ಚೊಚ್ಚಲ ಬಜೆಟ್ ನಲ್ಲಿ ಪಾಕ್ ಅನುದಾನಕ್ಕೆ ಕತ್ತರಿ ಹಾಕಿದ ಟ್ರಂಪ್
ಭಯೋತ್ಪಾದನೆಯ ಮೂಲೋಚ್ಛಾಟನೆಗಾಗಿ ಶ್ರಮಿಸುತ್ತಿರುವ ಅಮೆರಿಕ್ಕಕೆ ಕೈ ಜೋಡಿಸಿರುವ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರದಿಂದ ಸಿಗುತ್ತಿದ್ದ ಅನುದಾನದಲ್ಲಿ ಕಡಿತಗೊಳಿಸಿದ ಟ್ರಂಪ್.
ವಾಷಿಂಗ್ಟನ್, ಮೇ 24: ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ, ಪ್ರತಿ ವರ್ಷ ಅಮೆರಿಕ ಸರ್ಕಾರದಿಂದ ಪಾಕಿಸ್ತಾನ ಸರ್ಕಾರಕ್ಕೆ ಬಿಡುಗಡೆಯಾಗುತ್ತಿದ್ದ ಅನುದಾನಕ್ಕೆ ಕತ್ತರಿ ಹಾಕಿದೆ.
ಪ್ರತಿ ವರ್ಷ ಸುಮಾರು 534 ಮಿಲಿಯನ್ ಅಮೆರಿಕನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಅಂದಾಜು 3,400 ಕೋಟಿ ರು.ಗಳಷ್ಟು) ಅನುದಾನ ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆ ಮೊತ್ತದಲ್ಲಿ ಸುಮಾರು 190 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1232 ಕೋಟಿ ರು.ಗಳಷ್ಟು) ಹಣಕ್ಕೆ ಕತ್ತರಿ ಹಾಕಲಾಗಿದೆ.

ಹಾಗಾಗಿ, ಈ ಬಾರಿ, ಪಾಕಿಸ್ತಾನಕ್ಕೆ 344 ಮಿಲಿಯನ್ ಅಮೆರಿಕನ್ ಡಾಲರ್ 2, 168 ಕೋಟಿ ರು.ಗಳನ್ನು ಮಾತ್ರವೇ ನಿಗದಿಗೊಳಿಸಲಾಗಿದೆ. ಅಮೆರಿಕದ ಜತೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ಸೇನಾ ಖರ್ಚುಗಳನ್ನು ನಿಭಾಯಿಸಲು ಪಾಕಿಸ್ತಾನಕ್ಕೆ ಈ ಅನುದಾನ ಪ್ರತಿ ವರ್ಷ ಲಭ್ಯವಾಗುತ್ತಿದೆ.












Click it and Unblock the Notifications