Ukraine Cold Wave: ಭೀಕರ ಚಳಿಯ ನಡುವೆ ಕೈಕೊಟ್ಟ ಕರೆಂಟ್, ನರಳಾಡುತ್ತಿರುವ ಕೋಟಿ ಕೋಟಿ ಉಕ್ರೇನ್ ಪ್ರಜೆಗಳು
ಉಕ್ರೇನ್ ನೆಲದಲ್ಲಿ ಒಂದಲ್ಲ ಒಂದು ಸಮಸ್ಯೆ ಹಾಗೂ ಕಿರಿಕ್ ಎದುರಾಗುತ್ತಲೇ ಇದೆ. ಹೀಗಿದ್ದಾಗ ರಷ್ಯಾ ಕೂಡ ದಾಳಿ ಮಾಡುವುದನ್ನು ನಿಲ್ಲಿಸುತ್ತಿಲ್ಲ, ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಈಗ ಘೋರ ಹಂತಕ್ಕೆ ಬಂದು ನಿಂತಿದೆ. ಇನ್ನೊಂದು ಕಡೆ ಭೀಕರ ಚಳಿ ಯುದ್ಧವನ್ನೂ ಮೀರಿಸುವ ಹಂತಕ್ಕೆ ಕಾಟ ಕೊಡುತ್ತಿದ್ದು, -20 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಜನರು ಹೊರಗೆ ಬರಲು ಆಗದೆ ಒದ್ದಾಡುತ್ತಿದ್ದಾರೆ. ಇನ್ನು ಈ ಚಳಿಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಬೆಚ್ಚಗೆ ಇರಬೇಕು ಅಂತಾ ಯೋಚಿಸಿದರೆ, ಉಕ್ರೇನ್ ದೇಶದ ಭಾಗಶಃ ಪ್ರದೇಶಗಳಲ್ಲಿ ಕರೆಂಟ್ ಕೈಕೊಟ್ಟಿದೆ. ಇದೇ ಕಾರಣಕ್ಕೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುವ ಆತಂಕ ಆವರಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಇನ್ನೇನು ಶಾಂತಿ ಮಾತುಕತೆ ಅಂತಿಮ ಹಂತಕ್ಕೆ ಬರುತ್ತಿದ್ದು, ಈ ಎರಡೂ ದೇಶಗಳ ನಡುವೆ ಒಪ್ಪಂದ ಮಾಡಿಸಿ ಸೈಲೆಂಟ್ ಆಗಿ ಜಾಗ ಖಾಲಿ ಮಾಡಲು ಅಮೆರಿಕ ಕೂಡ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹೀಗಿದ್ದಾಗ ದಿಢೀರ್ ರಷ್ಯಾ ನಡೆಸಿರುವ ದಾಳಿ ಪರಿಣಾಮ ಉಕ್ರೇನ್ ನೆಲದಲ್ಲಿ ಪವರ್ ಗ್ರೀಡ್ ಸಮಸ್ಯೆ ಎದುರಾಗಿದ್ದು, ಕರೆಂಟ್ ಕೈಕೊಟ್ಟಿರುವ ಆರೋಪ ಮಾಡಲಾಗುತ್ತಿದೆ. ಅದರಲ್ಲೂ ಭೀಕರ ಚಳಿಗಾಲದ ಸಮಯದಲ್ಲೇ ಈ ರೀತಿಯಾಗಿ ವಿದ್ಯುತ್ ಇಲ್ಲ ಎಂಬುದು ಭಯದ ವಾತಾವರಣ ಸೃಷ್ಟಿ ಮಾಡಿದೆ.

ಗ್ರಿಡ್ ವೈಫಲ್ಯದಿಂದ ಕೈಕೊಟ್ಟ ಕರೆಂಟ್
ಉಕ್ರೇನ್ & ನೆರೆಯ ಮೊಲ್ಡೊವಾ ಭಾಗದಲ್ಲಿ ವಿದ್ಯುತ್ ಸರಬರಾಜು ದಿಢೀರ್ ಸ್ಥಗಿತವಾಗಿ, ದೊಡ್ಡ ಸಮಸ್ಯೆ ಎದುರಾಗಿದೆ. ವಿದ್ಯುತ್ ಮಾರ್ಗಗಳಲ್ಲಿ ತಾಂತ್ರಿಕ ವೈಫಲ್ಯ ಕಾರಣಕ್ಕೆ ಹೀಗೆ ಆಗಿದೆ ಎಂಬ ಮಾಹಿತಿ ಇದೆ. ಆದರೆ ಕಳೆದ ಕೆಲವು ವಾರಗಳಿಂದ ರಷ್ಯಾ ಸೇನೆ ನಿರಂತರವಾಗಿ ದಾಳಿ ಮಾಡಿದ್ದ ಪರಿಣಾಮ ವಿದ್ಯುತ್ ವ್ಯವಸ್ಥೆ ಹಾಳಾಗಿ ಹೋಗಿತ್ತು. ಇದೀಗ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಉಕ್ರೇನ್ ಮತ್ತೆ ವಿದ್ಯುತ್ ಇಲ್ಲದೆ ನರಳುವಂತೆ ಆಗಿದೆ. ಗ್ರಿಡ್ ವೈಫಲ್ಯದಿಂದ, ರಾಜಧಾನಿ ಕೀವ್ ಸೇರಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ ಉಕ್ರೇನ್ ನಿವಾಸಿಗಳು ಅನಿವಾರ್ಯವಾಗಿ ವಿದ್ಯುತ್ ಲಭ್ಯ ಇರುವ ಕಡೆಗೆ ತಮ್ಮ ನಿವಾಸ ಶಿಫ್ಟ್ ಮಾಡಲು ಪರದಾಡುತ್ತಿದ್ದಾರೆ.
ಒಂದು ವಾರಗಳ ಕದನ ವಿರಾಮ?
ಉಕ್ರೇನ್ ಇಂಧನ ಸಚಿವ ಡೆನಿಸ್ ಮಾಹಿತಿ ನೀಡಿ, ಕನಿಷ್ಠ 3 ಪ್ರದೇಶ ಮತ್ತು ಕೀವ್ ತುರ್ತು ವಿದ್ಯುತ್ ಕಡಿತದ ಹಿನ್ನೆಲೆ ಸಮಸ್ಯೆಗೆ ತುತ್ತಾಗಿದೆ. ವಿದ್ಯುತ್ ಸರಬರಾಜು ಸರಿ ಮಾಡಲು ಈಗ ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೇ ವಿದ್ಯುತ್ ಇಲ್ಲದ ಹಿನ್ನೆಲೆ ಉಕ್ರೇನ್ ದೇಶದ ಮೆಟ್ರೋ ಸೇವೆಯೂ ಸ್ಥಗಿತವಾಗಿದ್ದು, ಪ್ರಯಾಣಿಕರು ಪ್ರತಿನಿತ್ಯ ಕೂಡ ಪರದಾಡುತ್ತಿದ್ದಾರೆ. ಹಾಗೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಪ್ರಜೆಗಳಿಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದು, ರಷ್ಯಾ ಶೀಘ್ರವೇ ಒಂದು ವಾರದ ಕದನ ವಿರಾಮವನ್ನ ಘೋಷಣೆ ಮಾಡಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ದಟ್ಟವಾಗಿದೆ.
4 ವರ್ಷ ತುಂಬುತ್ತಿದೆ ಯುದ್ಧಕ್ಕೆ
ರಷ್ಯಾ ಮತ್ತು ಉಕ್ರೇನ್ ನಡುವೆ ಶುರುವಾಗಿರುವ ಭೀಕರ ಕಾಳಗಕ್ಕೆ ಇನ್ನೇನು 4 ವರ್ಷ ತುಂಬುತ್ತಿದೆ. 2022 ಫೆಬ್ರವರಿ 24 ಗುರುವಾರ ಈ ಭೀಕರ ಯುದ್ಧ ಶುರುವಾಗಿತ್ತು, ಕೆಲವೇ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ್ದ ಯುದ್ಧ ಈಗಾಗಲೇ 4ನೇ ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಪಡೆಯಲು ಸಜ್ಜಾಗಿದೆ. ಇಂತಹ ಸಮಯದಲ್ಲಿ ನಾನಾ ಸಮಸ್ಯೆಗಳು ಉಕ್ರೇನ್ ಜನರನ್ನು ಕಾಡುತ್ತಾ ಇವೆ.












Click it and Unblock the Notifications