'ಡೋನಾಲ್ಡ್ ಟ್ರಂಪ್ ಕಾಂಡೋಮ್ ಬಳಸದೆ ನನ್ನನ್ನು ಹಲವು ಬಾರಿ ಸೇರಿದ್ದಾರೆ'
ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗಳ ರಾಸ ಲೀಲೆಗಳ ಬಗ್ಗೆ ಮುಚ್ಚಿಡುವ ಅವಶ್ಯಕತೆ ಇಲ್ಲವೇ ಇಲ್ಲ. ಅವರು ಐಶಾರಾಮಿ ಜೀವನದಿಂದ ಎಷ್ಟು ಸುದ್ದಿಯಲ್ಲಿ ಇದ್ದರೂ, ಅದಕ್ಕಿಂತ ಹೆಚ್ಚು ಅವರು ತಮ್ಮ ಗರ್ಲ್ ಫ್ರೆಂಡ್‌ಗಳಿಂದಲೂ ಸುದ್ದಿಯಲ್ಲಿದ್ದರು. ಅಮೆರಿಕದ ಮಾಜಿ ಅಧ್ಯಕ್ಷನ ವಿರುದ್ಧ ಹಲವು ಖ್ಯಾತ ನಾಮರು ಬೊಟ್ಟು ಮಾಡಿ ತೊರಿಸಿದ್ದಾರೆ.
ಡೋನಾಲ್ಡ್ ಟ್ರಂಪ್ ಹಾಗೂ ನಿಲಿ ಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈಗ ಸುದ್ದಿಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಅಂದಹಾಗೆ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಸಂತ್ರಸ್ತೆ ಸ್ಟಾರ್ಮಿ ಡೇನಿಯಲ್ಸ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಸ್ಟಾರ್ಮಿ ಡೇನಿಯಲ್ಸ್ ಸಾಕ್ಷಿ ಹೇಳಿದ್ದಾರೆ.

ಟ್ರಂಪ್ ಪರಿಚಯವಾಗಿದ್ದು ಹೇಗೆ?
ಸಾಕ್ಷಿ ಹೇಳುವವ ವೇಳೆ ಸ್ಟಾರ್ಮಿ ಡೇನಿಯಲ್ಸ್, ತನಗು ಹಾಗೂ ಡೋನಾಲ್ಡ್ ಟ್ರಂಪ್ ಪರಿಚಯದಿಂದ ಹಿಡಿದು ಕಥೆ ಶುರು ಮಾಡಿದರು. ಆದರೆ ಕಥೆ ಪ್ರಧಾನ ಘಟ್ಟಕ್ಕೆ ಬಂದಾಗ ಎಲ್ಲರು ಅವರತ್ತ ದೃಷ್ಟಿಯನ್ನು ತೆಗೆಯಲೇ ಇಲ್ಲ. ಟ್ರಂಪ್ ತನ್ನನ್ನು ಹೇಗೆಲ್ಲಾ ಬಳಸಿಕೊಂಡಿದ್ದನು ಎಂದು ನಾಯ್ಯಾಲಯಕ್ಕೆ ಸ್ಟಾರ್ಮಿ ಡೇನಿಯಲ್ಸ್ ತಿಳಿಸಿದರು.
ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲಿಯೂ ಬಾಯಿ ಬಿಡಬಾರದು ಎಂದು ತಿಳಿಸಿದ್ದರು. ಈ ಸಂಬಂಧ ಬೇರೆಯವರಿಗೆ ಗೊತ್ತಾಗದ ರೀತಿ ನೋಡಿಕೊಳ್ಳಬೇಕು ಎಂದು ಡೇನಿಯಲ್ಸ್ ಸುಮಾರು 5 ಗಂಟೆಗಳ ಕಾಲ ತನ್ನ ಕಥೆಯನ್ನು ನ್ಯಾಯಾಲಯದ ಮುಂದೆ ವಿವರಿಸಿದರು.
ಊಟಕ್ಕೆ ಕರೆದು...
2006ರಲ್ಲಿ ಡೊನಾಲ್ಡ್ ಟ್ರಂಪ್ ತಮ್ಮನ್ನು ಒಂದು ಸಂಜೆ ಊಟಕ್ಕೆ ಕರೆದಿದ್ದರು ಎಂದು ಸ್ಟಾರ್ಮಿ ಡೇನಿಯಲ್ಸ್ ತಿಳಿಸಿದ್ದಾರೆ. ಟ್ರಂಪ್ ತಮ್ಮ ಅರಮನೆಯ ಲೇಕ್ ತಾಹೋ ಹೋಟೆಲ್‌ನಲ್ಲಿ ಭೋಜನಕ್ಕೆ ಆಹ್ವಾನಿಸಿದ್ದರು. ಸ್ಟಾರ್ಮಿ ಡೇನಿಯಲ್ಸ್ ಹೊಟೇಲ್ ತಲುಪಿದ್ದಾಗ ಟ್ರಂಪ್ ರೇಷ್ಮೆ ಪೈಜಾಮಾವನ್ನು ಧರಿಸಿದ್ದರು. ಆದರೆ ಅವಳನ್ನು ನೋಡಿದ ಅವರು ಪ್ಲೇಬಾಯ್ ನಿಯತಕಾಲಿಕದ ಸಂಸ್ಥಾಪಕ ಹಗ್ ಹೆಫ್ನರ್ ಹೆಸರನ್ನು ಪ್ರಸ್ತಾಪಿಸಿ ಅವರನ್ನು ಕೀಟಲೆ ಮಾಡಿದರು.

ಟ್ರಂಪ್ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ಬಟ್ಟೆ ಬದಲಿಸುವಂತೆ ಹೇಳಿದರು. ಸ್ಟಾರ್ಮಿ ಡೇನಿಯಲ್ಸ್ ವಾಶ್‌ರೂಮ್‌ನಿಂದ ಆಚೆ ಬಂದಾಗ ಟ್ರಂಪ್ ಪೈಜಾಮಾ ತೆಗೆದು ಟೀ ಶರ್ಟ್ ಹಾಗೂ ಶಾರ್ಟ್ಸ್‌ನಲ್ಲಿ ನಿಂತಿದ್ದರು. ಆಗ ನಾನು ಹೊರಡಲು ಯತ್ನಿಸಿದಾಗ, ಟ್ರಂಪ್ ನನ್ನನ್ನು ತಡೆದು ತೋಳನ್ನು ಹಿಡಿಯುವ ಮೂಲಕ ನನಗೆ ಹತ್ತಿರವಾದರು ಎಂದು ಸ್ಟಾರ್ಮಿ ಡೇನಿಯಲ್ಸ್ ನ್ಯಾಯಲಯದಲ್ಲಿ ತಿಳಿಸಿದ್ದಾರೆ.
ಕಾಂಡೋಮ್ ಸಹ ಬಳಸುತ್ತಿರಲಿಲ್ಲ
ಹೀಗೆ ಸಂಬಂಧ ಇಟ್ಟುಕೊಳ್ಳುವುದು ಸರಿಯಲ್ಲ. ನಿಮ್ಮ ಹೆಂಡತಿ ಏನು ತಿಳಿಯುತ್ತಾಳೆ ಎಂದು ನಾನು ಎಷ್ಟೇ ಕೇಳಿಕೊಂಡರೂ ಅದಕ್ಕೆ ಟ್ರಂಪ್ ಸೊಪ್ಪು ಹಾಕಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ನಾನು ನನ್ನ ಹೆಂಡತಿ ಒಟ್ಟಿಗೆ ಮಲಗುವುದಿಲ್ಲ ಎಂದ ಹೇಳಿದರು. ಇದಾದ ಬಳಿಕ ಟ್ರಂಪ್ ಸ್ಟಾರ್ಮಿ ಡೇನಿಯಲ್ಸ್ ರನ್ನು ಹಾಸಿಗೆಗೆ ನೂಕಿ ಸಂಭೋಗ ನಡೆಸಿದ್ದಾರೆ. ಈ ವೇಳೆ ಅವರು ಕಾಂಡೋಮ್ ಸಹ ಬಳಸುತ್ತಿರಲಿಲ್ಲ ಎಂದು ಕೋರ್ಟ್‌ಗೆ ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದಾರೆ.
ಇದರ ನಂತರ, ಇಬ್ಬರ ನಡುವೆ ಹಲವಾರು ಬಾರಿ ಸಂಬಂಧಗಳು ಏರ್ಪಟ್ಟಿವೆ. ಈಗ ಚುನಾವಣೆಯ ಸಮಯ, ಹೀಗಾಗಿ ಈ ವೇಳೆ ಏನು ತಿಳಿಯಬಾರದು ಎಂದು ಬಯಸುತ್ತಾರೆ. ಅವರ ಸಂಬಂಧದ ಬಗ್ಗೆ ಜಗತ್ತಿಗೆ ತಿಳಿಯಬಹುದು ಎಂಬ ಭಯದಿಂದ. 2007 ರ ಬೇಸಿಗೆಯಲ್ಲಿ ಲಾಸ್ ಏಂಜಲೀಸ್‌ನಲ್ಲಿ ತಾವಿಬ್ಬರೂ ಭೇಟಿಯಾದರು ಎಂದು ಡೇನಿಯಲ್ಸ್ ಹೇಳಿದರು. ಅವರ ಸಂಬಂಧಕ್ಕೆ ಸಾಕ್ಷಿ ಟ್ರಂಪ್ ಅವರ ಸಲಹೆಗಾರ ಹೋಪ್ ಹಿಕ್ಸ್ ಎಂದು ತಿಳಿಸಿದ್ದಾರೆ.












Click it and Unblock the Notifications