ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್- ಕಿಮ್ ಜಾಂಗ್ ಉನ್ ಭೇಟಿ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 09: ಹಾವು ಮುಂಗುಸಿಗಳು ಒಂದೆಡೆ ಸೇರಿ ಸೌಹಾರ್ದತೆಯ ಮಾತನಾಡಿದರೆ ಹೇಗಿರುತ್ತದೆ..? ಅದಕ್ಕಿಂತ ಅಚ್ಚರಿ ಬೇರೆ ಬೇಕಾ? ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಥದೊಂದು ಘಟನೆ ಘಟಿಸಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೋರಿಯಾ ಮುಖಂಡ ಕಿಮ್ ಜಾಂಗ್ ಉನ್ ಮೇ ತಿಂಗಳಿನಲ್ಲಿ ಭೇಟಿಯಾಗಲಿದ್ದಾರೆ ಎಂದು ಉಭಯ ನಾಯಕರ ಆಪ್ತ ಮೂಲಗಳು ತಿಳಿಸಿವೆ.

ಅಮೆರಿಕದ ಮೇಲೆ ಅಣುಬಾಂಬ್ ಪ್ರಯೋಗಿಸುವ ಮಾತನಾಡಿದ್ದ ಕಿಮ್ ಜಾಂಗ್ ಉನ್ ಇದ್ದಕ್ಕಿದ್ದಂತೇ ಮಾತುಕತೆಗೆ ಸಿದ್ಧವಾಗಿದ್ದು ಏಕೆ ಎಂಬುದು ಅಚ್ಚರಿ ಮೂಡಿಸಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಸ್ವತಃ ಉನ್ ಮಾತುಕತೆಗೆ ಆಹ್ವಾನಿಸಿದ್ದು, ಮೇ ತಿಂಗಳಿನಲ್ಲಿ ಉಭಯ ನಾಯಕರು ಭೇಟಿಯಾಗಲಿದ್ದಾರೆ.

ಕಿಮ್ ಜಾಂಗ್ ಮೇಲೆ ಟ್ರಂಪ್ ತಿರುಗೇಟಿನ ನ್ಯೂಕ್ಲಿಯರ್ ಬಾಂಬ್!ಕಿಮ್ ಜಾಂಗ್ ಮೇಲೆ ಟ್ರಂಪ್ ತಿರುಗೇಟಿನ ನ್ಯೂಕ್ಲಿಯರ್ ಬಾಂಬ್!

ತನ್ನ ಬಳಿ ಹೈಡ್ರೋಜನ್ ಬಾಂಬ್ ಇದೆ, ಅಣುಬಾಂಬ್ ಇದೆ ಎಂದು ಇಡೀ ಜಗತ್ತನ್ನೂ ಹೆದರಿಸುತ್ತಲೇ ಬಂದಿರುವ ಉತ್ತರ ಕೋರಿಯಾದ ಸರ್ವಾಧಿಕಾರಿ ಉನ್ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಯಲ್ಲಿ ಸೌಹಾರ್ದತೆಯ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಅಣ್ವಸ್ತ್ರ ನಾಶದ ಕುರಿತೂ ಇಬ್ಬರು ನಾಯಕರೂ ಮಾತುಕತೆ ನಡೆಸಲಿದ್ದಾರೆ.

Trump accepts invitation, will meet Kim Jong Un by May

ಉನ್ ರನ್ನು ಟ್ರಂಪ್ ಭೇಟಿಯಾದರೆ, ಉತ್ತರ ಕೊರಿಯಾ ನಾಯಕರೊಬ್ಬರನ್ನು ಭೇಟಿಯಾದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಖ್ಯಾತಿಗೂ ಟ್ರಂಪ್ ಪಾತ್ರರಾಗಲಿದ್ದಾರೆ. ಒಟ್ಟಿನಲ್ಲಿ ಶತ್ರು ದೇಶಗಳು ಹೀಗೆ ಕೈ ಕೈ ಹಿಡಿಯಲು ಹೊರಟಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ, ತಲ್ಲಣ ಸೃಷ್ಟಿಸಿದೆ.

English summary
US President Donald Trump has accepted North Korean leader Kim Jong Un's invitation and may meet him by May, according to a South Korean delegation who took the invitation to the White House on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X