2.5 ಕೋಟಿ ರೂಪಾಯಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಾಕೆಗೆ ಡ್ರೈವಿಂಗ್ ಲೈಸೆನ್ಸ್ ನವೀಕರಣಗೊಳಿಸಲಾಗಲಿಲ್ಲ....

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ಒಬ್ಬರಿಗಿಂತ ಒಬ್ಬರು ನೋಡಲು ಭಿನ್ನವಾಗಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೈಸರ್ಗಿವಾದ ತಮ್ಮ ರೂಪವನ್ನು ಬದಲಾಯಿಸಿಕೊಳ್ಳಲು ಇಷ್ಟ ಪಡುವುದು ಸಾಮಾನ್ಯವಾಗಿದೆ. ಹೀಗೆ ರೂಪ ಬದಲಾಯಿಸಿಕೊಂಡ ಮಹಿಳೆಯೊಬ್ಬಳು ಪೇಚೆಗೆ ಸಿಲುಕಿದ ಘಟನೆಯೊಂದು ಬ್ರೆಜಿಲ್‌ನಲ್ಲಿ ನಡೆದಿದೆ.

39 ವರ್ಷದ ಡೆನಿಸ್ ರೋಚಾ (Denise Rocha) ಬ್ರೆಜಿಲ್‌ನವರು. ಇವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಮೂಲಕ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ. ಆದರೆ ಪ್ಲಾಸ್ಟಿಕ್ ಸರ್ಜರಿ ಬಳಿಕ ಅವರು ಕೆಲ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಎದುರಾಗಿದೆ. ಹೌದು.. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಡೆನಿಸ್ ರೋಚಾ ಅವರು ತಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಹೆಣಗಾಡುತ್ತಿದ್ದಾರೆ.

driving-license-problem-for-brazil-woman

ವಯಸ್ಸಾದಂತೆ ಕಾಣುವುದನ್ನು ತಪ್ಪಿಸಿಕೊಳ್ಳಲು ಡೆನಿಸ್ ರೋಚಾ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆಯ ಮೂಲಕ ದೇವರು ಸೃಷ್ಟಿಸಿದ ಮುಖವನ್ನು ಬದಲಾಯಿಸಿಕೊಂಡಿದ್ದಾರೆ. ಇದರಿಂದಾಗಿ ಆಕೆಯ ತುಟಿಗಳು ಗಾತ್ರದಲ್ಲಿ ದೊಡ್ಡದಾಗಿದೆ, ಮಾತ್ರವಲ್ಲದೆ ಆಕೆಯ ಮುಖವೂ ಸಂಪೂರ್ಣವಾಗಿ ಬದಲಾಗಿ ಹೋಗಿದೆ.

ಡೆನ್ನಿಸ್ ತನ್ನ ಲುಕ್ ಬದಲಾಯಿಸಿಕೊಳ್ಳಲು 2.5 ಕೋಟಿ ಖರ್ಚು ಮಾಡಿದ್ದಾರೆ. ತನ್ನ ನೋಟವನ್ನು ಬದಲಾಯಿಸುವ ಮೂಲಕ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಡೆನ್ನಿಸ್‌ನ ಮುಖ ಎಷ್ಟು ಬದಲಾಗಿದೆ ಎಂದರೆ ಈಗ ಆಕೆಯ ಮುಖವನ್ನು ಯಾರೂ ಕೂಡ ಗುರುತಿಸಲು ಸಾಧ್ಯವಾಗುವುದಿಲ್ಲ. ಇದು ಆಕೆ ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕೂ ತೊಂದರೆಯನ್ನುಂಟು ಮಾಡಿದೆ.

ಪರವಾನಗಿ ನವೀಕರಣಕ್ಕಾಗಿ ಪರದಾಟ

ಡೆನ್ನಿಸ್ ಇತ್ತೀಚೆಗೆ ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸಬೇಕಾಗಿತ್ತು. ಆದರೆ ಆಕೆಯ ಮುಖ ಲೈಸೆನ್ಸ್‌ನಲ್ಲಿ ಇದ್ದ ಮುಖಕ್ಕಿಂತ ವಿಭಿನ್ನವಾಗಿ ಕಾಣಿಸುತ್ತಿತ್ತು. ಇದರಿಂದಾಗಿ ಅವರ ಡ್ರೈವಿಂಗ್ ಲೈಸೆನ್ಸ್ ನವೀಕರಣವಾಗಲಿಲ್ಲ. ಆಕೆಯ ಲೈಸೆನ್ಸ್ ನವೀಕರಿಸಲು ಹೋದಾಗ ಸಿಬ್ಬಂದಿ ಆಕೆಯ ರೂಪದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಆಕೆ ಶಸ್ತ್ರಚಿಕಿತ್ಸೆಗೂ ಮುನ್ನ ಇಂತಹ ಸಮಸ್ಯೆಯ ಬಗ್ಗೆ ಯೋಚಿಸಿಯೇ ಇರಲಿಲ್ಲ.

ಪ್ರಪಂಚದಲ್ಲಿ ಅನೇಕ ಜನರು ದೇವರು ನೀಡಿದ ನೋಟವನ್ನು ಇಷ್ಟಪಡುವುದಿಲ್ಲ. ಹೀಗಾಗಿ ಅವರು ಅದನ್ನು ಸುಧಾರಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹಣವಿದ್ದವರು ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಇಡೀ ದೇಹವನ್ನೇ ಮಾರ್ಪಡಿಸುತ್ತಾರೆ. ಕೆಲವೊಮ್ಮೆ ಈ ಪ್ಲಾಸ್ಟಿಕ್ ಸರ್ಜರಿಯಿಂದ ಕೆಲವರು ಕೆಲ ಆರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಾರೆ. ಸದ್ಯ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಈ ಮಹಿಳೆ ಬಾರೀ ಸುದ್ದಿಯಲ್ಲಿದ್ದು ಡ್ರೈವಿಂಗ್ ಲೈಸೆನ್ಸ್ ನವೀಕರಣಗೊಳಿಸಲು ಸಾಧ್ಯವಾಗದೇ ಪೇಚೆಗೆ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+