ಮಾಲಿ : ರೆಸಾರ್ಟ್ ಮೇಲೆ ದಾಳಿ, ಇಬ್ಬರನ್ನು ಕೊಂದ ಜಿಹಾದಿಗಳು

By: ವಿಕಾಸ್ ನಂಜಪ್ಪ
Subscribe to Oneindia Kannada

ಮಾಲಿ, ಜೂಣ್ 19: ಶಂಕಿತ ಜಿಹಾದಿ ಉಗ್ರರ ದಾಳಿಗೆ ಮಾಲಿ ದೇಶದ ರಾಜಧಾನಿ ನಲುಗಿದೆ. ರಾಜಧಾನಿ ಬಮಾಕೋ ಹೊರವಲಯದಲ್ಲಿರುವ ರೆಸಾರ್ಟ್ ಮೇಲೆ ಜಿಹಾದಿಗಳು ಗುಂಡಿನ ಮಳೆಗೆರೆದಿದ್ದಾರೆ. ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.

ಮೃತರ ಪೈಕಿ ಒಬ್ಬನನ್ನು ಫ್ರೆಂಚ್ ಗಬೊನೀಸ್ ನಾಗರಿಕ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಗುರುತು ಪತ್ತೆಯಾಗಬೇಕಿದೆ ಎಂದು ಮಾಲಿಯ ರಕ್ಷಣಾ ಸಚಿವಾಲಯದ ವಕ್ತಾರ ಬಾಬಾ ಸಿಸೆ ಹೇಳಿದ್ದಾರೆ.

Two killed in suspected jihadi attack at Mali capital

ಪಾಶ್ಚಿಮಾತ್ಯ ಶೈಲಿಯ ಐಷಾರಾಮಿ ರೆಸಾರ್ಟ್ ಮೇಲೆ ಮೂಲಭೂತವಾದಿಗಳ ಕಣ್ಣು ಬಿದ್ದಿದೆ. ಮಾಲಿಯ ರಾಜಧಾನಿ ಬಮಾಕೋದಲ್ಲಿರುವ ರೆಸಾರ್ಟ್ ನಲ್ಲಿದ್ದ ಉಳಿದ 32 ನಾಗರಿಕರನ್ನು ರಕ್ಷಿಸಲಾಗಿದೆ. ಭಾನುವಾರ ತಡರಾತ್ರಿ ನಡೆದ ದೊಗೊರಕೊರೊದಲ್ಲಿರುವ Le Campement Kangaba ಹೆಸರಿನ ರೆಸಾರ್ಟ್ ಮೇಲೆ ದಾಳಿ ನಡೆದಿದ್ದು, ಸಾಮಾನ್ಯವಾಗಿ ವಿದೇಶಿಯರೇ ಇಲ್ಲಿನ ಅತಿಥಿಗಳಾಗಿರುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
wo persons were killed in a suspected jihadi attack at a resort outside Mali's capital. The first victim was a French-Gabonese citizen. We are in the process of confirming the other's nationality," said security ministry spokesman Baba Cisse.
Please Wait while comments are loading...