• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕು ನಿಯಂತ್ರಿಸಲು 6 ಅಡಿಗಳ ಅಂತರ ಸಾಲದು

|
Google Oneindia Kannada News

ಮನೆಯ ಒಳಗೆ ಕೊರೊನಾ ಸೋಂಕನ್ನು ನಿಯಂತ್ರಿಸಲು ಆರು ಅಡಿಗಳಷ್ಟು ಅಂತರ ಸಾಲದು ಎಂದು ಅಧ್ಯಯನವೊಂದು ಹೇಳಿದೆ.

ಆರು ಅಡಿ ಕಾಯ್ದುಕೊಂಡರೆ ಕೊವಿಡ್-19 ಪಿಡುಗಿನಿಂದ ಸೇಫ್ ಅಂತ ನೀವು ಅಂದುಕೊಂಡಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯ ಬದಲಿಸಿಕೊಳ್ಳಿ. ಯಾಕೆಂದರೆ ಒಳಾಂಗಣಗಳಲ್ಲಿ ನೀವು 6 ಅಡಿ ಅಂತರ ಕಾಯ್ದುಕೊಳ್ಳುವುದು ಅಥವಾ 60 ಅಡಿ ದೂರ ಇರುವುದು ಎರಡೂ ಒಂದೇ ಎಂದು ಅಧ್ಯಯನ ಮಾಹಿತಿ ನೀಡಿದೆ.

ಮೂರನೇ ಅಲೆ ಎಚ್ಚರಿಕೆ ನಡುವೆ ಮಕ್ಕಳಲ್ಲಿ ಕ್ರಮೇಣ ಕೊರೊನಾ ಹೆಚ್ಚಳಮೂರನೇ ಅಲೆ ಎಚ್ಚರಿಕೆ ನಡುವೆ ಮಕ್ಕಳಲ್ಲಿ ಕ್ರಮೇಣ ಕೊರೊನಾ ಹೆಚ್ಚಳ

ಆರು ಅಡಿಗಳ ಅಂತರ ನಿಯಮವನ್ನು ವಿಶ್ವದೆಲ್ಲೆಡೆ ಬೇರೆ ಬೇರೆ ಆಯಾಮಗಳಲ್ಲಿ ಬಳಸಲಾಗುತ್ತಿದೆ. ಒಳಾಂಗಣವಿರಲಿ ಅಥವಾ ಹೊರಾಂಗಣ-6 ಅಡಿಗಳ ಆಂತರವಿರಬೇಕೆಂದು ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ಸಲಹೆ ನೀಡಿದರೆ, ಬ್ರಿಟನ್​ನಲ್ಲಿ 2 ಮೀಟರ್​ಗಳ ಅಂತರವನ್ನು ಪ್ರತಿಪಾದಿಸುತ್ತದೆ.

ಯೂರೋಪಿನ ಅನೇಕ ಭಾಗಗಳಲ್ಲಿ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸಹ ಇದೇ ಅಂತರ ಕಾಯ್ದುಕೊಳ್ಳಬೇಕೆಂದು ಹೇಳಿತ್ತು.

ಆರು ಅಡಿಗಳ ಅಂತರ ನಮಗೆ ನೆನಪಿಡಲು ಸುಲಭ ಮತ್ತು ಅದನ್ನು ಜಾರಿಯಲ್ಲಿಟ್ಟಿಕೊಳ್ಳಲು ಅಷ್ಟೇನೂ ಕಷ್ಟವಾಗದಾದರೂ ಹೊಸ ಅಧ್ಯಯನ ಈ ನಿಯಮ ಪ್ರಯೋಜನಕಾರಿ ಅಲ್ಲವೆಂದು ಹೇಳುತ್ತಿದೆ. ಒಳಾಂಗಣಗಳಲ್ಲಿ ವೈಯಕ್ತಿಕ ಲೆಕ್ಕಾಚಾರದ ಆಧಾರದಲ್ಲಿ ಅಂತರ ಕಾಯ್ದುಕೊಳ್ಳಬೇಕೆಂದು ಎಂಐಟಿ ಅಧ್ಯಯನ ಹೇಳುತ್ತದೆ.

ಸಸ್ಟೈನೆಬಲ್ ಸಿಟೀಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಕೊರೊನಾ ಹರಡದಂತೆ ತಡೆಗಟ್ಟಲು ಕೇವಲ ಮನುಷ್ಯ ಮನುಷ್ಯನ ನಡುವಿನ ಅಂತರದಿಂದ ಮಾತ್ರವಲ್ಲ ಜತೆಗೆ ಮಾಸ್ಕ್, ಗ್ಲೌಸ್ ಜತೆಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೂಡ ವಹಿಸಬೇಕು ಎಂದು ಹೇಳಿದೆ.

ಕೊವಿಡ್-19 ಮಹಾಮಾರಿ ಹರಡಲು ಶುರುಮಾಡಿದ ಆರಂಭದ ದಿನಗಳಲ್ಲಿ ಸೋಂಕಿತನೊಬ್ಬ ಕೆಮ್ಮಿದಾಗ, ಸೀನಿದಾಗ, ಇಲ್ಲವೇ ಉಗುಳಿದಾಗ ವೈರಸ್ ಹರಡುತ್ತದೆ ಅಂತ ಭಾವಿಸಲಾಗಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ ವೈರಸ್ ವಾತಾವರಣದಲ್ಲಿರುವ ದ್ರವಕಣಗಲ್ಲಿ ತೇಲಾಡುತ್ತಾ ಮೊದಲಿನ ವೈರಸ್​ಗಿಂತ ವೇಗವಾಗಿ ಚಲಿಸುತ್ತದೆ.

ಇದೇ ಆಧಾರದ ಮೇಲೆ ಎಂ​ಐಟಿ ಸಂಶೋಧಕರು, ರೂಮಿನಲ್ಲಿರುವ ಜನರು ಇರುವ ಪರಿಣಾಮ, ಅವರ ವರ್ತನೆ ಮತ್ತು ಗಾಳಿಯಲ್ಲಿ ಎಷ್ಟು ಹೊತ್ತಿನವರಗೆ ವೈರಸ್ ಓಲಾಡುತ್ತದೆ ಮೊದಲಾದ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡರು. ಪ್ರಶಾಂತವಾದ ವಾತಾವರಣವೊಂದರಲ್ಲಿ ಈ ಕಣಗಳು ನಿಧಾನವಾಗಿ ನೆಲಕ್ಕೆ ಬೀಳುವುದನ್ನು ಅವರು ಗಮನಿಸಿದ್ದಾರೆ.

ಆದರೆ, ಗಜಿಬಿಜಿಯಾಗಿರುವ ರೂಮಿನ ವಾತಾವರಣದಲ್ಲಿ ಅಂದರೆ ಅಲ್ಲಿರುವ ಜನ, ಮಾತಾಡುತ್ತಾ, ತಿನ್ನುತ್ತಾ, ಕುಡಿಯುತ್ತಾ, ಹಾಡುತ್ತಾ, ಸೀನುತ್ತಾ ಇರುವಾಗ ದ್ರವದ ಕಣಗಳು ಗಾಳಿಯಲ್ಲೇ ಇದ್ದವು ಮತ್ತು ರೂಮಿನ ಸುತ್ತ ಹರಡಿದವು ಎಂದು ಸಂಶೋಧಕರು ಹೇಳುತ್ತಾರೆ.

ಕಿಟಕಿ ಅಥವಾ ಫಿಲ್ಟ್ರೇಶನ್ ಮೂಲಕ ವೈರಸ್​ಯುಕ್ತ ಕಣಗಳನ್ನು ಗಾಳಿಯಲ್ಲಿ ಸುತ್ತಾಡದಂತೆ ಹೊರ ಹಾಕಬಹುದೆಂದು ಅವರು ಹೇಳುತ್ತಾರೆ.

ಮಾಸ್ಕ್ ಧರಿಸಿದರು ಸೂಕ್ಷ್ಮ ಕೊರೊನಾ ವೈರಾಣು ಸಮೀಪದಲ್ಲಿರುವ ವ್ಯಕ್ತಿಗಳಿಗೆ ಘಾತುಕವಾಗುವ ಸಾಧ್ಯತೆ ಇದೆ. ಸೀನಿದಾಗ ಕೊರೊನಾ ವೈರಸ್ ಹತ್ತಿರದಲ್ಲಿರುವ ವ್ಯಕ್ತಿಗಳ ಕೈ, ಮೊಣಕೈ ಮೇಲೆ ಕುಳಿತು ನಂತರ ದೇಹ ಸೇರುವ ಸಾಧ್ಯತೆ ಇದೆ.

ಇದರಿಂದ ಬಚಾವಾಗಬೇಕಾದರೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುದು ಸೂಕ್ತ ಎಂದು ವಿಜ್ಞಾನಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕೊರೊನಾ ಸೋಂಕು ತಗಲಬಾರದು ಎಂದರೆ ಕನಿಷ್ಠ 6 ಅಡಿಗಳ ಅಂತರ ಕಾಪಾಡಿಕೊಳ್ಳಿ ಎಂದು ವಿಜ್ಞಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ತಾಣಗಳಾದ ವಾಟ್ಸಾಪ್ ಮತ್ತು ಅಂತರ್ಜಾಲದಲ್ಲಿ ಕೊರೊನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ.

ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ಹಲವು ವಿಷಯಗಳನ್ನು ತಿಳಿಸಿದ್ದಾರೆ.

ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ ಎಪಿತೀಲಿಯಲ್ ಕೋಶಗಳಿಗೆ ಸೋಂಕು ಉಂಟು ಮಾಡುತ್ತದೆ. ಎಸ್.ಎ.ಆರ್.ಎಸ್.- ಸಿ.ಓ.ವಿ-2 ಮಾನವ ಜೀವಕೋಶಗಳ ಮೇಲೆ ಕೆಎಇಸಿ2 ಬಿಸಿ, ಬೆಳಕಿಗೆ ಒಡ್ಡಿಕೊಳ್ಳುವ (ರಿಸಿಪ್ಟರ್ಸ್) ಅಂಗದಂಥ ಮಾನವನ ಜೀವಕೋಶಗಳನ್ನು ಬಂಧಿಸುತ್ತದೆ, ಇದು ಹೆಚ್ಚಾಗಿ ಗಂಟಲು ಮತ್ತು ಶ್ವಾಸಕೋಶಗಳಲ್ಲಿ ಕಂಡುಬರುತ್ತದೆ.

ನಿಮ್ಮ ಚರ್ಮದ ಮೇಲಿನ ವೈರಾಣು, ಎಸಿಇ 2 ಅಭಿವ್ಯಕ್ತಿ ಕೊರತೆಯಿಂದಾಗಿ, ಹಾನಿಕಾರಕವಲ್ಲ. ಈ ವೈರಾಣುಗಳು ಮೂಗಿನ ಹೊಳ್ಳೆಗಳು, ಕಣ್ಣು ಮತ್ತು ಬಾಯಿ ಮೂಲಕ ಒಳ ಪ್ರವೇಶಿಸುತ್ತವೆ. ನಮ್ಮ ಕೈಗಳು ಈ ವೈರಾಣುವನ್ನು ನಮ್ಮ ಬಾಯಿ, ಮೂಗು ಮತ್ತು ಕಣ್ಣಿನ ಬಳಿಗೆ ತೆಗೆದುಕೊಂಡು ಹೋಗುವ ವಾಹಕಗಳಾಗಿವೆ. ಪದೇ ಪದೇ ನಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದರಿಂದ ಈ ಸೋಂಕು ತಡೆಸಲು ಸಾಧ್ಯವಾಗುತ್ತದೆ.

ಸೋಂಕಿನ ಡೋಸೇಜ್: ಮಕಾಕ್ (ಒಂದು ಜಾತಿ ಮಂಗ)ಗೆ ಸೋಂಕು ತಗುಲಲು 700000 ಪಿಎಫ್‌.ಯು ಡೋಸ್ ಅಗತ್ಯವಿರುತ್ತದೆ. ಪಿಎಫ್‌.ಯು (ಪ್ಲಕ್ ರೂಪಿಸುವ ಘಟಕ) ಮಾದರಿ ಸೋಂಕಿನ ಅಳತೆಯ ಒಂದು ಘಟಕವಾಗಿದೆ. ಆದಾಗ್ಯೂ ಪ್ರಾಣಿಗಳು ಯಾವುದೇ ಕ್ಲಿನಿಕಲ್ ಲಕ್ಷಣಗಳನ್ನು ತೋರಿಲ್ಲ, ಮೂಗಿನಿಂದ ಹೊರಬರುವ ರೋಗಾಣು ಹನಿಗಳು ಮತ್ತು ಜೊಲ್ಲಿನ ರಸ ವೈರಾಣುವನ್ನು ಒಳಗೊಂಡಿರುತ್ತವೆ.

ಮಾನವರಿಗೆ ಸೋಂಕು ತಗುಲಲು 700000ಪಿಎಫ್.ಯುಗಿಂತ ಹೆಚ್ಚಿನ ಡೋಸೇಜ್ ಬೇಕಾಗುತ್ತದೆ. ಜೈವಿಕವಾಗಿ ಮಾರ್ಪಾಡು ಮಾಡಿದ ಇಲಿಗಳ ಮೇಲೆ ನಡೆಸಲಾದ ಎಸಿಇ2 ರೆಸೆಪ್ಟರ್ಸ್ ನ ಪ್ರಾಣಿಗಳ ಮೇಲಿನ ಅಧ್ಯಯನವು ಸಾರ್ಸ್ ಸಹಿತವಾದ ಕೇವಲ 240 ಪಿ.ಎಫ್.ಯು.ನಿಂದ ಸೋಂಕು ಹರಡುತ್ತದೆ ಎಂಬುದನ್ನು ತೋರಿಸಿದೆ. ತುಲನಾತ್ಮಕವಾಗಿ ಅದು ಸೋಂಕಿತವಾಗಲು 70,000ಪಿಎಫ್.ಯು ಮಾರಕ ಕೊರೋನಾ ವೈರಾಣು ಬೇಕಾಗುತ್ತದೆ.

ಸೋಂಕಿನ ಅವಧಿ: ಒಬ್ಬ ವ್ಯಕ್ತಿಯು ಸೋಂಕನ್ನು ಇತರರಿಗೆ ಹರಡುವ ಸಮಯದ ಬಗ್ಗೆ ನಿಖರವಾಗಿ ತಿಳಿದಿಲ್ಲ, ಆದರೆ ಬಹುಶಃ 10-14 ದಿನಗಳವರೆಗೆ ಆಗಬಹುದು. ಸಾಂಕ್ರಾಮಿಕತೆಯ ಅವಧಿಯನ್ನು ಕೃತಕವಾಗಿ ಕಡಿಮೆ ಮಾಡುವುದು ಒಟ್ಟಾರೆ ಪ್ರಸರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ವಿಧಾನವಾಗಿದೆ. ಆಸ್ಪತ್ರೆಗೆ ಸೇರಿಸುವುದು, ಪ್ರತ್ಯೇಕವಾಗಿರಿಸುವುದು, ಲಾಕ್‌ಡೌನ್ ಮತ್ತು ದಿಗ್ಬಂಧನದಲ್ಲಿಡುವುದು ಎಲ್ಲವೂ ಪರಿಣಾಮಕಾರಿ ವಿಧಾನಗಳು.

ಯಾರಿಗೆ ಸೋಂಕು ತಗುಲಬಹುದು: ಯಾವುದೇ ವ್ಯಕ್ತಿ ವೈರಾಣುವಿನಿಂದ ಸೋಂಕಿತರಾಗಬಹುದು, ಅವರಲ್ಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸೋಂಕಿತರಾಗಬಹುದು.

ಹಲವು ಸೋಂಕು ಸಾಗಿಸುವವರಲ್ಲಿ ಅಂಥ ಲಕ್ಷಣಗಳು ಕಾಣಿಸುವುದಿಲ್ಲ. ನಮ್ಮ ಬಾಯಿ ಮತ್ತು ಮೂಗನ್ನು ಕೆಮ್ಮುವಾಗ ಮತ್ತು ಸೀನುವಾಗ ಮುಚ್ಚಿಕೊಳ್ಳುವುದರಿಂದ ಸೋಂಕನ್ನು ತಗ್ಗಿಸಬಹುದಾಗಿದೆ. ಸೋಂಕು ಸೋಂಕಿತ ವ್ಯಕ್ತಿಯ ಜೊಲ್ಲುರಸ, ಕಫ ಮತ್ತು ಮಲದಲ್ಲಿ ಸೋಕಿರುವ ಸಂಪೂರ್ಣ ಅವಧಿಯಲ್ಲಿರುತ್ತದೆ.

English summary
Physical distancing of two metres - about six and a half feet - may not be enough to sufficiently prevent transmission of virus-carrying airborne aerosols indoors, according to a study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X