ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಟೋಂಗಾದಲ್ಲಿ 7.5 ತೀವ್ರತೆ ಭೂಕಂಪ; ಪೆಸಿಫಿಕ್ ರಾಷ್ಟ್ರಗಳಲ್ಲಿ ಸುನಾಮಿ

|
Google Oneindia Kannada News

ನವದೆಹಲಿ, ನವೆಂಬರ್ 11: ಪೆಸಿಫಿಕ್ ದ್ವೀಪ ನಿಯುವಿನ ರಾಜಧಾನಿ ಅಲೋಫಿಯಿಂದ ಪಶ್ಚಿಮಕ್ಕೆ 241 ಕಿಲೋಮೀಟರ್ ದೂರದಲ್ಲಿ ಶುಕ್ರವಾರ ರಾತ್ರಿ ತೀವ್ರ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.5ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ.

ಮೊದಲು ಸಂಜೆ 4:19ರ ಸುಮಾರಿಗೆ ತೀವ್ರ ಭೂಕಂಪ ಸಂಭವಿಸಿದೆ. ನವೆಂಬರ್ 11ರಂದು 7.5ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ನಿಯು ಪ್ರದೇಶದ ಅಲೋಫಿಯಿಂದ 241ರ ಅಂತರದಲ್ಲಿ ಭೂಕಂಪನವಾಗಿರುವ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದೆ.

ಫಿಜಿ ಮತ್ತು ಟೊಂಗಾದಲ್ಲಿ 6.8 ತೀವ್ರತೆಯಲ್ಲಿ ಭೂಕಂಪಫಿಜಿ ಮತ್ತು ಟೊಂಗಾದಲ್ಲಿ 6.8 ತೀವ್ರತೆಯಲ್ಲಿ ಭೂಕಂಪ

ಈ ಮಧ್ಯೆ ಟೋಂಗಾದ ನೆಯಾಫು ಸಮೀಪದಲ್ಲಿ 7.1 ತೀವ್ರತೆಯ ಭೂಕಂಪವು ದಾಖಲಾಗಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಇದು ನೆಯಾಫುವಿನ ಪೂರ್ವ ಆಗ್ನೇಯಕ್ಕೆ 207 ಕಿಮೀ (128.6 ಮೈಲುಗಳು) ಸಂಭವಿಸಿದೆ.

Tsunami warnings in Pacific island nation from Tongas Massive 7.5 magnitude shake earthquake

ಸುನಾಮಿ ಆತಂಕ ಸೃಷ್ಟಿಸಿದ ಭೂಕಂಪನ:

ಪ್ರಾಥಮಿಕ ಮಾಹಿತಿ ಪ್ರಕಾರ, ನೆಯಾಫುವಿನ ಆಗ್ನೇಯಕ್ಕೆ 207 ಕಿಲೋ ಮೀಟರ್ ದೂರದಲ್ಲಿರುವ ಟೊಂಗಾದಲ್ಲಿ ಭೂಕಂಪನ ಸಂಭವಿಸಿರುವ ಕುರಿತು ಯುಎಸ್‌ಜಿಎಸ್ ಟ್ವೀಟ್ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ನೆಯಾಫುವಿನ ಪೂರ್ವ ಆಗ್ನೇಯಕ್ಕೆ 207 ಕಿಮೀ (128.6 ಮೈಲುಗಳು) ದೂರದಲ್ಲಿ ಭೂಮಿ ಕಂಪಿಸಿದೆ.

ಟೊಂಗಾದಲ್ಲಿದಲ್ಲಿ ಎಚ್ಚರಿಕೆ ಸಂದೇಶ:

ಟೊಂಗಾದಲ್ಲಿ ಭೂಕಂಪನ ಬೆನ್ನಲ್ಲೇ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿದೆ. ಈ ಹಿನ್ನೆಲೆ ಅಪಾಯವನ್ನು ಎದುರಿಸುತ್ತಿರುವ ನಿವಾಸಿಗಳಿಗೆ ಕೆಲವು ಮುನ್ನೆಚ್ಚರಿಕೆ ಸಂದೇಶ ನೀಡಲಾಗಿದೆ. ಸ್ಟೀಲ್ ಹಾಗೂ ಕಾಂಕ್ರೀಟ್ ಮನೆಗಳಲ್ಲಿ ವಾಸವಿರುವ ಜನರು ಮೂರನೇ ಮಹಡಿಗಳಿಗೆ ಸ್ಥಳಾಂತರವಾಗುವಂತೆ ಸಲಹೆ ನೀಡಲಾಗಿದೆ. ಇದೇ ವರ್ಷ ಜನವರಿಯಲ್ಲಿ, ಟೊಂಗಾದಲ್ಲಿ ಗಮನಾರ್ಹವಾದ ಜ್ವಾಲಾಮುಖಿ ಸ್ಫೋಟವಾಗಿತ್ತು, ಅದರ ನಂತರ ಸುನಾಮಿಯು ನುಕು'ಅಲೋಫಾ ನಗರದ ಒಂದು ಭಾಗವನ್ನು ಮುಳುಗಿಸಿತ್ತು.

English summary
Tsunami warnings in Pacific island nation from Tonga's Massive 7.5 magnitude shake earthquake. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X