ಸಾವು.. ಸಾವು.. ಸಾವು.. ಗಾಜಾ ಪಟ್ಟಿಯಲ್ಲಿ 38,000 ಶವಗಳ ರಾಶಿ!

ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕದನ ಈಗಾಗಲೇ ರಾಶಿ & ರಾಶಿ ಶವಗಳು ಬೀಳುವಂತೆ ಮಾಡಿದೆ. ಹೀಗಿದ್ದರೂ ಇಬ್ಬರು ಸೈಲೆಂಟ್ ಆಗದೆ ಬಡಿದಾಡುತ್ತಾ ಇದ್ದಾರೆ. ಇದರ ಪರಿಣಾಮ ಈಗ ಗಾಜಾ ಪಟ್ಟಿ ಸ್ಮಶಾನ ಆಗಿದ್ದು, ಎಲ್ಲೆಲ್ಲೂ ಬರೀ ಶವಗಳ ರಾಶಿ ಕಾಣುತ್ತಿದೆ. ಹೀಗೆ ನೋಡ ನೋಡುತ್ತಲೇ ಜೀವ ಬಿಟ್ಟಿರುವುದು ಎಷ್ಟು ಸಾವಿರ ಜನ ಗೊತ್ತೆ? ಮುಂದೆ ಓದಿ.

ಇಸ್ರೇಲ್ ಯುದ್ಧ ನಿಲ್ಲಿಸಲು ರೆಡಿ ಇಲ್ಲ ಹಮಾಸ್ ರಾಜಿ ಮಾಡಿಕೊಳ್ಳಲು ಮುಂದೆ ಬರ್ತಿಲ್ಲ ಹೀಗೆ ಇಬ್ಬರ ನಡುವೆ ದೊಡ್ಡ ತಿಕ್ಕಾಟ ನಡೆಯುತ್ತಿದೆ. ಈ ತಿಕ್ಕಾಟದ ಪರಿಣಾಮ ಇದೀಗ ಪರದಾಡುವ ಪರಿಸ್ಥಿತಿ ಬಂದಿದೆ. ಅದು ಏನು ಅಂದ್ರೆ ಗಾಜಾ ಪಟ್ಟಿ ನಗರದಲ್ಲಿ ಯುದ್ಧ ಶುರುವಾದ ನಂತರ ಸುಮಾರು 38 ಸಾವಿರಕ್ಕೂ ಹೆಚ್ಚು ಜನರು ಜೀವ ಬಿಟ್ಟಿದ್ದಾರಂತೆ. ಅಲ್ಲದೆ ಲಕ್ಷಾಂತರ ಜನರು ಬೀದಿ ಪಾಲಾಗಿದ್ದು, ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ, ಕೈಮೀರಿ ಹೋಗಿರುವ ಸಮಯದಲ್ಲಿ ಯುದ್ಧ ನಿಲ್ಲಿಸಲು ಒತ್ತಡ ಕೇಳಿಬಂದಿದೆ.

This Is What Happening To The Gaza Strip Citizens Now

ಮತ್ತೊಂದು ಯುದ್ಧಕ್ಕೆ ಇಸ್ರೇಲ್ ಸಿದ್ಧತೆ?

ಕಳೆದ 8 ತಿಂಗಳಿಂದ ಇಸ್ರೇಲ್ ಸೇನೆ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ದೊಡ್ಡ ಅವಾಂತರ ಸೃಷ್ಟಿ ಮಾಡಿದೆ. ಈಗಾಗಲೇ ಸಾವಿರಾರು ಜನ ಜೀವ ಕಳೆದುಕೊಂಡು ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿದೆ. ಹೀಗಿದ್ದರೂ ಇಸ್ರೇಲ್ ಮಾತ್ರ ಸುಮ್ಮನೆ ಕೂರುತ್ತಿಲ್ಲ. ಅದರ ಬದಲಾಗಿ ಗಾಜಾ ವಿರುದ್ಧ ಯುದ್ಧ ನಿಲ್ಲಿಸಿ ಮತ್ತೊಂದು ಯುದ್ಧ ಆರಂಭ ಮಾಡಲು ಸಿದ್ಧತೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಈಗ ಇಸ್ರೇಲ್ ನಾಯಕರು ಹೇಳಿಕೆ ನೀಡುತ್ತಿರುವುದು ಸಹಜವಾಗಿ ಸಂಚಲನ ಸೃಷ್ಟಿ ಮಾಡಿದೆ.

ಯುದ್ಧ ನಿಲ್ಲಿಸಲು ಭಾರಿ ಒತ್ತಡ

ಅಕ್ಟೋಬರ್ 7ಕ್ಕೆ ಶುರುವಾದ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈಗಾಗಲೇ 38 ಸಾವಿರಕ್ಕು ಹೆಚ್ಚು ಜನ ಬಲಿಯಾಗಿದ್ದಾರೆ. ಗಾಜಾದ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಅಲ್ಲಿನ ಜನ ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದಾರೆ ಸಂಕಷ್ಟದ ಸಮಯದಲ್ಲೇ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡ ಕೂಡ ಹೆಚ್ಚಾಗಿದೆ. ಆದ್ರೂ ಯುದ್ಧ ನಿಲ್ಲಿಸಲು ಇಸ್ರೇಲ್ ಸಿದ್ಧವಿಲ್ಲ. ಇನ್ನೊಂದು ಕಡೆ ಯುದ್ಧ ನಿಲ್ಲಿಸಬೇಕು ಎನ್ನುವ ಒತ್ತಡ ಕೂಡ ಹೆಚ್ಚಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡ ಇದೇ ತೀರ್ಪು ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+