ನದಿಗೆ ಬಿದ್ದ ತೈಪೆ ವಿಮಾನ, ಹಲವಾರು ಮಂದಿ ಸಾವು
ತೈಪೆ, ಫೆ.4: ತೈವಾನ್ ರಾಜಧಾನಿ ತೈಪೆಯಲ್ಲಿ ಬುಧವಾರ ಬೆಳಗ್ಗೆ ವಿಮಾನ ದುರಂತ ಸಂಭವಿಸಿದೆ. ಸುಮಾರು 53 ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆದ ಕೆಲ ನಿಮಿಷಗಳಲ್ಲೇ ಸೇತುವೆಯೊಂದಕ್ಕೆ ಗುದ್ದಿ ನದಿಗೆ ಬಿದ್ದಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ
ಇತ್ತೀಚಿನ ವರದಿಗಳು ಬಂದಾಗ ತೈಪೆ ನದಿಯಿಂದ ಸುಮಾರು 9 ಶವಗಳನ್ನು ಹೊರ ತೆಗೆಯಲಾಗಿದೆ. ಇನ್ನುಳಿದ 48ಕ್ಕೂ ಜನ ನೀರಲ್ಲಿ ಮುಳುಗಿರುವ ವಿಮಾನದಲ್ಲಿ ಸಿಲುಕಿಹಾಕಿಕೊಂಡಿದ್ದು, ಅವರು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾನ್ಸ್ ಏಷ್ಯಾ ಏರ್ ವೇಸ್ ಗೆ ಸೇರಿದ ಎಟಿಆರ್ 72 ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 58 ಜನರಿದ್ದರು. ಇಲ್ಲಿ ತನಕ ಇಬ್ಬರು ಮಕ್ಕಳು ಸೇರಿದಂತೆ 17 ಜನರನ್ನು ರಕ್ಷಿಸಲಾಗಿದೆ ಎಂದು ತೈವಾನ್ ಸರ್ಕಾರ ಹೇಳಿದೆ.
ಫ್ರೆಂಚ್ ನಿರ್ಮಿತ ಟ್ವಿನ್ ಇಂಜಿನ್ ಟರ್ಬೊ ಪ್ರಾಪ್ ಎಟಿಆರ್ 72 ವಿಮಾನ ತೈವಾನ್ ನಲ್ಲಿ ವಾಣಿಜ್ಯ ಉದ್ದೇಶಿತ ವಿಮಾನವಾಗಿದೆ. ಈ ಹಿಂದೆ ಕೂಡಾ ಎಟಿಆರ್ 72 ವಿಮಾನದ ಬಗ್ಗೆ ಪ್ರಶ್ನೆಗಳು ಎದ್ದಿತ್ತು.
#Taiwan: At least 12 people killed, 30 missing after plane crash in #Taipei river. Video from accident: pic.twitter.com/19Jle8OA3u
— José Miguel Sardo (@jmsardo) February 4, 2015 ಕಳೆದ ಜುಲೈನಲ್ಲಿ ಪೆಂಘು ದ್ವೀಪದಲ್ಲಿ ಲ್ಯಾಂಡ್ ಆಗಬೇಕಿದ್ದ ಎಟಿಆರ್ 72 ವಿಮಾನ ಅಪಘಾತಕ್ಕೀಡಾಗಿ 48 ಜನರನ್ನು ಬಲಿ ಪಡೆದಿತ್ತು. ಕಳೆದ ವರ್ಷ ಕೂಡಾ ಟ್ರಾನ್ಸ್ ಏಷ್ಯಾ ವಿಮಾನ ತೈವಾನಿನ ಪಶ್ಚಿಮ ಕರಾವಳಿಯಲ್ಲಿ ಪತನಗೊಂಡು 50 ಜನರ ಸಾವಿಗೆ ಕಾರಣವಾಗಿತ್ತು.
Rescuers work to free passengers from a TransAsia plane that crash-landed into a river outside Taipei pic.twitter.com/4beaJWLygw
— Agence France-Presse (@AFP) February 4, 2015 ತೈವಾನ್ ವಿಮಾನ ಪ್ರಾಧಿಕಾರ ಅಧಿಕೃತ ಹೇಳಿಕೆ ಪ್ರಕಾರ, ವಿಮಾನದಲ್ಲಿದ್ದ 9 ಜನ ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿದ್ದು, ನದಿಗೆ ಬಿದ್ದ ಸಮಯದಲ್ಲಿ 58 ಜನ ವಿಮಾನದಲ್ಲಿದ್ದರು, 51 ಜನ ವಯಸ್ಕರು, 2 ಮಕ್ಕಳು, 5 ಜನ ಸಿಬ್ಬಂದಿ.












Click it and Unblock the Notifications