• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೊಂಬಾಟ್ ಸುದ್ದಿ: ಕೊರೊನಾ ಲಸಿಕೆ ಹಾಕಿಸಿಕೊಂಡರೆ 8.40 ಕೋಟಿ ರೂ. ಮೌಲ್ಯದ ಮನೆ ಉಚಿತ!

|

ನವದೆಹಲಿ, ಮೇ 28: ಇಡೀ ಜಗತತ್ತಿನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸುರಕ್ಷಿತವಾಗಿರಲು ಲಸಿಕೆ ಒಂದೇ ಮಾರ್ಗವಾಗಿದೆ. ಇದರ ಮಧ್ಯೆ ಕೊವಿಡ್-19 ಲಸಿಕೆ ಪಡೆಯಲು ಹಿಂಜರಿಯುವ ಜನರನ್ನು ಆಕರ್ಷಿಸಲೆಂದೇ ಈ ದೇಶದಲ್ಲಿ ಬಂಪರ್ ಆಫರ್ ನೀಡಲಾಗುತ್ತಿದೆ.

ಹಾಂಗ್ ಕಾಂಗ್‌ನಲ್ಲಿ ಕೊರೊನಾವೈರಸ್ ಲಸಿಕೆ ಪಡೆದವರ ಹೆಸರಿನಲ್ಲಿ ಲಕ್ಕಿ ಡ್ರಾ ನೀಡಲಾಗುತ್ತಿದೆ. ಈ ಲಕ್ಕಿ ಡ್ರಾ ವಿಜೇತರಿಗೆ 14 ಲಕ್ಷ ಯುಎಸ್ ಡಾಲರ್(8.40 ಕೋಟಿ) ಮೌಲ್ಯದ 1BHK ಅಪಾರ್ಟ್ ಮೆಂಟ್ ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇದರ ಜೊತೆ ಲಸಿಕೆ ಹಾಕಿಸಿಕೊಂಡ 20 ಅದೃಷ್ಟಶಾಲಿಗಳಿಗೆ 1 ಲಕ್ಷ ಹಾಂಗ್ ಕಾಂಗ್ ಡಾಲರ್ ಹಣವನ್ನು ನೀಡಲಾಗುವುದು ಎಂದು ಪ್ರಾಪರ್ಟಿ ಡೆವಲಪರ್ಸ್ ಕಂಪನಿಯು ಪ್ರಕಟಿಸಿದೆ.

ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!

ಜಗತ್ತಿನಲ್ಲಿ ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ಕೊವಿಡ್-19 ಲಸಿಕೆಯನ್ನು ಖರೀದಿಸಿದ ರಾಷ್ಟ್ರಗಳಲ್ಲಿ ಹಾಂಗ್ ಕಾಂಗ್ ಕೂಡಾ ಒಂದಾಗಿದೆ. ದೇಶದ 75 ಲಕ್ಷ ಜನರಿಗೆ ಲಸಿಕೆ ನೀಡುವುದಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಕೊರೊನಾವೈರಸ್ ಲಸಿಕೆಯನ್ನು ಖರೀದಿಸಿ ಆಗಿದೆ. ಆದರೆ ಲಸಿಕೆ ಬಗ್ಗೆ ಅಪನಂಬಿಕೆ ಹಾಗೂ ಲಸಿಕೆ ಪಡೆಯಲು ಸಾರ್ವಜನಿಕರ ಹಿಂಜರಿಕೆಯಿಂದಾಗಿ ನಿಗದಿತ ಗುರಿ ತಲುಪುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಕೊವಿಡ್-19 ಲಸಿಕೆ ಹಾಕಿಸಿಕೊೊಂಡವರಿಗೆ ಲಕ್ಕಿ ಡ್ರಾ

ಕೊವಿಡ್-19 ಲಸಿಕೆ ಹಾಕಿಸಿಕೊೊಂಡವರಿಗೆ ಲಕ್ಕಿ ಡ್ರಾ

ಹಾಂಗ್ ಕಾಂಗ್‌ನಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸಪ್ಟೆಂಬರ್ 1ರೊಳಗೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳಬೇಕು. ಹೀಗೆ ಲಸಿಕೆ ಪಡೆದ ಪ್ರತಿಯೊಬ್ಬರ ಹೆಸರನ್ನು ಲಕ್ಕಿ ಡ್ರಾ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ ಎಂದು ಸಿನೋ ಗ್ರೂಪ್, ಎನ್ ಜಿ ತೆಂಗ್ ಫಾಂಗ್ ಚಾರಿಟೇಬಲ್ ಟ್ರಸ್ಟ್ ಮತ್ತು ಚೈನೀಸ್ ಎಸ್ಟೇಟ್ಸ್ ಹೋಲ್ಡಿಂಗ್ಸ್ ಸ್ಪಷ್ಟಪಡಿಸಿದೆ.

ಬಂಪರ್ ಬಹುಮಾನಕ್ಕೆ ಮೂಲನಿವಾಸಿಗಳಷ್ಟೇ ಅರ್ಹ

ಬಂಪರ್ ಬಹುಮಾನಕ್ಕೆ ಮೂಲನಿವಾಸಿಗಳಷ್ಟೇ ಅರ್ಹ

ಕೊರೊನಾವೈರಸ್ ಲಸಿಕೆ ಪಡೆದುಕೊಂಡ 18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರು ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಬಹುದು. ಆದರೆ ಹಾಂಗ್ ಕಾಂಗ್ ಮೂಲ ನಿವಾಸಿಗಳು ಮಾತ್ರ 14 ಲಕ್ಷ ಯುಎಸ್ ಡಾಲರ್ ಮೌಲ್ಯದ ಬಂಪರ್ ಬಹುಮಾನ ಆಗಿರುವ ಅಪಾರ್ಟ್ ಮೆಂಟ್ ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ. ಈ ಲಕ್ಕಿ ಡ್ರಾ ಸ್ಪರ್ಧೆಯಿಂದ ದೇಶದಲ್ಲಿ ಕೊವಿಡ್-19 ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡಾರ್ಲ್ ಎನ್ ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಸಿಕೆ ಪಡೆದವರಿಗೆ ಸರ್ಕಾರದಿಂದ ಯಾವುದೇ ಆಫರ್ ಇಲ್ಲ

ಲಸಿಕೆ ಪಡೆದವರಿಗೆ ಸರ್ಕಾರದಿಂದ ಯಾವುದೇ ಆಫರ್ ಇಲ್ಲ

ಹಾಂಗ್ ಕಾಂಗ್ ಸರ್ಕಾರವು ಕೊರೊನಾವೈರಸ್ ಲಸಿಕೆ ಪಡೆಯಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗದು ಬಹುಮಾನವನ್ನು ಘೋಷಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಸರ್ಕಾರದ ಮುಖ್ಯ ಕಾರ್ಯನಿರ್ವಾಹಕ ಕ್ಯಾರಿ ಲ್ಯಾಮ್ ತಿರಸ್ಕರಿಸಿದ್ದರು. ಅಲ್ಲದೇ, ಸ್ಥಳೀಯ ಉದ್ಯಮಿಗಳು ಮತ್ತು ಖಾಸಗಿ ಕಂಪನಿಗಳು ಈ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಸಲಹೆ ನೀಡಿದ್ದರು. ಲಸಿಕೆ ಪಡೆಯುವವರಿಗೆ ಉತ್ತೇಜನ ನೀಡಲು ಸರ್ಕಾರದಿಂದ ನಗದು ಅಥವಾ ಯಾವುದೇ ರೀತಿ ಆಫರ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಚಪಡಿಸಿದ್ದರು. ಇದಾಗಿ ಮೂರು ದಿನಗಳಲ್ಲಿ ಸಿನೋ ಗ್ರೂಪ್, ಎನ್ ಜಿ ತೆಂಗ್ ಫಾಂಗ್ ಚಾರಿಟೇಬಲ್ ಟ್ರಸ್ಟ್ ಈ ಲಕ್ಕಿ ಡ್ರಾ ಸ್ಪರ್ಧೆಯನ್ನು ಘೋಷಿಸಿದೆ.

ಲಸಿಕೆ ಪಡೆದವರಿಗೆ ಬಹುಮಾನ ನೀಡಿದ ಇತರೆ ರಾಷ್ಟ್ರಗಳು

ಲಸಿಕೆ ಪಡೆದವರಿಗೆ ಬಹುಮಾನ ನೀಡಿದ ಇತರೆ ರಾಷ್ಟ್ರಗಳು

ಕೊರೊನಾವೈರಸ್ ಲಸಿಕೆ ಪಡೆಯಲು ಸಾರ್ವಜನಿಕರನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಮೊದಲು ಜಗತ್ತಿನ ಹಲವು ರಾಷ್ಟ್ರಗಳು ಬಹುಮಾನಗಳನ್ನು ಘೋಷಿಸಿದ ಉದಾಹರಣೆಗಳು ಕಣ್ಣ ಮುಂದಿವೆ. ಈ ಮೊದಲು ಯುನೈಟೆಡ್ ಸ್ಟೇಟ್ಸ್, ಕ್ಯಾಲಿಫೋರ್ನಿಯಾ, ಕೊಲೊರಾಡೋ, ಓಹಿಯೋ, ನ್ಯೂಯಾರ್ಕ್ ನಗರಗಳಲ್ಲಿ ಕೊವಿಡ್-19 ಲಸಿಕೆ ಪಡೆದವರಿಗೆ ಭರ್ಜರಿ ಗಿಫ್ಟ್ ಅನ್ನು ನೀಡುವುದಾಗಿ ಘೋಷಿಸಲಾಗಿತ್ತು. ಫಿಲಿಫೈನ್ಸ್ ರಾಷ್ಟ್ರದ ಗ್ರಾಮವೊಂದರಲ್ಲಿ ಲಸಿಕೆ ಪಡೆದುಕೊಳ್ಳದಿದ್ದರೆ, ಅಂಥವರ ಮನೆಗಳಲ್ಲಿ ಇರುವ ಹಸುವನ್ನು ಕಿತ್ತುಕೊಳ್ಳುವುದಾಗಿ ಘೋಷಣೆ ಹೊರಡಿಸಿತ್ತು.

ಹಾಂಗ್ ಕಾಂಗ್‌ನಲ್ಲಿ ಶೇ.20ರಷ್ಟು ಜನರಿಗೆ ಲಸಿಕೆ

ಹಾಂಗ್ ಕಾಂಗ್‌ನಲ್ಲಿ ಶೇ.20ರಷ್ಟು ಜನರಿಗೆ ಲಸಿಕೆ

ಜಗತ್ತಿನ ಪುಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹಾಂಗ್ ಕಾಂಗ್, ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಸಿಕ್ಕಾಪಟ್ಟೆ ಹಿಂದುಳಿದಿದೆ. ದೇಶದಲ್ಲಿ ಈವರೆಗೂ ಕೇವಲ ಶೇ.20ರಷ್ಟು ಜನರು ಮಾತ್ರ ಕೊವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ದೇಶದ ಶೇ.14ರಷ್ಟು ಜನರು ಮಾತ್ರ ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೇ ತಿಂಗಳ ಆರಂಭದಲ್ಲಿ, ಆಸ್ಪತ್ರೆ ಪ್ರಾಧಿಕಾರದ ಮೂರನೇ ಒಂದು ಭಾಗದಷ್ಟು ಸಿಬ್ಬಂದಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಕೊವಿಡ್-19 ಲಸಿಕೆ ಹಾಕಿಸಿಕೊಂಡರೆ ವಿಮಾನ ಫ್ರಿ

ಕೊವಿಡ್-19 ಲಸಿಕೆ ಹಾಕಿಸಿಕೊಂಡರೆ ವಿಮಾನ ಫ್ರಿ

ಕಳೆದ ವಾರವಷ್ಟೇ ಕೊರೊನಾವೈರಸ್ ಲಸಿಕೆ ಪಡೆಯುವವರ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ವಿಮಾನಯಾನ ಪ್ರಾಧಿಕಾರವು ವಿಶಿಷ್ಟ ಬಹುಮಾನವೊಂದನ್ನು ಘೋಷಿಸಿತ್ತು. ಕೊವಿಡ್-19 ಲಸಿಕೆ ಪಡೆದ 60,000 ಮಂದಿಗೆ ಉಚಿತವಾಗಿ ವಿಮಾನಗಳನ್ನು ನೀಡುವುದಾಗಿ ಘೋಷಿಸಿತ್ತು.

English summary
Those Who Get Covid-19 Vaccine In Hong Kong Likely To Win Cash Prize Or Even A Million Dollar Apartment. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X