ಡೊನಾಲ್ಡ್ ಟ್ರಂಪ್ ಟ್ವೀಟ್‌ಗೆ ಪಾಕಿಸ್ತಾನ ಕಂಗಾಲು

Posted By:
Subscribe to Oneindia Kannada

ಲಾಹೋರ್, ಜನವರಿ 02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನವನ್ನು ಸುಳ್ಳುಗಾರ ರಾಷ್ಟ್ರ ಎಂದು ಜರಿದು ಪಾಕಿಸ್ತಾನಕ್ಕೆ ನೀಡುತ್ತಿದ್ದ ಎಲ್ಲಾ ನೆರವನ್ನು ಸ್ಥಗಿತಗೊಳಿಸುವುದಾಗಿ ಹೇಳಿದ ಬೆನ್ನಲ್ಲೆ ಪಾಕಿಸ್ತಾನದ ರಾಜಕೀಯದಲ್ಲಿ ಆತಂಕದ ಕಾರ್ಮೋಡಗಳು ಕವಿದಿವೆ.

ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್ ಗರಂ

ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಎಂ.ಆಸಿಫ್ ಅವರು ನಿನ್ನೆ ಪ್ರಧಾನಿ ಅವರನ್ನು ಭೇಟಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಖ್ವಾಜಾ ಅವರು ಟ್ರಂಪ್ ಅವರು ಮಾಡಿರುವ ಟ್ವೀಟ್ ಬಗ್ಗೆ ಪಾಕಿಸ್ತಾನದ ಅಮೆರಿಕ ರಾಯಭಾರಿಯಿಂದ ಸ್ಪಷ್ಟನೆಯನ್ನು ಕೇಳಿದ್ದಾರೆ.

Trumph tweet creat havoc in Pakistan

ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಬಗ್ಗೆ ಮಾಡಿರುವ ನೇರ, ನಿಷ್ಠುರ ಟೀಕೆಯಿಂದ ಪಾಕಿಸ್ತಾನ ಕಂಗಾಲಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಟೀಕೆಗೆ ಪ್ರತಿಕ್ರಿಯಿಸಲೂ ಹಿಂದೆ ಮುಂದೆ ನೋಡುತ್ತಿದೆ, ಹಾಗಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಎಂ.ಆಸಿಫ್ ಅವರು 'ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಗೆ ಆದಷ್ಟು ಬೇಗ ಪ್ರತಿಕ್ರಿಯೆ ನೀಡಲಾಗುವುದು' ಎಂದು ಟ್ವೀಟ್ ಮಾಡಿದ್ದರು ಆದರೆ ಈ ವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

'ಭಯೋತ್ಪಾದಕರ ವಿರುದ್ಧ ಅಮೆರಿಕ ಮತ್ತು ಜಗತ್ತು ಮಾಡುತ್ತಿರುವ ಯುದ್ಧದಲ್ಲಿ ಪಾಕಿಸ್ತಾನ ವಂಚನೆ ಎಸಗುತ್ತಿದೆ, ಅದು ಭಯೋತ್ಪಾದಕರಿಗೆ ಬೆಂಬಲ ಸೂಚಿಸುತ್ತಿದೆ, ಅಮೆರಿಕ ಮೂರ್ಖತನದಿಂದ ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದೆ, ಇನ್ನು ಮುಂದೆ ಪಾಕಿಸ್ತಾನಕ್ಕೆ ನೀಡುತ್ತಿರುವ ಎಲ್ಲಾ ಸಹಾಯ ನಿಲ್ಲಿಸಲಾಗುತ್ತದೆ, ಪಾಕಿಸ್ತಾನ ಒಂದು ಸುಳ್ಳುಗಾರ ರಾಷ್ಟ್ರ ಎಂದು ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿದ್ದರು.

ಡೊನಾಲ್ಡ್ ಟ್ರಂಪ್ ಅವರ ಪಾಕಿಸ್ತಾನದ ಕುರಿತು ಹೇಳಿಕೆಗೆ ಕೇಂದ್ರ ರಾಜ್ಯ ಸಚಿವ ಜಿತೇಂದರ್ ಸಿಂಗ್ ಪ್ರತಿಕ್ರಿಯಿಸಿದ್ದು, 'ಡೊನಾಲ್ಟ್ ಟ್ರಂಪ್ ಅವರು ಪಾಕಿಸ್ತಾನದ ಬಗ್ಗೆ ಹೇಳಿರುವ ಮಾತುಗಳು, ಭಾರತವು ಪಾಕಿಸ್ತಾನದ ಬಗ್ಗೆ ಹೊಂದಿರುವ ನಿಲುವಿಗೆ ಸಾಕ್ಷಿ ಒದಗಿಸುತ್ತವೆ' ಎಂದಿದ್ದಾರೆ.

ಅಮೆರಿಕದಿಂದ ಸಾಕಷ್ಟು ಆರ್ಥಿಕ ನೆರವು ಪಡೆಯುತ್ತಿದ್ದ ಪಾಕಿಸ್ತಾನ ಈಗ ಭಾರಿ ಸಮಸ್ಯೆಗೆ ಸಿಲುಕಿದ್ದು, ಪಾಕಿಸ್ತಾನವು ಚೀನಾದೊಂದಿಗೆ ಹೆಚ್ಚಿಸಿಕೊಂಡಿರುವ ಗೆಳೆತನವೇ ಅದಕ್ಕೆ ಮುಳುವಾಗಿದೆ, ಪಾಕಿಸ್ತಾನವು ಭಯೋತ್ಪಾದಕರ ವಿರುದ್ಧ ಕಠಿಣ ನಿಲುವು ತಳೆಯದಿದ್ದರೆ ವಿಶ್ವ ಭೂಪಟದಲ್ಲಿ ಒಂಟಿ ರಾಷ್ಟ್ರವಾಗಿ ನಿಲ್ಲಲಿದೆ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Donald Trump tweet about Pakistan created Anxiety in Pakisthan govt. Donald Trump said in tweet that America foolishly helped pakistan from many years, America will stop helping Pakistan. Pakistan not yet responded to Trump's tweet.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ