ಈಜಿಪ್ಟ್ ಸ್ಫೋಟ: ಉಗ್ರರ ವಿಕೃತಿಗೆ ಕನ್ನಡಿ ಆ ಭೀಕರ ದೃಶ್ಯ

Posted By:
Subscribe to Oneindia Kannada

ಕೈರೋ, ನವೆಂಬರ್ 25: ಈಜಿಪ್ಟಿನ ಮಸೀದಿಯೊಂದರಲ್ಲಿ ನ.24 ರಂದು ನಡೆದ ಘಟನೆ ಮನುಕುಲವನ್ನು ತಲೆತಂಗಿಸುವಂಥದ್ದು! ಏಕೆಂದರೆ ಶಾಂತಿ ಬೇಡಿ, ಪ್ರಾರ್ಥನೆಗೆಂದು ತೆರಳಿದ್ದ 200 ಕ್ಕೂ ಹೆಚ್ಚು ಜನರು, ಮತಾಂಧರ ಹಿಂಸೆಗೆ ವಿಲವಿಲ ಒದ್ದಾಡಿ ಅಸುನೀಗಿದ್ದರು!

ಈಜಿಪ್ಟ್ ನಲ್ಲಿ ಮಸೀದಿ ಮೇಲೆ ಬಾಂಬ್, ಗುಂಡು ದಾಳಿ: ಕನಿಷ್ಠ 235 ಮಂದಿ ಸಾವು

ಮನೆಯಲ್ಲಿ ತಮಗಾಗಿ ಕಾಯುತ್ತಿದ್ದ ತಂದೆ-ತಾಯಿ, ಮಗ-ಮಗಳು, ಅಕ್ಕ-ತಂಗಿ, ಅಣ್ಣ-ತಮ್ಮ, ಬಂಧು, ಸ್ನೇಹಿತರು ಎಲ್ಲರನ್ನೂ ಕೊನೆಯ ಬಾರಿ ಎಂಬಂತೆ ನೆನಪಿಸಿಕೊಂಡು ಈ ಬದುಕಿಗೆ ವಿದಾಯ ಹೇಳಿದ್ದರು. ಸ್ವಚ್ಛ ಮನಸ್ಸಿನಿಂದ ಭಗವಂತನನ್ನು ಪ್ರಾರ್ಥಿಸುವುದಕ್ಕೆಂದು ಹೋದವರೆಲ್ಲ ಸಾಲಾಗಿ ಹೆಣವಾಗಿ ಬಿದ್ದ ದೃಶ್ಯ ಭಯೋತ್ಪಾದನೆಯ ವಿಕೃತಿಗೆ ಕನ್ನಡಿ!

ಈಜಿಪ್ಟ್ ಮಸೀದಿ ಮೇಲಿನ ಭಯಾನಕ ದಾಳಿ ಖಂಡಿಸಿದ ಮೋದಿ, ಟ್ರಂಪ್

ಭಯೋತ್ಪಾದಕರು ನಡೆಸಿದ ಬಾಂಬ್ ಮತ್ತು ಗುಂಡಿನ ದಾಳಿಗೆ ಈಜಿಪ್ಟಿನ ಮಸೀದಿಯೊಂದರಲ್ಲಿ 235 ಕ್ಕೂ ಹೆಚ್ಚು ಜನ ಮೃತರಾಗಿದ್ದಲ್ಲದೆ, ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬರ್ಬರ ಘಟನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದಾರೆ, ಮೃತರಿಗಾಗಿ ಮರುಗಿದ್ದಾರೆ.

ಇತ್ತ ಟ್ವಿಟ್ಟರ್ ನಲ್ಲಿಯೂ #EgyptMosqueAttack ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಈ ಘಟನೆಯನ್ನು ಟ್ವಿಟ್ಟಿಗರು ಖಂಡಿಸಿದ್ದಾರೆ.

ಸಾಲು ಸಾಲು ಹೆಣಗಳು!

ಈಜಿಪ್ಟ್ ನ ಈ ಮಸೀದಿಯ ತುಂಬ ಹೆಣಗಳದ್ದೇ ರಾಶಿ. ಎಲ್ಲಿ ನೋಡಿದರಲ್ಲಿ ರಕ್ತಸಿಕ್ತ ದೇಹಗಳು. ಎದುರಲ್ಲಿ ರೋದಿಸುತ್ತ ಕುಳಿತ ಆಪ್ತೇಷ್ಟರು. ಯಾರಿಗೂ, ಏನೂ ಮಾಡದ ಈ ಅಮಾಯಕ ಜೀವಗಳ ಮೇಲೆ ಆ ಉಗ್ರರಿಗೆ ಯಾಕಷ್ಟು ದ್ವೇಶ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೂ ನಿರರ್ಥಕ.

ಪ್ರಾರ್ಥನಾ ಮಂದಿರವೂ ಸುರಕ್ಷಿತವಲ್ಲ!

ಯಾವ ಜಾಗದಲ್ಲಿ ಮನುಷ್ಯ ತಾನು ಅತ್ಯಂತ ಸುರಕ್ಷಿತ ಎಂದುಕೊಂಡಿದ್ದನೋ ಅದೇ ಜಾಗದಲ್ಲಿದ್ದ ನೂರಾರು ಮಹಿಳೆಯರು, ಮಕ್ಕಳು, ಪುರುಷರ ಮಾರಣ ಹೋಮ ನಡೆದಿದೆ. ಇಂಥವರಿಗಾಗಿ ನಅವು ಪ್ರಾರ್ಥಿಸಬೇಕಿದೆ ಎಂದು ಕಳಕಳಿಯಲ್ಲಿ ಟ್ವೀಟ್ ಮಾಡಿದ್ದಾರೆ ಓಮರ್ ಅಲ್ವಿ ಎನ್ನುವವರು.

ರಾಬ್ಯನೂರ್

ನಿಮ್ಮ ಮಾನವೀಯತೆ, ಕರುಣೆ ಎಲ್ಲಿಹೋದವು? ನಿಜಕ್ಕೂ ಈ ದುರಂತ ದಿನ ಕಂಡು ಮನಸ್ಸು ನೋಯುತ್ತಿದೆ. ಮನುಷ್ಯನ ಜೀವಕ್ಕಿಲ್ಲ ಬೆಲೆಯೇ ಇಲ್ಲ. ಸಾವಿಗೀಡಾದ ಎಲ್ಲರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ದೇವರು ಎಂದು ರಾಬ್ಯನೂರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬಲಿಯಾಗುವವರು ಮಾತ್ರ ಅಮಾಯಕ ಮುಸ್ಲಿಮರು

ಸೂಫಿ, ಶಿಯಾ, ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ... ಛೆ, ದ್ವೇಷದ ಸಿದ್ಧಾಂತ ಹೊತ್ತ ಈ ಭಯೋತ್ಪಾದಕರ ದಾಳಿಗೆ ಬಲಿಯಾಗುವವರು ಮಾತ್ರ ಎಂದಿಗೂ ಅಮಾಯಕ ಮುಸ್ಲಿಮರು ಎಂದು ವಜಾಹತ್ ಅಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇವರೆಂದಿಗೂ ಹಿಂಸೆಯನ್ನು ಬಿಡಲಾರರು

ಈಜಿಪ್ಟಿನ ಅಲ್ಪಸಂಖ್ಯಾತರನ್ನು ಸಾಯಿಸಿದ ನಂತರ, ಮುಸ್ಲಿಮರೇ ಮುಸ್ಲಿಮರನ್ನು ಸಾಯಿಸುತ್ತಿದ್ದಾರೆ. ಈ ಜನ ಎಂದಿಗೂ ಹಿಂಸೆಯನ್ನು ಬಿಡುವುದಿಲ್ಲ ಅನ್ನಿಸುತ್ತೆ ಎಂದು ಅರ್ಥವತ್ತಾದ ವ್ಯಂಗ್ಯಚಿತ್ರವೊಂದರ ಮೂಲಕ ಹೇಳಿದ್ದಾರೆ ರಾಜ್ ಯಾದವ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Twitterians strongly condemn Mosque attack in Egypt. At least 235 people were killed and dozens more wounded when terrorists set off a bomb and opened fire on people attending prayers at a mosque in Egypt's restive northern Sinai on Nov 24th

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ