• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಲ್ಬೋರ್ನ್ ನಲ್ಲಿ ಮೂವರಿಗೆ ಚೂರಿ ಇರಿತ, ಗಾಯಗೊಂಡಿದ್ದ ಓರ್ವನ ಸಾವು

|

ಮೆಲ್ಬೋರ್ನ್, ನವೆಂಬರ್ 09 : ಅಜಾನುಬಾಹು ವ್ಯಕ್ತಿಯಿಂದ ಮೆಲ್ಬೋರ್ನ್ ನ ಸಿಟಿ ಸೆಂಟರ್ ನಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಮೂವರಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಪೊಲೀಸರ ಮೇಲೆಯೂ ದಾಳಿ ಮಾಡಲು ಯತ್ನಿಸಿದಾಗ ಆತನಿಗೆ ಗುಂಡು ಹಾರಿಸಲಾಗಿದೆ.

ಈ ಘಟನೆ ಶುಕ್ರವಾರ ಸ್ಥಳೀಯ ಕಾಲಮಾನ 4.20ರ ಸುಮಾರಿಗೆ ನಡೆದಿದ್ದು, ಮೂವರಿಗೆ ತೀವ್ರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಒಬ್ಬರಿಗೆ ಕುತ್ತಿಗೆಯಲ್ಲಿ ಗಂಭೀರ ಗಾಯವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಎರಡನೇಯವರಿಗೆ ತಲೆಗೆ ಗಾಯವಾಗಿದ್ದು, ಅವರ ಆರೋಗ್ಯ ಸ್ಥಿತಿ ತಿಳಿದುಬಂದಿಲ್ಲ. ಮೂರನೇಯವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಸಾವಿಗೀಡಾದವರು ಯಾರು ಎಂದು ಇನ್ನೂ ತಿಳಿದುಬಂದಿಲ್ಲ.

ತನಿಖೆ ಆರಂಭಿಕ ಹಂತದಲ್ಲಿರುವುದರಿಂದ ಈ ಘಟನೆಯ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ. ಚಾಕುವಿನಿಂದ ಆತ ಸಾರ್ವಜನಿಕರನ್ನು ಇರಿಯಲು ಕಾರಣವೇನೆಂದು ಕೂಡ ಇನ್ನೂ ತಿಳಿದುಬಂದಿಲ್ಲ.

ಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆ

ನಂತರ ಆ ವ್ಯಕ್ತಿ ಪೊಲೀಸರೊಬ್ಬರ ಮೇಲೆ ದಾಳಿಗೆ ಯತ್ನಿಸಿದಾಗ ಅವರಿಗೆ ಗುಂಡಿಕ್ಕಲಾಗಿದೆ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಆತ ತನ್ನ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಆತನ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ವಿಕ್ಟೋರಿಯಾ ಪೊಲೀಸರು ವಿವರ ನೀಡಿದ್ದಾರೆ.

ಮಧ್ಯಾಹ್ನದ ಹೊತ್ತಿನಲ್ಲಿ ಕೆಲಸ ಮುಗಿಸಿ ಜನರು ಹೊರಬರುತ್ತಿರುವಾಗ ಈ ಘಟನೆ ನಡೆದಿದೆ. ಮೊದಲಿಗೆ ಜೋರಾದ ಶಬ್ದ ಕೇಳಿಬಂದಿದೆ, ನಂತರ ಕಾರು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ್ದಾರೆ. ಇದೇ ಸಮಯದಲ್ಲಿ ಆತ ಕೆಲ ಜನರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ಪ್ರದೇಶಕ್ಕೆ ಬರದಿರುವಂತೆ ಜನರಿಗೆ ಪೊಲೀಸರು ತಾಕೀತು ಮಾಡಿದ್ದಾರೆ.

English summary
Three people stabbed by unknown person in Melbourne, Australia on Friday. One person is reportedly dead. The cops shot that person when he tried to slash them. He was shot at by police. The condition of some of the injured and the accused is said to be critical.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X