• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೇನ್ ಆಟಗಾರ ಡಿಯಾಗೋ ಕೋಸ್ಟಾಗೆ 'ದೇಶದ್ರೋಹಿ' ಪಟ್ಟ

By Mahesh
|
Google Oneindia Kannada News

ಬೆಂಗಳೂರು, ಜೂ.14: ಸ್ಪೇನಿನ ಮುಂಪಡೆ ಆಟಗಾರನಾಗಿ ಪ್ರಥಮ ಬಾರಿಗೆ ವಿಶ್ವಕಪ್ ನಲ್ಲಿ ಚೆಂಡು ಒದ್ದಿರುವ ಡಿಯಾಗೋ ಕೋಸ್ಟಾಗೆ ಬ್ರೆಜಿಲ್ಲಿನ ಅಭಿಮಾನಿಗಳು 'ದೇಶ ದ್ರೋಹಿ' ಎಂಬ ಪಟ್ಟ ಕಟ್ಟಿದ್ದಾರೆ. ಹುಟ್ಟಿದ್ದು ಎಲ್ಲೋ, ಬೆಳೆದಿದ್ದು ಎಲ್ಲೋ, ವಿಶ್ವಕಪ್ ನಲ್ಲಿ ಪ್ರತಿನಿಧಿಸುವ ದೇಶ ಇನ್ಯಾವುದೋ ಈ ಪರಿಸ್ಥಿತಿ ಈ ಬಾರಿಯ ವಿಶ್ವಕಪ್ ನಲ್ಲಿ ಅನೇಕ ಆಟಗಾರರನ್ನು ಕಾಡಿದೆ.

ಈ ಹಿಂದೆ ಇಟಲಿಯ ಮುಂಪಡೆ ಆಟಗಾರ ಮಾರಿಯೋ ಬಾಲೊಟೆಲ್ಲಿ ಇದೇ ಪರಿಸ್ಥಿತಿ ಎದುರಿಸಿದ್ದರು. ಘಾನಾದಿಂದ ಇಟಲಿಗೆ ವಲಸೆ ಬಂದ ಮಾರಿಯೋ ಪೋಷಕರು ಇಟಲಿಯಲ್ಲೇ ನೆಲೆಸಿದ್ದರೂ ಮಾರಿಯೋರನ್ನು ಪರಕೀಯನಂತೆ ಕಾಣಲಾಗುತ್ತಿತ್ತು. ನಿಜಾರ್ಥದಲ್ಲಿ ವಿಶ್ವಮಾನವರನ್ನು ಕಾಣಬಹುದಾದ ಜಾಗತಿಕ ಕ್ರೀಡೆ ಫುಟ್ಬಾಲ್ ನಲ್ಲಿ ಈ ರೀತಿ ಇನ್ನೂ ಅನೇಕ ಉದಾಹರಣೆಗಳು ಕಾಣಸಿಗುತ್ತವೆ.

ಆದರೆ, ಡಿಯಾಗೋ ಕೋಸ್ಟಾ ಕಥೆಯೇ ಬೇರೆ, 25 ವರ್ಷದ ಡಿಯಾಗೋ ಕೋಸ್ಟಾರನ್ನು ಅವಕಾಶವಾದಿ, ದೇಶದ್ರೋಹಿ ಎಂದು ಅಭಿಮಾನಿಗಳು ಜರೆಯುತ್ತಿದ್ದಾರೆ. 2014ರ ಬಿ ಗುಂಪಿನ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ ಫಾರ್ವರ್ಡ್ ಆಗಿ ಕೋಸ್ಟಾ ಕಾಣಿಸಿಕೊಂಡಿದ್ದಾರೆ.

ಸ್ಪೇನ್ ಮೊದಲ ಗೋಲು ಗಳಿಕೆಗೆ ಸಹಕಾರಿಯಾಗಿ ಪಂದ್ಯದ 62ನೇ ನಿಮಿಷ ತನಕ ಮೈದಾನದಲ್ಲಿದ್ದರು. ಆದರೆ, ಪಂದ್ಯವನ್ನೇನು ಗೆಲ್ಲಿಸಿ ಕೊಡಲಿಲ್ಲ. ಕೋಸ್ಟಾ ಆಟ ನೋಡಿ ಸ್ಪೇನ್ ಅಭಿಮಾನಿಗಳು ಖುಷಿಯಾಗಿರಬಹುದು. [ಸ್ಪೇನ್ vs ನೆದರ್ಲೆಂಡ್ ಮುಖಾಮುಖಿ]

ಆದರೆ, ಬ್ರೆಜಿಲ್ ಅಭಿಮಾನಿಗಳು ಮಾತ್ರ ಮೈದಾನಕ್ಕೆ ಡಿಯಾಗೋ ಕೋಸ್ಟಾ ಕಾಲಿಡುತ್ತಿದ್ದಂತೆ 'ದೇಶದ್ರೋಹಿ' ಎಂದು ಕೂಗಿ ಕರೆದಿದ್ದಾರೆ. ಹುಟ್ಟೂರು ಬ್ರೆಜಿಲ್ ಬಿಟ್ಟು ಸ್ಪೇನ್ ಪರ ಆಡುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ಅಬ್ಬರಿಸಲಾಗಿದೆ. ಅಭ್ಯಾಸ ಪಂದ್ಯಗಳ ಸಮಯದಲ್ಲೂ ಕೋಸ್ಟಾರನ್ನು ಸ್ಥಳೀಯರು ಪರಕೀಯನಂತೆ ನೋಡಿಕೊಂಡಿರುವ ವರದಿ ಬಂದಿದೆ.

ಬ್ರೆಜಿಲ್ ನಲ್ಲಿ ಅವಕಾಶ ವಂಚಿತ: ಸ್ಪೇನ್ ತಂಡ ಸೇರುವುದಕ್ಕೂ ಮುನ್ನ ಬ್ರೆಜಿಲ್ ಪರ 2 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದರು. ನಂತರ ಕಳೆದ ವರ್ಷ ಬ್ರೆಜಿಲ್ ಕೋಚ್ ಲೂಯಿಜ್ ಫಿಲಿಫೆ ಸ್ಕೋಲಾರಿ ಅವಕೃಪೆಗೆ ಸಿಲುಕಿದ್ದರು.

'ಬ್ರೆಜಿಲ್ ಜರ್ಸಿ ಕಳಚಿ, ಬೇರೆ ದೇಶ ಪರ ಆಡಲು ಇಚ್ಛಿಸಿದವರನ್ನು ತಕ್ಷಣವೇ ತಂಡದಿಂದ ಕೈಬಿಡಲಾಗುತ್ತದೆ' ಎಂದು ಸ್ಕೋಲಾರಿ ಘೋಷಿಸಿದ್ದರು. ಹೀಗಾಗಿ ಈ ಬಾರಿ ವಿಶ್ವಕಪ್ ನಲ್ಲಿ ಐದು ಬಾರಿ ಚಾಂಪಿಯನ್ ಬ್ರೆಜಿಲ್ ಪರ ಆಡುವ ಅವಕಾಶವನ್ನು ಕೋಸ್ಟಾ ಕಳೆದುಕೊಂಡಿದ್ದರು.

ಮಾರ್ಚ್ 2013ರಲ್ಲಿ ಬ್ರೆಜಿಲ್ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಕೋಸ್ಟಾ, ಅದೇ ವರ್ಷ ಜುಲೈನಲ್ಲಿ ಸ್ಪೇನ್ ದೇಶದ ಪೌರತ್ವ ಪಡೆದುಕೊಂಡರು. ಸ್ಪೇನಿನ ಅಟ್ಲಾಟಿಕೋ ಮ್ಯಾಡ್ರಿಡ್ ಪರ ಆಡತೊಡಗಿದರು. ಈ ವರ್ಷದ ಸ್ಪಾನಿಷ್ ಲೀಗ್ ಕೂಡಾ ಗೆದ್ದ ತಂಡದ ಸದಸ್ಯ ಎನಿಸಿದರು.

ನಂತರ ಕ್ಲಬ್ ಬದಲಿಸುವಂತೆ ದೇಶವನ್ನೇ ಬದಲಿಸಿಬಿಟ್ಟರು. ಆದರೆ, ಯಾವಾಗ ಬ್ರೆಜಿಲ್ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎನಿಸಿತೋ ವಿಶ್ವಕಪ್ ಆಡಲೇಬೇಕೆಂಬ ಹಂಬಲದಿಂದ ಸ್ಪೇನ್ ತಂಡ ಪ್ರತಿನಿಧಿಸಲು ನಿರ್ಧರಿಸಿದರು.

'ನಾನು ವಿಶ್ವಕಪ್ ಆಡಿ ಗೆಲ್ಲಬೇಕಿದೆ. ಸ್ಪೇನ್ ಸದ್ಯಕ್ಕೆ ನಾನು ಪ್ರತಿನಿಧಿಸುವ ದೇಶ' ಎಂದು ಕೋಸ್ಟಾ ಹೇಳಿದ್ದಾರೆ. ಸ್ಪಾನೀಷ್ 19ನೇ ನಂಬರ್ ಜರ್ಸಿ ಆಟಗಾರನಿಗೆ ತವರು ನೆಲದಲ್ಲಿ ಪ್ರತಿಭಟನೆಯ ಸ್ವಾಗತ ಸಿಕ್ಕಿದ್ದು, ಇನ್ನೊಂದು ತಿಂಗಳು ಈ ಸಮಸ್ಯೆ ಎದುರಿಸಲೇಬೇಕಿದೆ. ದೇಶಕ್ಕಿಂತ ಆಟ ಮುಖ್ಯ ಎಂದು ಕೋಸ್ಟಾ ಮೈದಾನಕ್ಕಿಳಿಯುವುದನ್ನು ನಿಲ್ಲಿಸುವುದಿಲ್ಲ.

English summary
Brazilian Diego Costa made his FIFA World Cup debut here on Friday (June 13) in his home country, not for them but for holders Spain.Costa had won two caps for his homeland Brazil before switching allegiance to Spain. He made his Spanish international debut in March this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X