ಟ್ವಿಟ್ಟರ್ ಸಮಸ್ಯೆಗೆ ಪರಿಹಾರ ರೂಪವೇ ಹೊಸ ಮಾಲೀಕ: ಟ್ವಿಟ್ಟರ್ ಸ್ಥಾಪಕ

ನವದೆಹಲಿ, ಏ. 26: ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಿದ ಬೆಳವಣಿಗೆಯನ್ನು ಅದರ ಸಹ-ಸಂಸ್ಥಾಪಕ ಹಾಗು ಮಾಜಿ ಸಿಇಒ ಜ್ಯಾಕ್ ಡೋರ್ಸೆ (Jack Dorsey) ಸ್ವಾಗತಿಸಿದ್ದಾರೆ. ಟ್ವಿಟ್ಟರ್ ಸಂಸ್ಥೆಯ ಪ್ರಮುಖ ಸಮಸ್ಯೆಗೆ ಎಲಾನ್ ಮಸ್ಕ್ ಅವರೇ ಏಕಮೇವ ಪರಿಹಾರ ಎಂದು ಟ್ವೀಟ್ ಮೂಲಕ ಹೇಳಿರುವ ಜ್ಯಾಕ್ ಡೋರ್ಸೆ, ತಾನು ಮಸ್ಕ್ ಅವರ ಮೇಲೆ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ. ಅದೇ ಟ್ವೀಟ್‌ನಲ್ಲಿ ಅವರು ಟ್ವಿಟ್ಟರ್ ಯಾರ ಮಾಲಕತ್ವದಲ್ಲೂ ಇರಬಾರದು ಎಂದೂ ಅಭಿಪ್ರಾಯಪಟ್ಟಿದ್ದಾರೆ.

"ಟ್ವಿಟ್ಟರ್ ಅನ್ನು ಯಾರೂ ಮುನ್ನಡೆಸುವಂತಾಗಬಾರದು. ಯಾರೂ ಅದರ ಮಾಲಕರಾಗಬಾರದು. ಒಂದು ಒಂದು ಕಂಪನಿಯಾಗುವುದರ ಬದಲು ಶಿಷ್ಟಾಚಾರ ಮಟ್ಟದಲ್ಲಿ ಅದೊಂದು ಸಾರ್ವಜನಿಕ ಸರಕಾಗಿ (Public Good at a protocol level) ಉಳಿಯಬೇಕು. ಅದು ಕಂಪನಿಯಾಗಿರುವುದು ಸಮಸ್ಯೆ. ಈ ಸಮಸ್ಯೆಗೆ ನಾನು ನಂಬುವ ಏಕೈಕ ಪರಿಹಾರ ಎಂದರೆ ಅದು ಎಲಾನ್. ಸಾಕ್ಷಿಪ್ರಜ್ಞೆಯ ಬೆಳಕನ್ನು ವಿಸ್ತರಿಸುವ ಕೈಂಕರ್ಯದಲ್ಲಿ ಮಸ್ಕ್ ಅವರನ್ನ ನಂಬುತ್ತೇನೆ" ಎಂದು ಜ್ಯಾಕ್ ಡೋರ್ಸೆ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕಂಪನಿಯಾಗಿದ್ದರೆ ಏನು ಸಮಸ್ಯೆ?:
ಈ ಮೇಲಿನ ಟ್ವೀಟ್ ಮಾಡುವ ಮುನ್ನ ಜ್ಯಾಕ್ ಮತ್ತೊಂದು ಟ್ವೀಟ್ ಹಾಕಿದ್ದರು. ಅದರಲ್ಲಿ ಅವರು ಟ್ವಿಟ್ಟರ್ ಒಂದು ಕಂಪನಿಯಾಗಿರುವುದು ಏನು ಸಮಸ್ಯೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಟ್ವಿಟ್ಟರ್ ಅಮೆರಿಕದ ಷೇರುಪೇಟೆಯಲ್ಲಿ ಲಿಸ್ಟ್ ಆಗಿದೆ. ಜಾಹೀರಾತಿನ ಮಾದರಿಗೆ ಸಿಕ್ಕಿಬಿದ್ದಿದೆ. ಇದು ನನ್ನ ಅತಿದೊಡ್ಡ ನಿರಾಸೆ ಎಂದು ಅವರು ಅಳಲುತೋಡಿಕೊಂಡಿದ್ದಾರೆ.

Twitter co-founder Jack Dorsey is satisfied with take-over by Elon Musk

"ಐಡಿಯಾ ಮತ್ತು ಸರ್ವಿಸ್ ಇವಷ್ಟೇ ನನಗೆ ಮುಖ್ಯ. ಈ ಎರಡನ್ನು ಕಾಪಾಡಲು ನಾನು ಏನು ಬೇಕಾದರೂ ಮಾಡುತ್ತೇನೆ. ಟ್ವಿಟ್ಟರ್ ಒಂದು ಕಂಪನಿಯಾಗಿ ನನ್ನ ಏಕೈಕ ಸಮಸ್ಯೆ ಮತ್ತು ನನ್ನ ಅತಿದೊಡ್ಡ ವಿಷಾದವಾಗಿದೆ. ವಾಲ್ ಸ್ಟ್ರೀಟ್ ಮತ್ತು ಆ್ಯಡ್ ಮಾಡಲ್ ನಮ್ಮ ಕಂಪನಿಯ ಓನರ್‌ಗಳಾಗಿವೆ. ವಾಲ್ ಸ್ಟ್ರೀಟ್‌ನಿಂದ ಅದನ್ನ ವಾಪಸ್ ತರುವುದು ಮೊದಲ ಕರೆಕ್ಷನ್" ಎಂದು ಜ್ಯಾಕ್ ಡೋರ್ಸೆ ತಿಳಿಸಿದ್ದಾರೆ.

ಇಲ್ಲಿ ವಾಲ್ ಸ್ಟ್ರೀಟ್ ಎಂದರೆ ನಮ್ಮ ಮುಂಬೈನ ಬುಲ್ ಸ್ಟ್ರೀಟ್‌ನಂತೆ ಅಮೆರಿಕದಲ್ಲಿರುವ ಷೇರುಪೇಟೆಯಾಗಿದೆ. ಟ್ವಿಟ್ಟರ್‌ಗೆ ಬಂಡವಾಳ ಶೇಖರಿಸುವ ಸಲುವಾಗಿ ಐಪಿಒಗೆ ತೆರೆದುಕೊಂಡು ಷೇರುಪೇಟೆಯಲ್ಲಿ ಲಿಸ್ಟ್ ಆಗಿತ್ತು. ಆದರೂ ಕಂಪನಿಯಲ್ಲಿ ಶೇ. 15 ಮತ್ತು ಹೆಚ್ಚಿನ ಷೇರುಗಳ ಪಾಲನ್ನು ಯಾರು ಹೊಂದುವಂತಿಲ್ಲ ಎಂಬ ನೀತಿಯನ್ನ ಟ್ವಿಟ್ಟರ್ ಅನುಸರಿಸಿಕೊಂಡುಬಂದಿತ್ತು. ಈಗ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಮಾಡಿಯಾಗಿದೆ. ಈ ಸೋಷಿಯಲ್ ಮೀಡಿಯಾ ಕಂಪನಿಯಲ್ಲಿ ಮುಂದಿನ ದಿನಗಳಲ್ಲಿ ಏನೇನು ಬದಲಾವಣೆಗಳಾಗುತ್ತವೆ ಕಾದು ನೋಡಬೇಕು.

Twitter co-founder Jack Dorsey is satisfied with take-over by Elon Musk

ಟ್ವಿಟ್ಟರ್ ಆರಂಭವಾಗಿದ್ದು:
ಫೇಸ್‌ಬುಕ್‌ಗಿಂತ ವಿಭಿನ್ನವಾದ ಸೋಷಿಯಲ್ ಮೀಡಿಯಾ ಶೇರಿಂಗ್ ತಾಣವಾದ ಟ್ವಿಟ್ಟರ್ ಆರಂಭವಾಗಿದ್ದು 2006ರಲ್ಲಿ. ಜ್ಯಾಕ್ ಡೋರ್ಸೀ, ನೋವಾ ಗ್ಲಾಸ್, ಬಿಜ್ ಸ್ಟೋನ್, ಇವಾನ್ ವಿಲಿಯಮ್ಸ್ ಈ ನಾಲ್ವರು ಸೇರಿ ಟ್ವಿಟ್ಟರ್ ಸ್ಥಾಪನೆ ಮಾಡಿದ್ದರು. ಸದ್ಯ ವಿಶ್ವಾದ್ಯಂತ 21 ಕೋಟಿ ಬಳಕೆದಾರರ ಬಳಗ ಟ್ವಿಟ್ಟರ್‌ಗೆ ಇದೆ.

ಜ್ಯಾಕ್ ಡೋರ್ಸೆ ಅವರು ಟ್ವಿಟ್ಟರ್ ಆರಂಭವಾದಾಗ ಎರಡು ವರ್ಷ ಸಿಇಒ ಆಗಿದ್ದರು. ನಂತರ 2015ರವರೆಗೆ ‍ಛೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಅದಾದ ಬಳಿಕ 2015ರಿಂದ 2021ರವರೆಗೆ ಮತ್ತೊಮ್ಮೆ ಸಿಇಒ ಆಗಿದ್ದರು. ಅವರ ಬಳಿಕ ಭಾರತ ಮೂಲದ ಪರಾಗ್ ಅಗರ್ವಾಲ್ ಅವರು ಸಿಇಒ ಆಗಿದ್ದರು. ಪರಾಗ್ ಅವರು ಟ್ವಿಟ್ಟರ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಸಿಇಒ ಆಗುವ ಮುನ್ನ ಸಿಟಿಒ ಹಂತದವರೆಗೂ ಏರಿದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+