Ukraine War: ಅಮೆರಿಕ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಉಕ್ರೇನ್!
ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ, ಹೇಗಾದರೂ ಮಾಡಿ ರಷ್ಯಾ & ಉಕ್ರೇನ್ ಯುದ್ಧವನ್ನು ನಿಲ್ಲಿಸಬೇಕು ಎಂಬ ಗುರಿ ಹಾಕಿಕೊಂಡಿರುವ ಅಮೆರಿಕ ಇದೀಗ ಮಹತ್ವದ ಯಶಸ್ಸು ಪಡೆದು ಮುಂದೆ ನುಗ್ಗುತ್ತಿದೆ. ಇಂತಹ ಸಮಯದಲ್ಲೇ, ಉಕ್ರೇನ್ ಕೂಡ ಅಮೆರಿಕದ ಜೊತೆ ತಗ್ಗಿ ಬಗ್ಗಿ ನಡೆಯುವ ಅಭ್ಯಾಸ ರೂಢಿಸಿಕೊಂಡಿದೆ. ಅದರಲ್ಲೂ ಅಮೆರಿಕ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಉಕ್ರೇನ್ ರಷ್ಯಾಗೆ ದೊಡ್ಡ ಆಘಾತ ನೀಡಿದೆ.
ರಷ್ಯಾ & ಉಕ್ರೇನ್ ಬಡಿದಾಡುವ ಸಮಯದಲ್ಲೇ ಇನ್ನೊಂದು ಕಡೆ ಇಸ್ರೇಲ್ & ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದ್ರೆ ಇದು ಅಮೆರಿಕ ನಾಯಕರಿಗೆ ತಲೆನೋವು ತರಿಸುವ ಸಾಧ್ಯತೆ ಇದೆ. ಯಾಕಂದ್ರೆ ಮಧ್ಯಪ್ರಾಚ್ಯ ದೇಶಗಳೆಲ್ಲಾ ಸೇರಿ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಅಲ್ಲದೆ ಗಾಜಾ ಪಟ್ಟಿಯಲ್ಲಿ ಹಿಂಸೆ ನಿಲ್ಲಬೇಕು ಎಂಬುದು ಮಧ್ಯಪ್ರಾಚ್ಯ ದೇಶಗಳ ಒತ್ತಾಯವಾಗಿದೆ. ಇಂತಹ ಸ್ಥಿತಿ ಇರುವಾಗಲೇ ಉಕ್ರೇನ್ & ಅಮೆರಿಕದ ನಡುವೆ ಈಗ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಹಾಗಾದರೆ ಏನಿದು ಒಪ್ಪಂದ? ಬನ್ನಿ ತಿಳಿಯೋಣ.

ಉಕ್ರೇನ್ & ಅಮೆರಿಕದ ಮಹತ್ವದ ಒಪ್ಪಂದ!
ಅಂದಹಾಗೆ ಉಕ್ರೇನ್ ಯುದ್ಧದ ಜ್ವಾಲೆಯು ಯುರೋಪ್ ದೇಶಕ್ಕೆ ಹಬ್ಬುತ್ತಿದೆ, ಹೆಜ್ಜೆ ಹೆಜ್ಜೆಗೂ ಪರಿಸ್ಥಿತಿ ಹಿಡಿತಕ್ಕೆ ಸಿಲುಕಿ ಯುರೋಪ್ ಒಕ್ಕೂಟದ ದೇಶಗಳು ನಲುಗುತ್ತಿವೆ. ಅಲ್ಲದೇ ಜಾಗತಿಕ ಮಟ್ಟದಲ್ಲೂ ಈ ಯುದ್ಧ ದೊಡ್ಡ ತಲೆನೋವು ತರಿಸಿದೆ. ಈ ಸಮಯದಲ್ಲಿ ಮಹತ್ವದ ಒಪ್ಪಂದ ಕೂಡ ನಡೆದಿದ್ದು, ಅಮೆರಿಕ & ಉಕ್ರೇನ್ ನಡುವೆ ನೈಸರ್ಗಿಕ ಸಂಪನ್ಮೂಲ ಬಳಕೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಉಕ್ರೇನ್ ನೆಲದಲ್ಲಿ ಅಮೆರಿಕ ಗಣಿಗಾರಿಕೆ?
ಹೌದು, ಉಕ್ರೇನ್ ದೇಶದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅದಿರುಗಳು ಇದ್ದು, ಇಡೀ ಜಗತ್ತಿನಲ್ಲೇ ಸಿಗದ ಅಮೂಲ್ಯವಾದ ಸಂಪನ್ಮೂಲ ಉಕ್ರೇನ್ ನೆಲದಲ್ಲಿ ಇದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಸಾಕಷ್ಟು ಯೋಚನೆ ಮಾಡಿ ಮಹತ್ವದ ಒಪ್ಪಂದಕ್ಕೆ ಬೇಡಿಕೆ ಇಟ್ಟಿದ್ದರು. ಆ ಮೂಲಕ ಅಮೆರಿಕ ಸಹಾಯ ಮಾಡಬೇಕು ಅಂದ್ರೆ ನೀವು ಅದಿರು ನೀಡಬೇಕು ಎಂಬ ಡಿಮ್ಯಾಂಡ್ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಬೇಡಿಕೆಯಂತೆ ಉಕ್ರೇನ್ ಒಪ್ಪಿಗೆ ಸೂಚಿಸಿದ್ದು, ಇನ್ನು ಮುಂದೆ ಅಮೆರಿಕ ಉಕ್ರೇನ್ ನೆಲದಲ್ಲಿ ಗಣಿಗಾರಿಕೆ ನಡೆಸಲು ಸಿದ್ಧತೆ ನಡೆಸಲಿದೆ. ಈ ಮೂಲಕ ಯುದ್ಧದ ಸಮಯದಲ್ಲಿ ಭಾರಿ ದೊಡ್ಡ ತಿರುವು ಕೂಡ ಸಿಕ್ಕಂತೆ ಆಗಿದ್ದು, ಆದಷ್ಟು ಬೇಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕು ಎಂಬ ಆಗ್ರಹ ಕೂಡ ಈಗ ಕೇಳಿ ಬಂದಿದೆ.












Click it and Unblock the Notifications