Donald Trump: ಚೀನಾ ವಿರುದ್ಧ ಶೇ. 245 ರಷ್ಟು ಗರಿಷ್ಠ ತೆರಿಗೆ ಘೋಷಿಸಿದ ಟ್ರಂಪ್!

ಜಾಗತಿಕ ಆರ್ಥಿಕತೆಯಲ್ಲಿ ಈಗ ಇರಲಾರದೆ ಇರುವೆ ಬಿಟ್ಟುಕೊಳ್ಳುವ ಕೆಲಸ ಶುರುವಾಗಿದ್ದು, ಮನುಷ್ಯರ ಬುಡವೇ ಅಲುಗಾಡುವ ಸ್ಥಿತಿ ನಿರ್ಮಾಣ ಆಗಿದೆ. ಚೀನಾ & ಅಮೆರಿಕ ನಡುವೆ ಭೀಕರವಾದ ತೆರಿಗೆ ಯುದ್ಧ ನಡೆಯುತ್ತಿದ್ದು, ಟ್ಯಾಕ್ಸ್ ವಾರ್ ಕಾರಣಕ್ಕೆ ಎರಡು ದೈತ್ಯ ದೇಶಗಳ ಸಂಬಂಧ ಹಾಳಾಗಿ ಹೋಗುತ್ತಿದೆ. ನೋಡ ನೋಡುತ್ತಲೇ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆ ಮಾಡಿ ಚೀನಾ ವಿರುದ್ಧ ಗರಂ ಆಗಿದ್ದ ಡೊನಾಲ್ಡ್ ಟ್ರಂಪ್, ಇದೀಗ ಮತ್ತೊಂದು ಮನೆ ಮುಳುಗಿಸುವ ಯೋಜನೆ ಘೋಷಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಬಂದ ನಂತರ, ತೆರಿಗೆ ಯುದ್ಧ ಎಂಬ ಹೊಸ ತಿಕ್ಕಾಟ ಶುರುವಾಗಿದೆ. ಈ ತೆರಿಗೆ ಯುದ್ಧದ ಮುಂದುವರಿದ ಭಾಗವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಚೀನಾ ವಿರುದ್ಧ ಮತ್ತಷ್ಟು ಸೇಡಿನ ಕ್ರಮಕ್ಕೆ ಮುಂದಾಗಿದೆ. ಚೀನಾ ಮೂಲಕ ರಫ್ತು ಆಗುವ ವಸ್ತುಗಳ ಮೇಲೆ ಗರಿಷ್ಠ 245% ತನಕ ಹೊಸ ಸುಂಕ ಘೋಷಿಸಿ ಮತ್ತೆ ತೊಡೆತಟ್ಟಿರುವ ಟ್ರಂಪ್, ಆರ್ಥಿಕತೆ ಬುಡ ಅಲುಗಾಡಿಸಿದ್ದಾರೆ. ಶ್ವೇತ ಭವನ ಈ ರೀತಿಯ ಹೊಸ ಆದೇಶವನ್ನ ನೀಡಿರುವ ಹಿನ್ನೆಲೆಯಲ್ಲಿ ಚೀನಾ ಕೂಡ ರೊಚ್ಚಿಗೆದ್ದಿದ್ದು, ಯಾವ ನಿರ್ಧಾರ ಪ್ರಕಟಿಸಲಿದೆ? ಎಂಬುದನ್ನ ಕಾದು ನೋಡಬೇಕಿದೆ.

Trump Administration Is Decided To Impose Up to 245 Percent Of Tariffs Against The China

ಹೆಚ್ಚಿನ ನಷ್ಟ ಆಗುವುದು ಅಮೆರಿಕಗೆ?

ಚೀನಾ ವಿರುದ್ಧ ಈ ರೀತಿಯಾಗಿ ಹೆಚ್ಚಿನ ತೆರಿಗೆ ಹಾಕುತ್ತಾ, ಟ್ಯಾಕ್ಸ್ ವಾರ್ ಮಾಡುತ್ತಿರುವುದು ಕೊನೆಗೆ ಅಮೆರಿಕದ ಬುಡಕ್ಕೇ ಸಮಸ್ಯೆ ಉಂಟು ಮಾಡುವ ಭಯ ಕಾಡುತ್ತಿದೆ. ಯಾಕೆ ಅಂದ್ರೆ, ಚೀನಾ ರಫ್ತು ಮಾಡುವ ವಸ್ತುಗಳು ಇಲ್ಲದೆ ಅಮೆರಿಕ ಜೀವನ ನಡೆಸಲು ಆಗುವುದೇ ಇಲ್ಲ. ಅಷ್ಟು ದೊಡ್ಡ ಪ್ರಮಾಣದಲ್ಲಿ ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ವಹಿವಾಟುಗಳು ನಡೆಯುತ್ತಾ ಬಂದಿವೆ. ಇಂತಹ ಸಮಯದಲ್ಲಿ ದಿಢೀರ್ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಚೀನಾ ವಿರುದ್ಧ ತೊಡೆತಟ್ಟಿದ್ದಾರೆ.

ಅಮೆರಿಕದಲ್ಲಿ ಭಯದ ವಾತಾವರಣ ನಿರ್ಮಾಣ?

ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ನೀತಿ ಘೋಷಣೆ ಮಾಡಿದ ನಂತರ ಷೇರುಪೇಟೆ ಅಲುಗಾಡಲು ಶುರುವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಟ್ರಂಪ್ ಹೊಸ ತೆರಿಗೆ ನೀತಿ ಪ್ರಕಟಿಸಿದ ನಂತರ ದೊಡ್ಡ ಕೋಲಾಹಲ ಸೃಷ್ಟಿ ಆಗಿದೆ. ಜಾಗತಿಕ ಆರ್ಥಿಕತೆ ಡೊನಾಲ್ಡ್ ಟ್ರಂಪ್ ತೆರಿಗೆ ನೀತಿಯ ಪರಿಣಾಮ ನಲುಗಿ ಹೋಗಿದ್ದು, ಹೊಸ ಟ್ಯಾಕ್ಸ್ ಪ್ರಕಟವಾದ ನಂತರ ಅಮೆರಿಕದ ಷೇರುಪೇಟೆ ಭಯದಲ್ಲೇ ಬದುಕುವಂತೆ ಆಗಿದೆ. ಅಪ್ಪಿತಪ್ಪಿ ಇನ್ನೊಂದು ಎಡವಟ್ಟು ನಡೆದರೂ ಪರಿಸ್ಥಿತಿ ಸರಿ ಮಾಡುವುದೇ ಕಷ್ಟವಾಗಲಿದೆ ಎಂಬ ಅಭಿಪ್ರಾಯ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+