Trump's Economic War: ಡೊನಾಲ್ಡ್ ಟ್ರಂಪ್ ಹೊಸ ಕಿರಿಕ್, ಭಾರತದ ಜೊತೆಗೆ ಮಾತುಕತೆ ಇಲ್ಲ ಎಂದ ಅಮೆರಿಕ ಅಧ್ಯಕ್ಷ!
ಭಾರತ & ಅಮೆರಿಕ ನಡುವೆ ಇರುವ ಶತ ಶತಮಾನಗಳ ಸಂಬಂಧಕ್ಕೆ ಇದೀಗ ಎಳ್ಳುನೀರು ಬಿಡುವ ಕಾಲ ಬಂದಂತೆ ಕಾಣುತ್ತಿದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಮಹಾ ಎಡವಟ್ಟು ನೋಡುತ್ತಿದ್ದರೆ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ಮೊಳಗುತ್ತಿದೆ. ಇಡೀ ಜಗತ್ತೇ ಭಾರತದ ಜೊತೆಯಲ್ಲಿ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ನೋಡುತ್ತಿದ್ದರೆ, ಅಮೆರಿಕ ಮಾತ್ರ ಭಾರತದ ಜೊತೆಗೆ ಕಿರಿಕ್ ತೆಗೆದು & ಭಾರತವನ್ನ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ನೋಡುತ್ತಿದೆ. ಆದರೆ ಇದು ಅಸಾಧ್ಯ ಅನ್ನೋದು ತಿಳಿದ ಡೊನಾಲ್ಡ್ ಟ್ರಂಪ್ ತೆರಿಗೆ ಹೇರಿಕೆಯ ಬೆದರಿಕೆ ಹಾಕಿದ್ದಾರೆ. ಈ ನಡುವೆ ಡೊನಾಲ್ಡ್ ಟ್ರಂಪ್ ಹೊಸ ಕಿರಿಕ್ ಶುರು ಮಾಡಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆ ಮಾಡುತ್ತಾ, ಇಡೀ ಜಗತ್ತಿನ ಹಲವು ದೇಶಗಳ ಜೊತೆ ಭಾರಿ ದೊಡ್ಡ ಕಿರಿಕ್ ಮಾಡುತ್ತಿದ್ದಾರೆ ಅನ್ನೋ ಆರೋಪ ಇದೆ. ಅದರಲ್ಲೂ ಈ ಪೈಕಿ ಭಾರತ ಸೇರಿದಂತೆ ಅಮೆರಿಕ ಜೊತೆ ಹಲವು ವರ್ಷಗಳಿಂದ ಉತ್ತಮ ವ್ಯಾಪಾರ ಸಂಬಂಧ ಹೊಂದಿದ್ದ ದೊಡ್ಡ ದೊಡ್ಡ ದೇಶಗಳ ಜೊತೆಯಲ್ಲೂ ಟ್ರಂಪ್ ಕಿರಿಕ್ ಮಾಡಿದ್ದಾರೆ. ಅಲ್ಲದೆ ಆಪ್ತ ಗೆಳೆಯ ಎಂದು ಕರೆಸಿಕೊಳ್ಳುವ ದೇಶಗಳನ್ನು ಕೂಡ ದೂರ ಮಾಡಿಕೊಳ್ಳುತ್ತಿದ್ದಾರೆ ಇದೇ ಟ್ರಂಪ್. ಹೀಗಿದ್ದಾಗ ಭಾರತಕ್ಕೂ ತೆರಿಗೆಯ ಬಿಸಿ ತಾಗಿಸಲು ಬಂದಿದ್ದ ಟ್ರಂಪ್ ಬುಡವೇ ಅಲ್ಲಾಡಿ ಹೋಗಿದೆ. ಹೀಗಿದ್ದರೂ, ಟ್ರಂಪ್ ಮಾತ್ರ ತಮ್ಮ ಕಿರಿಕಿರಿ ಮುಂದುವರಿಸಿದ್ದಾರೆ.

ಸುಮ್ಮನೆ ಇರಲಾರದೆ ಕಿರಿಕ್ ತೆಗೆದ ಟ್ರಂಪ್!
ಡೊನಾಲ್ಡ್ ಟ್ರಂಪ್ 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಭಾರತ & ಭಾರತೀಯರ ಕೊಡುಗೆ ಕೂಡ ಭಾರಿ ದೊಡ್ಡ ಮಟ್ಟದಲ್ಲೇ ಇದೆ. ಯಾಕಂದ್ರೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಇದೇ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ ಬೆಂಬಲ ನೀಡಿ, ಸ್ವತಃ ಚುನಾವಣೆ ಪ್ರಚಾರ ಕಾರ್ಯ ಕೂಡ ಕೈಗೊಂಡಿದ್ದರು. ಅಲ್ಲದೆ ಡೊನಾಲ್ಡ್ ಟ್ರಂಪ್ ಗೆಲುವಿಗೆ ಅಂತಾ ವಿಶೇಷ ಪೂಜೆ ಕೂಡ ನಡೆಸಿ, ಭಾರತದ ಜನರು ಹೋಮ & ಹವನ ಕೈಗೊಂಡು ಹಾರೈಸಿದ್ದರು.
ಇಷ್ಟೆಲ್ಲಾ ಮಾಡಿದರೂ ಈಗ ಭಾರತೀಯರಿಗೆ & ಭಾರತಕ್ಕೆ ಕಾಟ ಕೊಡುತ್ತಿರುವ ಟ್ರಂಪ್ ಈಗ ಭಾರತದ ಜೊತೆ ನಾನು ತೆರಿಗೆ ವಿಚಾರವಾಗಿ ಮಾತನಾಡಲ್ಲ ಅಂತಾ ಹೇಳಿದ್ದಾರೆ. ಈ ಮೂಲಕ ಭಾರತ & ಅಮೆರಿಕ ಸಂಬಂಧ ಇನ್ನಷ್ಟು ಹಾಳಾಗಿ ಹೋಗುವ ಹಂತ ತಲುಪಿದೆ. ಭಾರತದ ವಿರುದ್ಧ ಶೇಕಡಾ 50ರಷ್ಟು ತೆರಿಗೆ ಹೇರಿಕೆಯ ಮಾಡಿರುವ ಡೊನಾಲ್ಡ್ ಟ್ರಂಪ್, ಭಾರತದ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸುತ್ತೀರಾ? ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ನೀಡುವ ಮೂಲಕ, ಕಿಚ್ಚು ಹೊತ್ತಿಸಿದ್ದಾರೆ. ಭಾರತ ಕೂಡ ಈಗಾಗಲೇ ಅಮೆರಿಕದ ಅಧ್ಯಕ್ಷರಿಗೆ ಸರಿಯಾಗಿ ತಿರುಗೇಟು ನೀಡಿದೆ.












Click it and Unblock the Notifications