆ ಸುಲಭವಾಗಿ ನುಗ್ಗಿ ಹೋಗಲು ಹೇಗೆ ಸಾಧ್ಯವಾಯಿತು? ಎಂಬ ಅಸಲಿ ಸುದ್ದಿ ಇದೀಗ ಬಯಲಾಗಿದೆ.
ಪುಟಿನ್ ರಣತಂತ್ರಕ್ಕೆ ಉಕ್ರೇನ್ ಢಮಾರ್?
ಉಕ್ರೇನ್ & ರಷ್ಯಾ ಯುದ್ಧ ಶುರುವಾಗಿ 2 ವರ್ಷದ ನಂತರ ಇದೇ ಮೊದಲ ಬಾರಿ ಉಕ್ರೇನ್ ಅಬ್ಬರ ತೋರುತ್ತಿತ್ತು. ಅದಕ್ಕೂ ಮೊದಲು ರಷ್ಯಾ ಸೇನೆಯ ಆರ್ಭಟಕ್ಕೆ ಉಕ್ರೇನ್ ಸೇನೆಯು ಸೇರಿದಂತೆ ಇಡೀ ಉಕ್ರೇನ್ ನಲುಗಿ ಹೋಗಿತ್ತು. ಆದರೆ ಈಗ ಉಕ್ರೇನ್ ಗೆಲ್ಲುತ್ತಿರುವುದು ಕೂಡ ನಿಜವಾದ ಗೆಲುವು ಆಗಿರಲಿಲ್ಲ, ಸ್ವತಃ ರಷ್ಯಾ ಅಧ್ಯಕ್ಷರೇ ರಚಿಸಿದ್ದ ಚಕ್ರವ್ಯೂಹವೇ ಆಗಿತ್ತು! ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ತಂಡ ಈ ಬಗ್ಗೆ ಒಂದು ದೊಡ್ಡ ಚಕ್ರವ್ಯೂಹ ರಚನೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಅದು ಹೇಗಪ್ಪಾ ಅಂದ್ರೆ ಸುಲಭವಾಗಿ ಉಕ್ರೇನ್‌ನ ಸೈನಿಕರಿಗೆ ರಷ್ಯಾ ಗಡಿ ಒಳಗೆ ನುಗ್ಗಲು ಮೊದಲಿಗೆ ಅನುವು ಮಾಡಿಕೊಡುವುದು. ಹೀಗೆ ಒಳಗೆ ಬರುವ ಉಕ್ರೇನ್ ಸೈನಿಕರನ್ನ ಆ ನಂತರ ಟಾರ್ಗೆಟ್ ಮಾಡಿ ಹತ್ಯೆ ಮಾಡುವುದು.
ಈ ರೀತಿಯಾಗಿ ಉಕ್ರೇನ್ ಮಿಲಿಟರಿಗೆ ರಷ್ಯಾ ತೋಡಿದ್ದ ಗುಂಡಿ ವರ್ಕೌಟ್ ಆಗಿದ್ದು, ಈಗಾಗಲೇ ಉಕ್ರೇನ್ ಕಡೆಯಿಂದ ಸಾವಿರಾರು ಸೈನಿಕರು ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ಮತ್ತೊಂದು ಕಡೆ ರಷ್ಯಾ ಗಡಿಯಿಂದ ಮುಂದೆ ನುಗ್ಗುವುದು ಹೇಗೆ? ಅನ್ನೋದೆ ಉಕ್ರೇನ್ ಸೈನಿಕರಿಗೆ ಈಗ ಗೊತ್ತಾಗುತ್ತಿಲ್ಲ. ಅದು ಬಿಡಿ ಉಕ್ರೇನ್ ಮಿಲಿಟರಿ ವಿರುದ್ಧ ರಷ್ಯಾ ತೋಡಿರುವ ಹಳ್ಳ ಹೇಗೆ ಇದೆ ಅಂದ್ರೆ, ವಾಪಸ್ ಹೋಗುವುದಕ್ಕೆ ಕೂಡ ಉಕ್ರೇನ್ ಸೈನಿಕರಿಗೆ ಈಗ ದಾರಿ ಇಲ್ಲವಾಗಿದೆ!












Click it and Unblock the Notifications