ಫ್ಲೋರಿಡಾ ನಂತರ, ಈಗ ತೈವಾನ್ ಗೆ ಚಂಡಮಾರುತ ಭೀತಿ

Posted By:
Subscribe to Oneindia Kannada

ತೈಪೇ (ತೈವಾನ್), ಸೆಪ್ಟೆಂಬರ್ 14: ಅಮೆರಿಕದಲ್ಲಿ ಇರ್ಮಾ ಚಂಡ ಮಾರುತವು ಪ್ಲೋರಿಡಾ ಮತ್ತಿತರ ಪ್ರಾಂತ್ಯಗಳಲ್ಲಿ ಭಾರೀ ಪ್ರಮಾಣದ ಹಾನಿ ಉಂಟು ಮಾಡಿದ ಬೆನ್ನಲ್ಲೇ ಈಗ ಟೈಫೂನ್ ಟಾಲಿಮ್ ಎಂಬ ಮತ್ತೊಂದು ಚಂಡ ಮಾರುತ ತೈವಾನ್ ದೇಶವನ್ನು ಗುರಿಯಾಗಿಸಿಕೊಂಡು ಅತಿ ಶೀಘ್ರದಲ್ಲೇ ಬಂದು ಅಪ್ಪಳಿಸಲಿದೆ ಎಂದು ಆ ದೇಶಗಳ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ಈ ಚಂಡಮಾರುತವು ತೈವಾನ್ ನ ನಂತರ ಹಾಂಕಾಂಗ್, ಚೀನಾ ಹಾಗೂ ಜಪಾನ್ ದೇಶಗಳ ಮೇಲೂ ತನ್ನ ಪ್ರಭಾವ ತೋರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

While the Caribbean Islands and Florida have been battered by Hurricane Irma in the last few days, Taiwan is gearing up for a typhoon this week.

ಟಾಲಿಮ್ ಎಂಬ ಈ ಚಂಡಮಾರುತ ಈಗಾಗಲೇ ತೈವಾನ್ ನಿಂದ 650 ಕಿ.ಮೀ.ಗಳಾಚೆಗಿನ ಸಮುದ್ರದ ಮಧ್ಯಭಾಗದಲ್ಲಿ ಎದ್ದಿದ್ದು, ಸದ್ಯದಲ್ಲೇ ತೈವಾನ್ ಭೂಭಾಗವನ್ನು ಸ್ಪರ್ಶಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಈಗಾಗಲೇ ಕೆಲ ತಿಂಗಳುಗಳಿಂದ ದ್ವೀಪ ರಾಷ್ಟ್ರವಾದ ತೈವಾನ್ ನಲ್ಲಿ ಅಗಾಧವಾಗಿ ಮಳೆ ಸುರಿದು ಜನರ ಜೀವನವನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಇದರಿಂದ ಚೇತರಿಸಿಕೊಳ್ಳುವ ಮೊದಲೇ ಈ ಟಾಲಿಮ್ ಚಂಡ ಮಾರುತದ ಭೀತಿ ಈಗ ಜನರಲ್ಲಿ ಆವರಿಸಿದೆ.

ಈಗಾಗಲೇ ಹವಾಮಾನ ತಜ್ಞರು, ಚಂಡಮಾರುತದ ರಭಸಕ್ಕೆ ತೈವಾನ್ ನ ಹಲವಾರು ಕಡೆ ಭೂ ಕುಸಿತ ಉಂಟಾಗಲಿದೆ ಎಂದು ಎಚ್ಚರಿಸಿರುವ ಹಿನ್ನೆಲೆಯಲ್ಲಿ, ಎಲ್ಲೆಡೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While the Caribbean Islands and Florida have been battered by Hurricane Irma in the last few days, Taiwan is gearing up for a typhoon this week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ