ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ F-16 ಉಡುಗೊರೆ?
ರಷ್ಯಾ ವಿರುದ್ಧ ಸೋತು ಸುಣ್ಣವಾಗಿರುವ ಉಕ್ರೇನ್‌ಗೆ ಸಹಾಯ ಮಾಡಲು ಇದೀಗ 'ನ್ಯಾಟೋ' ಸ್ನೇಹಿತರು ಮುಂದೆ ಬಂದಿದ್ದಾರೆ. ಅದರಲ್ಲೂ ಖಾರ್ಕೀವ್ ಮೇಲೆ ರಷ್ಯಾ ಭಯಾನಕ ದಾಳಿ ಮಾಡುತ್ತಿರುವ ಸಮಯದಲ್ಲೇ, ಭರ್ಜರಿ ಉಡುಗೊರೆ ಒಂದು ಸಿದ್ಧವಾಗಿದೆ. ಅಕಸ್ಮಾತ್ ಈಗ ಉಕ್ರೇನ್‌ಗೆ ಈ ಅಸ್ತ್ರಗಳು ಸಿಕ್ಕರೆ ಯುದ್ಧದ ಗತಿಯೇ ಬದಲಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಹೌದು, ಉಕ್ರೇನ್ ವಿರುದ್ಧ ರಷ್ಯಾ ಭೀಕರ ದಾಳಿ ಮಾಡುತ್ತಿದೆ. ಅದರಲ್ಲೂ ರಷ್ಯಾ ದಾಳಿಗೆ ಈಗಾಗಲೇ ಉಕ್ರೇನ್ ಕಂಗೆಟ್ಟು ಹೋಗಿದೆ. ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ, ಭಯ & ಆತಂಕ ಉಕ್ರೇನ್ ಜನರಲ್ಲಿ ಶುರುವಾಗಿದೆ. ಹೀಗಿದ್ದಾಗಲೇ ಜಗತ್ತಿನ ಅತ್ಯಂತ ಶಕ್ತಿ ಭರಿತ ಯುದ್ಧ ವಿಮಾನಗಳು ಎಂದು ಗುರುತಿಸುವ, ಎಫ್-16 (F-16) ಫೈಟರ್ ಜೆಟ್‌ಗಳನ್ನ ಇದೀಗ ಉಕ್ರೇನ್‌ಗೆ ಉಡುಗೊರೆಯಾಗಿ ನೀಡಲು 'ನ್ಯಾಟೋ' ಮಿತ್ರ ರಾಷ್ಟ್ರಗಳು ಸಿದ್ಧತೆಯನ್ನ ನಡೆಸಿವೆ. ಈ ಮೂಲಕ ಉಕ್ರೇನ್‌ಗೆ ಈ ಅಸ್ತ್ರಗಳು ಸಿಕ್ಕರೆ ನೆಮ್ಮದಿ ಸಿಗುವ ನಿರೀಕ್ಷೆ ಇದೆ.

ವಿಶ್ವಸಂಸ್ಥೆ ಕೂಡ ಸೋತು ಹೋಗಿದೆ
ರಷ್ಯಾ & ಉಕ್ರೇನ್ ಇಬ್ಬರೂ ಒಬ್ಬರು ಮತ್ತೊಬ್ಬರನ್ನ ನಾಶ ಮಾಡುವ ಹಂತಕ್ಕೆ ಬಂದಿದ್ದಾರೆ. 2 ವರ್ಷಗಳ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗೆ ಪರದಾಟ ಕೂಡ ಜಾಸ್ತಿ ಆಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋದೇ ಗೊತ್ತಾಗ್ತಿಲ್ಲ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಿ ಸೋತು ಹೋಗಿದೆ.
ರಷ್ಯಾ ವಿನಾಶಕಾರಿ ಅಸ್ತ್ರ ಬಳಸುತ್ತಾ?
ಇನ್ನು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಕೆಂಡವಾಗಲು ಬಲವಾದ ಕಾರಣವೂ ಇದ್ದು, ಯಾವಾಗ ಅಮೆರಿಕ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುತ್ತಿತ್ತೋ ಆಗಲೇ ಉಕ್ರೇನ್ ಸೇನೆ ಗ್ರಹಚಾರ ಕೆಟ್ಟಿತ್ತು. ಇದೀಗ ನೇರವಾಗಿ ಉಕ್ರೇನ್ ಬೆನ್ನಿಗೆ ನಿಲ್ಲಲು ಅಮೆರಿಕ & ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ಸಿದ್ಧವಾಗಿರುವುದು ಪರಿಸ್ಥಿತಿ ಮತ್ತೆ ಕೈಮೀರುವಂತೆ ಮಾಡಿದೆ. ಎಫ್-16 ವಿಮಾನದ ಎಂಟ್ರಿ ಆಗಿದ್ದೇ ನಿಜವಾದರೆ ರಷ್ಯಾ ತನ್ನಲ್ಲಿರುವ ಮತ್ತಷ್ಟು ವಿನಾಶಕಾರಿ ಅಸ್ತ್ರಗಳನ್ನ ಈಗ ಹೊರತೆಗೆಯುವ ಸಾಧ್ಯತೆ ಇದೆ.

ಒಟ್ನಲ್ಲಿ ರಷ್ಯಾ ಕೆಂಗಣ್ಣಿಗೆ ಗುರಿಯಾಗಿ ನರಳಿರುವ ಉಕ್ರೇನ್ ಈಗ ಜೀವ ಉಳಿಸಿಕೊಳ್ಳಲು ಕೂಡ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಉಕ್ರೇನ್‌ನ ಪ್ರಮುಖ ನಗರ ಖಾರ್ಕಿವ್ ನಗರದ ಮೇಲೆ ರಷ್ಯಾ ಸೇನೆ ಕಳೆದ 2 ವಾರಗಳಿಂದ ನಿರಂತರ ದಾಳಿ ಮಾಡುತ್ತಿದ್ದು, ಇಡೀ ಉಕ್ರೇನ್ ಅಕ್ಷರಶಃ ನರಕವಾಗಿ ಬದಲಾಗಿದೆ. ಹೀಗಾಗಿ ಭವಿಷ್ಯದ ಬಗ್ಗೆ ಉಕ್ರೇನ್ ಪ್ರಜೆಗಳಿಗೆ ಚಿಂತೆ ಶುರುವಾಗಿದೆ.












Click it and Unblock the Notifications