ರಷ್ಯಾ ಕೊಡುತ್ತಿರುವ ಒಂದೊಂದು ಏಟಿಗೆ ನಲುಗಿ ಹೋದ ಉಕ್ರೇನ್!
ರಷ್ಯಾ ಕೆಂಗಣ್ಣಿಗೆ ಗುರಿಯಾಗಿ ನರಳಿರುವ ಉಕ್ರೇನ್ ಈಗ ಜೀವ ಉಳಿಸಿಕೊಳ್ಳಲು ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಉಕ್ರೇನ್‌ನ ಪ್ರಮುಖ ನಗರ ಖಾರ್ಕಿವ್ ನಗರದ ಮೇಲೆ ರಷ್ಯಾ ಕಳೆದ 2 ವಾರಗಳಿಂದ ನಿರಂತರವಾಗಿ ದಾಳಿ ಮಾಡುತ್ತಿದ್ದು, ಇದೀಗ ರಷ್ಯಾ ದಾಳಿಗೆ ಜೀವ ಬಿಟ್ಟವರ ಸಂಖ್ಯೆ ಏರಿಕೆ ಕಂಡಿದೆ.
ಯುದ್ಧ ಬೇಡ ಬೇಡ ಅಂತಾ ಎಷ್ಟೇ ತಡೆ ಹಾಕಿದರೂ ಯುದ್ಧಗಳು ಮಾತ್ರ ನಡೆಯುತ್ತಲೇ ಇವೆ. ಯುದ್ಧದ ರಕ್ತದಾಹಕ್ಕೆ ಕೋಟ್ಯಂತರ ಅಮಾಯಕರ ಜೀವ ಬಲಿಯಾಗುತ್ತಿದ್ದರು, ಅಧಿಕಾರದಲ್ಲಿ ಇರುವ ಅಹಂಕಾರಿ ನಾಯಕರು ಮಾತ್ರ ಯುದ್ಧ ನಿಲ್ಲಿಸಲು ತಯಾರಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಯುರೋಪ್ ಖಂಡ ನಲುಗಿ ಹೋಗಿದೆ. ಆದ್ರೂ ಯುದ್ಧ ನಿಲ್ಲಿಸಲು ರಷ್ಯಾ ತಯಾರಿಲ್ಲ, ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಮತ್ತೊಂದು ಕಡೆ ಉಕ್ರೇನ್‌ನ ಖಾರ್ಕಿವ್ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 14 ಕ್ಕೆ ಏರಿಕೆ ಆಗಿದೆ.

ರಷ್ಯಾ ಗಡಿಯಿಂದ 25 ಕಿ.ಮೀ. ದೂರ
2 ಲಕ್ಷ 50 ಸಾವಿರ ಜನ ವಾಸ ಇರುವ ಹಾರ್ಕಿವ್ & ಸುಮಿ ನಗರಗಳು ರಷ್ಯಾ ಗಡಿಯಿಂದ ಕೇವಲ 25 ಕಿಲೋ ಮೀಟರ್ ದೂರದಲ್ಲಿ ಇವೆ. ಹೀಗಾಗಿ, ರಷ್ಯಾ ಸೇನೆ ಈ ಪ್ರದೇಶಗಳ ತೀವ್ರವಾಗಿ ಮೇಲೆ ದಾಳಿ ಮಾಡುತ್ತಿದ್ದು. ನೋಡ ನೋಡುತ್ತಲೇ ಉಕ್ರೇನ್ ದೇಶದ ಅತಿದೊಡ್ಡ ಪ್ರಾಂತ್ಯ ರಷ್ಯಾ ಸೇನೆ ಕೈಗೆ ಸಿಗುತ್ತಿದೆ. ಹೀಗಾಗಿ ಭಯ & ಆತಂಕದಲ್ಲೇ ಉಕ್ರೇನ್ ಪ್ರಜೆಗಳು ದಿನ ದೂಡುವ ಸ್ಥಿತಿ ಬಂದಿದೆ. ಮತ್ತೊಂದ್ಕಡೆ ಉಕ್ರೇನ್ ಉತ್ತರ ಗಡಿಯಲ್ಲಿ, ರಷ್ಯಾ ಆಕ್ರಮಣ ತೀವ್ರಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಯ ವ್ಯಕ್ತಪಡಿಸಿ ಸಹಾಯಕ್ಕೆ ಮೊರೆ ಇಟ್ಟಿದ್ದಾರೆ.
ಜಗತ್ತಿನಾದ್ಯಂತ ಆತಂಕದ ವಾತಾವರಣ
2022ರಲ್ಲಿ ಉಕ್ರೇನ್ & ರಷ್ಯಾ ನಡುವೆ ಯುದ್ಧ ಶುರುವಾದ ನಂತರ ಜಾಗತಿಕ ಮಟ್ಟದಲ್ಲಿ ರಕ್ಷಣಾ ಬಜೆಟ್ ಹೆಚ್ಚಾಗುತ್ತಿದೆ. ಶ್ರೀಮಂತ ದೇಶಗಳು ತಮ್ಮ ಸೇನಾ ಖರ್ಚಿಗೆ ಹೆಚ್ಚಾಗಿ ಹಣ ಬಳಸುತ್ತಿವೆ. ಈ ಮೂಲಕ ಕಳೆದವರ್ಷ ರಕ್ಷಣಾ ಬಜೆಟ್ ಸುಮಾರು 2.44 ಟ್ರಿಲಿಯನ್ ಡಾಲರ್‌ಗೆ ತಲುಪಿದ್ದು, ಮತ್ತೊಂದು ಕಡೆ ಹೀಗೆ ರಕ್ಷಣಾ ಬಜೆಟ್ ಹೆಚ್ಚಾದಂತೆ ಭಯ ಆವರಿಸಿ ಯುದ್ಧ ಭೀತಿ ಹೆಚ್ಚಾಗಿದೆ. ಹೀಗಿದ್ದರೂ ತಿಕ್ಕಾಟ ನಿಲ್ಲಿಸಲು ರಷ್ಯಾ ಸಜ್ಜಾಗಿಲ್ಲ, ಮತ್ತೊಂದು ಕಡೆ ಉಕ್ರೇನ್ ಕೂಡ ತನ್ನ ಅಹಂಕಾರ ಬಿಟ್ಟು ಮಾತುಕತೆಗೆ ಮುಂದೆ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ಉಕ್ರೇನ್ & ರಷ್ಯಾ ನಡುವಿನ ಯುದ್ಧ ನಿಲ್ಲುವ ತನಕ ಜಾಗತಿಕ ಮಟ್ಟದಲ್ಲಿ ಶಾಂತಿ ಮೂಡುವುದು ಕಷ್ಟ ಕಷ್ಟ ಎನ್ನಲಾಗುತ್ತಿದೆ. ಇದು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಈ ಯುದ್ಧ ಇನ್ನಷ್ಟು ದೊಡ್ಡ ತಿರುವು ತಿರುವು ಪಡೆಯುವ ಲಕ್ಷಣ ಕೂಡ ಗೋಚರಿಸುತ್ತಿದೆ. ಈ ನಡುವೆ ರಷ್ಯಾ ಕೂಡ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದೆ.












Click it and Unblock the Notifications