ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

'ನಿಮ್ಮ ದುರಹಂಕಾರಕ್ಕೆ ಟೈಮ್ ತುಂಬಾ ಚಿಕ್ಕದು ಟ್ರಂಪ್'!

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಡೊನಾಲ್ಡ್ ಟ್ರಂಪ್ ದುರಹಂಕಾರಕ್ಕೆ ಟೈಮ್ಸ್ ಕೊಟ್ಟ ಉತ್ತರ | Oneindia Kannada

    94 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಅಮೆರಿಕದ ಖ್ಯಾತ ಪತ್ರಿಕೆ 'ಟೈಮ್' ಪ್ರತಿವರ್ಷ 'ವರ್ಷದ ವ್ಯಕ್ತಿ' ಪ್ರಶಸ್ತಿಯನ್ನು ವರ್ಷಾಂತ್ಯಕ್ಕೆ ಘೋಷಿಸುತ್ತದೆ. ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವರ್ಷದ ವ್ಯಕ್ತಿ ಎಂದು ಘೋಷಿಸಿತ್ತು.

    ಈಗ ಅದೇ 'ವರ್ಷದ ವ್ಯಕ್ತಿ' ಸಲ್ಲದ ಹೇಳಿಕೆಯನ್ನು ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ. "ಟೈಮ್ ಮ್ಯಾಗಜೀನ್ ಬಹುಶಃ ಸತತ ಎರಡನೇ ವರ್ಷವೂ ನನ್ನನ್ನೇ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಲು ಹವಣಿಸುತ್ತಿದೆ. ಆದರೆ, ಈ ಸ್ಪರ್ಧೆಯಿಂದ ನಾನು ಹಿಂದೆ ಸರಿದಿದ್ದೇನೆ" ಎಂದು ಅವರು ಶುಕ್ರವಾರ ಟ್ವೀಟ್ ಮಾಡಿ ವಿವಾದ ಹುಟ್ಟುಹಾಕಿದ್ದಾರೆ.

    ಮೋದಿ, ಚಾಯ್ ವಾಲಾರನ್ನು ಅಣಕಿಸಿದ ಕಾಂಗ್ರೆಸ್ ಗೆ ಜನರಿಂದ ಛೀಮಾರಿ

    ಜನರೇ ಆಯ್ಕೆ ಮಾಡುವ ಈ ಸ್ಪರ್ಧೆಯಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದವರು ಟೈಮ್ ಮ್ಯಾಗಜೀನ್ ಗೆ ವಿಶೇಷ ಸಂದರ್ಶನ ನೀಡಬೇಕಾಗುತ್ತದೆ ಮತ್ತು ಫೋಟೋಶೂಟ್ ನಲ್ಲಿ ಭಾಗವಹಿಸಬೇಕಾಗುತ್ತದೆ. ಸಂದರ್ಶನ ಮತ್ತು ಫೋಟೋಶೂಟ್ ಎರಡೂ ಇಷ್ಟವಿಲ್ಲದಿದ್ದರಿಂದ ನಾನು ಈ ಪ್ರಶಸ್ತಿಯನ್ನು 'ಪಾಸ್' ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

    ಇದಕ್ಕೆ ಪ್ರತಿಯಾಗಿ ಟ್ವಿಟ್ಟರ್ ನಲ್ಲಿ ಅವರ ವಿರುದ್ಧ ಹೇಳಿಕೆಗಳು ಪುಂಖಾನುಪುಂಖವಾಗಿ ಹರಿದುಡಾತ್ತಿವೆ. ಮಿಸ್ಟರ್ ಟ್ರಂಪ್ ನಿಮ್ಮ ದುರಂಕಾರವನ್ನು ಹಿಡಿದಿಡಲು ಟೈಮ್ ಪತ್ರಿಕೆ ಸಾಲದು ಎಂದು

    ಎನಿವೇ ಥ್ಯಾಂಕ್ಸ್ ಎಂದಿದ್ದಾರೆ ಡೊನಾಲ್ಡ್

    ಟೈಮ್ ಮ್ಯಾಗಜೀನ್ ನನಗೆ ಕರೆ ಮಾಡಿ, ಬಹುಶಃ ನೀವು ಕಳೆದ ವರ್ಷದಂತೆ 'ವರ್ಷದ ವ್ಯಕ್ತಿ'ಯಾಗಿ ಆಯ್ಕೆಯಾಗಲಿದ್ದೀರಿ. ಆದರೆ, ನಾನು ಸಂದರ್ಶನಕ್ಕೆ ಮತ್ತು ಫೋಟೋ ಶೂಟ್ ಗೆ ಒಪ್ಪಿಕೊಳ್ಳಬೇಕು. ಇದು ಸರಿಯಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ. ಆದ್ದರಿಂದ ನಾನು ಹಿಂದೆ ಸರಿದಿದ್ದೇನೆ. ಎನಿವೇ ಥ್ಯಾಂಕ್ಸ್ ಎಂದಿದ್ದಾರೆ ಡೊನಾಲ್ಡ್ ಟ್ರಂಪ್.

    ಆ ಬಹುಶಃ ಎಂಬ ಪದವೇ ಹೇಳತ್ತೆ...

    ಆ ಬಹುಶಃ ಎಂಬ ಪದವೇ ಹೇಳತ್ತೆ...

    ಇದಕ್ಕೆ ಟೈಮ್ ಮ್ಯಾಗಜೀನ್ ನ ಮಾಜಿ ಸಂಪಾದಕ ರಿಚರ್ಡ್ ಸ್ಟೆಂಜೆಲ್ ಬಲವಾದ ತಿರುಗೇಟು ನೀಡಿದ್ದು, "ಆ 'ಬಹುಶಃ' ಎನ್ನುವ ಪದವೇ ನೀವು ವರ್ಷದ ವ್ಯಕ್ತಿ ಅಲ್ಲ ಎಂದು ಹೇಳುತ್ತಿದೆ. ಅವರಿಗೆ ನಿಮ್ಮದೊಂದು ಫೋಟೋಶೂಟ್ ಬೇಕಾಗಿತ್ತು ಅಷ್ಟೆ. ಹೀಗೆಂದು ಮಾತ್ರಕ್ಕೆ ನೀವು ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದೀರೆಂದು ಅರ್ಥವಲ್ಲ" ಎಂದಿದ್ದಾರೆ.

    ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಟೈಮ್

    ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಟೈಮ್ ಮ್ಯಾಗಜೀನ್ ಕೂಡ ತಿರಸ್ಕರಿಸಿದೆ. ವರ್ಷದ ವ್ಯಕ್ತಿಯನ್ನು ನಾವು ಹೇಗೆ ಆಯ್ಕೆ ಮಾಡುತ್ತೇವೆಂದು ಟ್ರಂಪ್ ಹೇಳಿರುವುದು ಸರಿಯಲ್ಲ. ವರ್ಷದ ವ್ಯಕ್ತಿಯಾಗಿ ಅದನ್ನು ಪ್ರಕಟಿಸುವವರೆಗೆ ಟೈಮ್ ಮ್ಯಾಗಜೀನ್ ಈ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡುವುದಿಲ್ಲ ಎಂದು ತಿರುಗುಬಾಣ ಎಸೆದಿದೆ.

    ಹಿಲರಿಯನ್ನು ಹಿಂದಿಕ್ಕಿ ಟ್ರಂಪ್ ಆಯ್ಕೆಯಾಗಿದ್ದರು

    ಹಿಲರಿಯನ್ನು ಹಿಂದಿಕ್ಕಿ ಟ್ರಂಪ್ ಆಯ್ಕೆಯಾಗಿದ್ದರು

    ಅಧ್ಯಕ್ಷ ಪದವಿಗೆ ಟ್ರಂಪ್ ಗೆ ಟಕ್ಕರ್ ನೀಡಿದ್ದ ಹಿಲರಿ ಕ್ಲಿಂಟನ್, ಟರ್ಕಿ ಅಧ್ಯಕ್ಷ ರಿಸೆಪ್ ತಯಿಪ್ ಎರ್ಡೋಗನ್, ಯುಕೆಯ ಇಂಡಿಪೆಂಡೆನ್ಸ್ ಪಕ್ಷದ ನಾಯಕ ನೀಜೆಲ್ ಫರೇಜ್, ಹಾಡುಗಾರ್ತಿ ಬಿಯಾನ್ಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂತಾದವರನ್ನು ಹಿಂದಿಕ್ಕಿ ಡೊನಾಲ್ಡ್ ಟ್ರಂಪ್ ಅವರು ಜಯಶಾಲಿಯಾಗಿದ್ದಾರೆ ಎಂದು ಟೈಮ್ ಪತ್ರಿಕೆ ಕಳೆದ ವರ್ಷದ ಡಿಸೆಂಬರ್ ನಲ್ಲಿ ಘೋಷಿಸಿತ್ತು.

    ಸ್ಪರ್ಧೆಯಲ್ಲಿರುವ ಗಣ್ಯರು ಇವರೇ

    ಸ್ಪರ್ಧೆಯಲ್ಲಿರುವ ಗಣ್ಯರು ಇವರೇ

    ಈ ಬಾರಿ ಟ್ರಂಪ್ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಸ್ಟೀವ್ ಬೇನನ್, ಹಾಡುಗಾರ್ತಿ ಅರಿಯಾನಾ ಗ್ರಂಡೇ, ಫುಟ್ಬಾಲ್ ಆಟಗಾರ ಕಾಲಿನ್ ಕೇಪರ್ನಿಕ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್, ಮಾಜಿ ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮೆ, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಪೋಪ್ ಫ್ರಾನ್ಸಿಸ್ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ತಮ್ಮ ಕಥೆಯನ್ನು ಹೇಳಿಕೊಂಡಿದ್ದ ಇಬ್ಬರು ಮಹಿಳೆಯರು ಸ್ಪರ್ಧೆಯಲ್ಲಿದ್ದಾರೆ.

    ನಿಮ್ಮ ದುರಂಕಾರಕ್ಕೆ ಟೈಮ್ ತುಂಬಾ ಚಿಕ್ಕದು

    ನಿಮ್ಮ ದುರಂಕಾರಕ್ಕೆ ಟೈಮ್ ತುಂಬಾ ಚಿಕ್ಕದು

    ಡೊನಾಲ್ಡ್ ಟ್ವೀಟ್ ಗೆ ಟ್ವಿಟ್ಟರಿನಲ್ಲಿಯೇ ವಿಪರೀತ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನಿಮ್ಮ ದುರಹಂಕಾರವನ್ನು ಹಿಡಿದಿಡಲು ಟೈಮ್ ಮ್ಯಾಗಜೀನ್ ತುಂಬಾ ಚಿಕ್ಕದು. ನಿಮಗಿಂತ ಹಲವಾರು ಸಾಧಕರು ಈ ಪ್ರಶಸ್ತಿಗೆ ಅರ್ಹರಿದ್ದಾರೆ ಎಂದು ತಪರಾಕಿ ಕೊಟ್ಟಿದ್ದಾರೆ ರೋಸೆಲ್ಲಾ ಎಂಬುವವರು. ಓ ಮೈ ಗಾಡ್ ಟ್ರಂಪ್ ಶಟಪ್ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The magazine has said that the president Donald Trump is incorrect about how it makes its choice. Trump had tweeted that, Time Magazine called to say that I was PROBABLY going to be named 'Man (Person) of the Year', like last year.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more