ಗೆಲುವಿನ ವರ್ಷಾಚರಣೆ ಸಂಭ್ರಮದ ಮಧ್ಯೆ ಚೀನಾದಲ್ಲಿ ಡೊನಾಲ್ಡ್ ಟ್ರಂಪ್
ಬೀಜಿಂಗ್, ನವೆಂಬರ್ 8: ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದು ಇಂದಿಗೆ ಸರಿಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಇದೇ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷರು ನಮ್ಮ ನೆರೆಯ ರಾಷ್ಟ್ರ ಚೀನಾಕ್ಕೆ ಬಂದಿಳಿದಿದ್ದಾರೆ.
ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಗಳನ್ನು ಕೈಬಿಡುವಂತೆ ಮಾಡಲು ಆ ದೇಶದ ಮೇಲೆ ಒತ್ತಡ ಹೇರುವುದು ಸೇರಿದಂತೆ ಹಲವು ವಿಚಾರಗಳು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನಡುವೆ ಚರ್ಚೆಗೆ ಬರಲಿವೆ.

ಡೊನಾಲ್ಡ್ ಟ್ರಂಪ್ ರ ಮೂರು ದಿನಗಳ ಭೇಟಿ ವೇಳೆ ಎರಡೂ ದೇಶಗಳು ಬಿಲಿಯನ್ ಡಾಲರ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಿವೆ.
ಒಟ್ಟಿನಲ್ಲಿ ಎರಡು ಬೃಹತ್ ಆರ್ಥಿಕ ದೇಶಗಳ ನಡುವಿನ ಭೇಟಿಯನ್ನು ಜಗತ್ತಿನಾದ್ಯಂತ ಕುತೂಹಲ ಭರಿತ ಕಣ್ಣುಗಳಿಂದ ನೋಡಲಾಗುತ್ತಿದೆ.












Click it and Unblock the Notifications