• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸಿರಪ್ ಸೇವಿಸಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 195ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ನವೆಂಬರ್ 7: ಮೂತ್ರಪಿಂಡ ವೈಫಲ್ಯ ಅಥವಾ ಸಿರಪ್ ಔಷಧಿಗಳಲ್ಲಿ ಕಂಡುಬರುವ ಹಾನಿಕಾರಕ ಪದಾರ್ಥಗಳಿಂದ ಮೃತಪಟ್ಟಿರುವ ಮಕ್ಕಳ ಸಂಖ್ಯೆಯು 195ಕ್ಕೆ ಏರಿಕೆಯಾಗಿದೆ ಎಂದು ಇಂಡೋನೇಷ್ಯಾ ತಿಳಿಸಿದೆ.

ಆಗ್ನೇಯ ಏಷ್ಯಾದ ದೇಶವು ಆಗಸ್ಟ್‌ನಿಂದ ತೀವ್ರ ಮೂತ್ರಪಿಂಡದ ಗಾಯದ (AKI) ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿತು. ಈ ಬೆಳವಣಿಗೆ ಕುರಿತು ತನಿಖೆ ನಡೆಸಿದ ನಂತರದಲ್ಲಿ ಎಲ್ಲಾ ದ್ರವ ಔಷಧ ಮಾರಾಟದ ಮೇಲೆ ನಿಷೇಧವನ್ನು ಹೇರಲಾಯಿತು.

70 ಮಕ್ಕಳ ಸಾವಿಗೆ ಭಾರತದ ಕೆಮ್ಮಿನ ಔಷಧಿ ಕಾರಣವಲ್ಲ ಎಂದ ಗ್ಯಾಂಬಿಯಾ70 ಮಕ್ಕಳ ಸಾವಿಗೆ ಭಾರತದ ಕೆಮ್ಮಿನ ಔಷಧಿ ಕಾರಣವಲ್ಲ ಎಂದ ಗ್ಯಾಂಬಿಯಾ

ದೇಶಾದ್ಯಂತ 320ಕ್ಕೂ ಹೆಚ್ಚು ತೀವ್ರ ಮೂತ್ರಪಿಂಡದ ಗಾಯದ ಪ್ರಕರಣಗಳು ದಾಖಲಾಗಿವೆ. 27ಕ್ಕೂ ಹೆಚ್ಚು ರೋಗಿಗಳು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಮೊಹಮ್ಮದ್ ಸೈಹ್ರಿಲ್ ತಿಳಿಸಿದ್ದಾರೆ.


5 ವರ್ಷದೊಳಗಿನ ಮಕ್ಕಳಿಗೆ ಅಪಾಯ:

ಸಿರಪ್ ಔಷಧಿ ಸೇವಿಸಿ ಅಪಾಯಕ್ಕೊಳಗಾದ ಮಕ್ಕಳಲ್ಲಿ 5 ವರ್ಷದೊಳಗಿನ ಮಕ್ಕಳು ಹೆಚ್ಚಾಗಿದ್ದಾರೆ. ಕಳೆದ ಅಕ್ಟೋಬರ್ 21ರಂದು ದೃಢಪಡಿಸಿದ ಅಂಕಿ-ಅಂಶಗಳ ಪ್ರಕಾರ, 133 ಮಕ್ಕಳು ಈ ಸಿರಪ್ ಸೇವನೆಯಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಅದೇ ಸಂಖ್ಯೆಯು ಇದೀಗ 195ಕ್ಕೆ ಏರಿಕೆಯಾಗಿದೆ ಎಂದು ಇಂಡೋನೆಷ್ಯಾ ಸರ್ಕಾರವು ತಿಳಿಸಿದೆ.

ಹೆಚ್ಚಿನ ಪ್ರಮಾಣದ ಎಥಿಲೀನ್ ಗ್ಲೈಕಾಲ್ ಮತ್ತು ಡೈಥಿಲೀನ್ ಗ್ಲೈಕೋಲ್ ಅನ್ನು ಹೊಂದಿರುವ ಸಿರಪ್‌ಗಳಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂಬುದು ವೈದ್ಯಕೀಯ ಪರೀಕ್ಷೆಗಳಲ್ಲಿ ದೃಢಪಟ್ಟಿದೆ. ಕೈಗಾರಿಕಾ ಉತ್ಪನ್ನಗಳಲ್ಲಿ ಬಳಸುವ ಸೈಹ್ರಿಲ್ ಮತ್ತು ಆಂಟಿಫ್ರೀಜ್‌ನಂತಹ ಎರಡು ಸಂಯುಕ್ತಗಳ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ.

ತೀವ್ರ ಮೂತ್ರಪಿಂಡದ ಗಾಯ ವಿರೋಧಿ ಔಷಧಿ ಆಮದು:

ಇಂಡೋನೆಷ್ಯಾ ಸರ್ಕಾರವು ತೀವ್ರ ಮೂತ್ರಪಿಂಡದ ಗಾಯದ ವಿರೋಧಿ ಔಷಧಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದುವರೆಗೂ 246 ಬಾಟಲಿ ಔಷಧಿಯನ್ನು ತರಿಸಿಕೊಳ್ಳಲಾಗುತ್ತಿದ್ದು, ಆಸ್ಟ್ರೇಲಿಯಾ ಮತ್ತು ಸಿಂಗಾಪುರ್ ನಿಂದ ಹೆಚ್ಚು ಆಮದು ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಕಳೆದ ತಿಂಗಳು ಇಂಡೋನೇಷ್ಯಾದ ರಾಷ್ಟ್ರೀಯ ಆಹಾರ ಮತ್ತು ಔಷಧ ಏಜೆನ್ಸಿಯು ಐದು ಸಿರಪ್‌ಗಳನ್ನು ಹೆಸರಿಸಿದ್ದು, ಅವುಗಳು ಅಪಾಯಕಾರಿ ಮಟ್ಟದ ಹಾನಿಕಾರಕ ವಸ್ತುಗಳನ್ನು ಒಳಗೊಂಡಿವೆ ಎಂಬುದನ್ನು ಗುರುತಿಸಿತ್ತು. ಅಲ್ಲದೇ ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಲು ಮತ್ತು ನಾಶಪಡಿಸಲು ಆದೇಶಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಮೂರು ಸ್ಥಳೀಯ ಔಷಧೀಯ ಕಂಪನಿಗಳ ತನಿಖೆಯನ್ನು ಪ್ರಾರಂಭಿಸಿದರು. ಅವುಗಳಲ್ಲಿ ಎರಡು ಸಿರಪ್ ಔಷಧಿಗಳನ್ನು ಉತ್ಪಾದಿಸುವ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.

ಕೆಮ್ಮಿನ ಔಷಧಿ ಬಗ್ಗೆ ಶಂಕೆ ಏಕೆ?:

ಕಳೆದ ಅಕ್ಟೋಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗ್ಯಾಂಬಿಯಾದಲ್ಲಿ ತೀವ್ರವಾದ ಮೂತ್ರಪಿಂಡದ ಗಾಯ ಮತ್ತು 70 ಮಕ್ಕಳ ಸಾವಿಗೆ ಸಂಬಂಧಿಸಿರುವುದಾಗಿ ಗುರುತಿಸಲಾಗಿತ್ತು. ಈ ಸಂಬಂಧ ಗುರುತಿಸಲಾದ ನಾಲ್ಕು ಕಲುಷಿತ ಔಷಧಿಗಳಿಗೆ ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯನ್ನು ನೀಡಲಾಗಿತ್ತು. ಜುಲೈ ಅಂತ್ಯದ ವೇಳೆಗೆ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರವಾದ ಮೂತ್ರಪಿಂಡದ ಗಾಯದ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿತ್ತು. ಇಂಥ ಪ್ರಕರಣಗಳು ಹೆಚ್ಚಾಗುವುದಕ್ಕೆ ಈ ಕೆಮ್ಮಿನ ಔಷಧಿಗಳೇ ಕಾರಣವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದರು.

ವಿಶ್ವಸಂಸ್ಥೆ ಹೇಳಿದ್ದೇನು?:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ನಾಲ್ಕು ಕೆಮ್ಮು ಮತ್ತು ಶೀತದ ಸಿರಪ್‌ಗಳು ಭಾರತದಲ್ಲಿ ಮೇಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ. ಹೀಗಾಗಿ ಎಚ್ಚರಿಕೆಯ ನಂತರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತನಿಖೆಯನ್ನು ಪ್ರಾರಂಭಿಸಿತು. ಗ್ಯಾಂಬಿಯಾದ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಹರ್ಯಾಣ ರಾಜ್ಯದ ಔಷಧ ಅಧಿಕಾರಿಗಳು ನಂತರ ಮೇಡನ್ ಫಾರ್ಮಾದ ಉತ್ಪಾದನಾ ಸೌಲಭ್ಯದ ತಪಾಸಣೆಯ ಸಮಯದಲ್ಲಿ ಸ್ಪಷ್ಟವಾದ ಲೋಪಗಳನ್ನು ಕಂಡುಕೊಂಡರು.

ಗ್ಯಾಂಬಿಯಾದ ಸರ್ಕಾರ ಹೇಳಿದ್ದೇನು?:

ಗ್ಯಾಂಬಿಯಾದ ಔಷಧಿಗಳ ನಿಯಂತ್ರಣ ಏಜೆನ್ಸಿಯ ಅಧಿಕಾರಿ, ದೇಶದ ಡ್ರಗ್ಸ್ ನಿಯಂತ್ರಕ ಟಿಜಾನ್ ಜಾಲೋ, ಮಕ್ಕಳ ಸಾವಿನ ನಿಖರವಾದ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಹೇಳಿದರು. ಮಕ್ಕಳ ಸಾವಿಗೆ ಈ ಔಷಧಿಯೇ ಕಾರಣವಾಗಿತು ಎಂಬು ನಾವು ಇನ್ನೂ ತೀರ್ಮಾನಿಸಿಲ್ಲ, ಯಾವುದೇ ಔಷಧಿಯನ್ನು ತೆಗೆದುಕೊಳ್ಳದ ಮಕ್ಕಳು ಸಹ ಸಾವನ್ನಪ್ಪಿರುವ ಪ್ರಕರಣಗಳಿವೆ. ಬೇರೆ ಮಕ್ಕಳು ಸಹ ಮೃತಪಟ್ಟಿದ್ದಾರೆ. ಅವರು ತೆಗೆದುಕೊಂಡಿರುವ ಔಷಧಿಗಳನ್ನು ನಾವು ಪರೀಕ್ಷಿಸಿದ್ದೇವೆ, ಅವು ಉತ್ತಮವಾಗಿವೆ, ಎಂದು ಅವರು ಹೇಳಿದರು.

English summary
Total Children Death case rises to 195 from Cough Syrup Medicine in Indonesia. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X