ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೇಡಿನ ಕಿಚ್ಚು: ಪ್ರಜಾಪ್ರಭುತ್ವದ ದಂಗೆ ಎಂದಿದ್ದು ಏಕೆ ಡೊನಾಲ್ಡ್ ಟ್ರಂಪ್?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭಾರತ ಮೂಲದ ಮಹಿಳೆಗೆ ಇದೀಗ ಭಾರಿ ದೊಡ್ಡ ಅವಕಾಶ ಒದಗಿ ಬಂದಿದೆ. ಡೊನಾಲ್ಡ್ ಟ್ರಂಪ್ ವಿರುದ್ಧ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರು ಗೆಲ್ಲುವುದು ಬಹುತೇಕ ಖಚಿತ ಆಗುತ್ತಿದೆ. ಹೀಗಾಗಿ ಡೆಮಾಕ್ರಟಿಕ್ ಪಕ್ಷ ಸತತ 2ನೇ ಗೆಲುವಿನ ಉತ್ಸಾಹದಲ್ಲಿ ಇರುವಾಗಲೇ ಡೊನಾಲ್ಡ್ ಟ್ರಂಪ್ ಹೊಸ ಕಿಚ್ಚು ಹೊತ್ತಿಸಿದ್ದಾರೆ!

ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ 2024ರ ಚುನಾವಣೆ ಅಖಾಡದಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಯಾಕಂದ್ರೆ ಜೋ ಬೈಡನ್ ಬಗ್ಗೆ ಅಮೆರಿಕದ ಯುವ ಮತದಾರರು ಆಕ್ರೋಶ ಹೊರಹಾಕಿ, ಬೈಡನ್ ಆಡಳಿತ ಬೇಡ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿತ್ತು. ಇದೇ ಕಾರಣಕ್ಕೆ ಜೋ ಬೈಡನ್ ಅವರನ್ನು ಅಧ್ಯಕ್ಷೀಯ ಚುನಾವಣೆ ಅಖಾಡದಿಂದ ಕೆಳಗೆ ಇಳಿಸಿ, ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಕಲ್ಪಿಸಿದ್ದರು ಡೆಮಾಕ್ರಟಿಕ್ ಪಕ್ಷದ ನಾಯಕರು. ಹೀಗಿದ್ದಾಗ ಜೋ ಬೈಡನ್ ಚುನಾವಣೆ ಕಣದಿಂದ ಹೊರ ಹೋಗಿದ್ದರ ಬಗ್ಗೆ ಡೊನಾಲ್ಡ್ ಟ್ರಂಪ್ ಏನ್ ಹೇಳಿದ್ದಾರೆ ಗೊತ್ತಾ?

This Is What The Donald Trump Is Said About Joe Biden Exit From American President Election

ಸಂಚಲನ ಸೃಷ್ಟಿಸಿದ ಡೊನಾಲ್ಡ್ ಟ್ರಂಪ್!

ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್ ನಿರ್ಧಾರ ಡೆಮಾಕ್ರಟಿಕ್ ಪಕ್ಷದಲ್ಲಿ ಎದ್ದ ದಂಗೆ ಪರಿಣಾಮ ಅಂತಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಮಿನ್ನೆಸೋಟಾ ಭಾಗದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದು, ಈ ಮೂಲಕ ಜೋ ಬೈಡನ್ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಜೋ ಬೈಡನ್ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡೋಕೆ ಇಷ್ಟಪಟ್ಟರೂ ಅದು ಈಡೇರಲಿಲ್ಲ. ಅವರ ಪಕ್ಷದವರೇ ಬೈಡನ್ ಅವರನ್ನ ತುಳಿಯುತ್ತಿದ್ದಾರೆ, ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್.

ಟ್ರಂಪ್ ವಿರುದ್ಧ ಅಸ್ತ್ರ ರೆಡಿ!

81 ವರ್ಷದ ಬೈಡನ್, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಜುಲೈ 20ಕ್ಕೆ ಮಾಹಿತಿ ನೀಡಿದ್ರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಬೆಂಬಲ ಸೂಚಿಸಿದ್ದ ಜೋ ಬೈಡನ್ ಅವರು, ತಮ್ಮ ಸ್ವಯಿಚ್ಛೆಯಿಂದಲೇ ಅಧಿಕಾರ ಬಿಟ್ಟು & ಚುನಾವಣೆಯನ್ನ ಕೂಡ ಬಿಟ್ಟು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಇದೇ ವಿಚಾರ ಮುಂದೆ ಇಟ್ಟುಕೊಂಡು ಹೊಸ ಅಸ್ತ್ರ ಹೂಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮೊದಲೇ ಅಲರ್ಟ್ ಆಗಿರುವ ಡೆಮಾಕ್ರಟಿಕ್ ಪಕ್ಷದ ನಾಯಕರು, ಟ್ರಂಪ್ ಮಾಡುವ ಪ್ರತಿ ಆರೋಪಕ್ಕೂ ಕೌಂಟರ್ ಕೊಡಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+