ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಇನ್ನೊಂದು ಹೆಜ್ಜೆ, ಇಲ್ಲಿದೆ ಮಹತ್ವದ ಬೆಳವಣಿಗೆ | Ukraine And Russia
ಯುದ್ಧ.. ಯುದ್ಧ.. ಯುರೋಪ್ ನೆಲದಲ್ಲಿ ಬರೀ ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಚಾರವೇ ಪ್ರಸ್ತಾಪ ಆಗುತ್ತಿದೆ. ಏಕೆಂದರೆ 2ನೇ ಮಹಾಯುದ್ಧ ಮುಗಿದ ನಂತರ ಯುರೋಪ್ ಕಂಡಿರುವ ಅತಿ ಭಯಾನಕ ಸಂಘರ್ಷ ಇದಾಗಿದೆ. ಮತ್ತೊಂದು ಕಡೆ ಈ ಯುದ್ಧವನ್ನು ನಿಲ್ಲಿಸಿ, ಯುರೋಪ್‌ನಲ್ಲಿ ಶಾಂತಿ ಸ್ಥಾಪನೆ ಮಾಡಬೇಕು ಎಂಬ ಜವಾಬ್ದಾರಿ ಅಮೆರಿಕ ಸೇರಿದಂತೆ ಹಲವು ದೇಶಗಳ ಮೇಲೆ ಈಗ ಇದೆ. ಈಗ ಶಾಂತಿ ಸ್ಥಾಪನೆ ಮಾಡದೇ ಇದ್ದರೆ ಭವಿಷ್ಯದಲ್ಲಿ ಇನ್ನಷ್ಟು ಕಂಟಕ ಎದುರಾಗುವ ಭಯ ಕಾಡುತ್ತಿದೆ.
ಇದೇ ಕಾರಣಗಳಿಗೆ ಖುದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಖಾಡಕ್ಕೆ ಎಂಟ್ರಿ ಕೊಟ್ಟು, ರಷ್ಯಾ ಹಾಗೂ ಉಕ್ರೇನ್ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ. ಇದರ ಪ್ರತಿಫಲವಾಗಿ ಈಗ ಅಬುಧಾಬಿಯಲ್ಲಿ ಅಮೆರಿಕ ನೇತೃತ್ವದ ಮಾತುಕತೆಯ 2ನೇ ದಿನ ಯಶಸ್ವಿಯಾಗಿ ಮುಗಿದಿದೆ. ಅದರಲ್ಲೂ ಎರಡೂ ಕಡೆಯಿಂದ ಕೈದಿಗಳ ವಿನಿಮಯಕ್ಕೆ ಕೂಡ ಒಪ್ಪಿಗೆ ಸೂಚಿಸಲಾಗಿದ್ದು, ಯುದ್ಧ ನಿಲ್ಲುವ ಬಗ್ಗೆ ಮತ್ತಷ್ಟು ಭರವಸೆ ಮೂಡಿದೆ.

157 ಯುದ್ಧ ಕೈದಿಗಳ ವಿನಿಮಯ
ರಷ್ಯಾ ಹಾಗೂ ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 4 ವರ್ಷ ತುಂಬುತ್ತಿದ್ದು, ಇದೇ ಸಮಯಕ್ಕೆ ಸರಿಯಾಗಿ ಎರಡೂ ಕಡೆ ಸಹಸ್ರಾರು ಯುದ್ಧ ಕೈದಿಗಳು ಒದ್ದಾಡುತ್ತಿದ್ದಾರೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಇಂದು ಮಹತ್ವದ ಒಪ್ಪಂದಕ್ಕೆ ಬಂದಿದ್ದು, ಪರಸ್ಪರ 157 ಯುದ್ಧ ಕೈದಿಗಳ ವಿನಿಮಯಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸೇನೆಗಾಗಿ ದುಡಿಯುತ್ತಾ ಎದುರಾಳಿ ಪಡೆಗೆ ಸಿಕ್ಕು ಜೈಲಿಗೆ ಸೇರಿದ್ದವರಿಗೆ ಈಗ ಹೊಸ ಹುಮ್ಮಸ್ಸು ಮೂಡಿದಂತೆ ಆಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ವೇಳೆ ಅಮೆರಿಕ ಮಹತ್ವದ ಪಾತ್ರವನ್ನು ವಹಿಸುತ್ತಿದೆ.
ಜಗತ್ತಿಗೇ ಕಂಟಕವಾಗುತ್ತಿದೆ ಈ ಯುದ್ಧ
ಯುರೋಪ್ ಮಾತ್ರವಲ್ಲ ಇಡೀ ಜಗತ್ತಿಗೇ ರಷ್ಯಾ & ಉಕ್ರೇನ್ ಯುದ್ಧ ಕಂಟಕವಾಗಿ ಪರಿಣಮಿಸುತ್ತಿದೆ. ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಲಕ್ಷಾಂತರ ಅಮಾಯಕರು ಜೀವವನ್ನೇ ಕಳೆದುಕೊಂಡು, ಕೋಟ್ಯಂತರ ಜನರ ಜೀವನ ಬೀದಿಗೆ ಬಿದ್ದಿದೆ. ಹೀಗಾಗಿ ಆದಷ್ಟು ಬೇಗ ಈ ಯುದ್ಧಕ್ಕೆ ಬ್ರೇಕ್ ಹಾಕಬೇಕು, ಎಂಬ ಒಕ್ಕೊರಲ ಆಗ್ರಹ ಜಗತ್ತಿನಾದ್ಯಂತ ಕೇಳಿಬರುತ್ತಾ ಇದೆ. ಆದರೂ, ಯುದ್ಧ ನಿಲ್ಲಿಸಲು ಎರಡೂ ದೇಶಗಳು ಸಜ್ಜಾಗಿಲ್ಲ.
ಮತ್ತೊಂದೆಡೆ ಕೆಲ ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡಿದ್ದ ಆರೋಪ ಉಕ್ರೇನ್ ವಿರುದ್ಧ ಕೇಳಿ ಬಂದಿತ್ತು. ಹೀಗಿದ್ದಾಗ ಎಲ್ಲವನ್ನೂ ಮೀರಿ ಉಕ್ರೇನ್ ಮತ್ತು ರಷ್ಯಾ ನಡುವೆ ಸಂಧಾನ ಮಾಡಿಸಲು ಅಮೆರಿಕ ಪರದಾಡುತ್ತಿದ್ದು, ಯುದ್ಧ ಕೈದಿಗಳ ವಿನಿಮಯದ ಮೂಲಕ ಹೊಸ ಹೆಜ್ಜೆ ಇರಿಸಿವೆ ಎರಡೂ ದೇಶಗಳು. ಇದೇ ರೀತಿ ಸಂಧಾನ ಮಾತುಕತೆ ಯಶಸ್ವಿಯಾಗುತ್ತಾ ಹೋದರೆ, ಇನ್ನು ಕೆಲವೇ ದಿನಗಳಲ್ಲಿ ರಷ್ಯಾ ಮತ್ತು ಉಕ್ರೇನ್ ತಿಕ್ಕಾಟ ನಿಲ್ಲಿಸಿ ನೆಮ್ಮದಿಯಾಗಿ ಬದುಕುವ ಎಲ್ಲಾ ಲಕ್ಷಣ ಈಗ ಗೋಚರಿಸುತ್ತಿದೆ ಈಗ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications