ಐಎಸ್ಐಎಸ್ ಗೆ ಬೆಂಬಲ, 1.25 ಲಕ್ಷ ಟ್ವಿಟರ್ ಖಾತೆ ಬಂದ್

Posted By:
Subscribe to Oneindia Kannada

ಸ್ಯಾನ್ ಫ್ರಾನ್ಸಿಸ್ಕೋ, ಫೆ. 06: ಇರಾಕಿ ಉಗ್ರ ಸಂಘಟನೆ(ಐಎಸ್ಐಎಸ್) ಸೇರಿದಂತೆ ನಿಷೇಧಿತ ಉಗ್ರ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸುವ ಸುಮಾರು 1,25,000 ಟ್ವಿಟ್ಟರ್ ಖಾತೆಗಳನ್ನು ಬಂದ್ ಮಾಡಿರುವುದಾಗಿ ಟ್ವಿಟ್ಟರ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.

2015 ರ ಅರಂಭದಿಂದ ಇಲ್ಲಿ ತನಕ ಐಸಿಸ್ ಉಗ್ರ ಸಂಘಟನೆ ಪರ ಮಾಹಿತಿ ಪ್ರಕಟಿಸುತ್ತಾ, ಬೆಂಬಲ ಕೋರುತ್ತಿದ್ದ 1 ಲಕ್ಷದ 25 ಸಾವಿರ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಟ್ವಿಟರ್ ಹೇಳಿದೆ. ಟ್ವಿಟ್ಟರ್ ಈಗ ಸುಮಾರು 500 ಮಿಲಿಯನ್ ಬಳಕೆದಾರರರನ್ನು ವಿಶ್ವದೆಲ್ಲೆಡೆ ಹೊಮ್ದಿದೆ.

Twitter suspends 125,000 terrorism-related accounts

ಪ್ರಮುಖವಾಗಿ ಐಸಿಸ್ ಉಗ್ರರ ಸಂಘಟನೆ ಕೇಂದ್ರಿತವಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ ಟ್ವಿಟರ್, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ನಿರ್ವಹಣೆಯಾಗುತ್ತಿರುವ ಟ್ವಿಟರ್ ಖಾತೆಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಂಬೈ ದಾಳಿಯ ಸೂತ್ರಧಾರಿ ಹಫೀಜ್ ಮೊಹಮ್ಮದ್ ಸಯೀದ್ ಫೆಬ್ರವರಿ 3 ರಂದು ಭಾರತದ ಮೇಲೆ ದಾಳಿ ನಡೆಸುವಂತೆ ಸಾರ್ವಜನಿಕವಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಕರೆ ನೀಡಿರುವುದನ್ನು ಸ್ಮರಿಸಬಹುದು. ಭಾರತದಲ್ಲಿ ದುಷ್ಕೃತ್ಯ ಎಸಗುತ್ತೇವೆ ಎಂದು ಟ್ವೀಟ್ ಮೂಲಕ ಬೆದರಿಕೆ ಒಡ್ಡಿದ್ದ ಪ್ರಸಂಗಗಳಿವೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Twitter said on Friday it has suspended 125,000 accounts primarily related to the terrorist group Islamic State (IS) since the middle of 2015.
Please Wait while comments are loading...