ನ್ಯೂಜೆರ್ಸಿ ಬಳಿ ಭೀಕರ ರೈಲು ಅಪಘಾತ, 3 ಸಾವು

Posted By:
Subscribe to Oneindia Kannada

ನ್ಯೂಜೆರ್ಸಿ, ಸೆಪ್ಟೆಂಬರ್ 29 : ನ್ಯೂ ಜೆರ್ಸಿ ರಾಜ್ಯದ ಹೊಬೊಕನ್ ನಲ್ಲಿ ಪ್ಯಾಸೆಂಜರ್ ರೈಲೊಂದು ಹಳಿತಪ್ಪಿ ಗುರುವಾರ ಅಪಘಾತಕ್ಕೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಮೂವರು ಸಾವಿಗೀಡಾಗಿದ್ದು, ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಸ್ಥಳೀಯ ರೇಡಿಯೋ ಸ್ಟೇಷನ್ ನೀಡಿರುವ ವರದಿಯ ಪ್ರಕಾರ, ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಅಡ್ಡಗೋಡೆಯನ್ನು ಸೀಳಿಕೊಂಡು ರಿಸೆಪ್ಶನ್ ಕೌಂಟರ್‌ಗೆ ರೈಲು ನುಗ್ಗಿದೆ. ಅಪಘಾತದ ತೀವ್ರತೆಗೆ ನಿಲ್ದಾಣದ ಛಾವಣಿ ಮುರಿದುಬಿದ್ದಿದೆ.

Train crashes into New Jersey Transit Hoboken station

ನ್ಯೂಯಾರ್ಕ್ ನಿಂದ ಹನ್ನೊಂದು ಕಿ.ಮೀ. ದೂರದಲ್ಲಿರುವ ಹೊಬೊಕನ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲಿನಲ್ಲಿ ಸಿಲುಕಿದ್ದ ಪ್ರಯಾಣಿಕರು ಕಿಟಕಿಯ ಮುಖಾಂತರ ಹೊರಬರಲು ಹರಸಾಹಸ ಮಾಡುತ್ತಿದ್ದರು.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A commuter train has crashed into a railway station in the city of Hoboken, in the US state of New Jersey. Eyewitness say that more than 100 people are injured in the accident. The train went off the track and crashed.
Please Wait while comments are loading...