US Elections 2024: ಡೊನಾಲ್ಡ್ ಟ್ರಂಪ್‌ಗೆ ಶುರುವಾಯ್ತು ಹೊಸ ತಲೆನೋವು, ಏನದು ಗೊತ್ತೆ?
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭರ್ಜರಿಯಾಗಿ ಗೆದ್ದು, ಕಮಲಾ ಹ್ಯಾರಿಸ್ ವಿರುದ್ಧ ವಿಜಯ ಪತಾಕೆ ಹಾರಿಸಿರುವ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಲು ಸಜ್ಜಾಗಿದ್ದಾರೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಈ ಗೆಲುವು ದೊಡ್ಡ ಮಟ್ಟದಲ್ಲಿ ಸಂಚಲನ ಕೂಡ ಸೃಷ್ಟಿ ಮಾಡಿದ್ದು, ಭಾರತ ಮೂಲದ ಕಮಲಾ ಹ್ಯಾರಿಸ್ ಹೀನಾಯವಾಗಿ ಸೋತು ಹೋಗಿ ಅಧಿಕಾರ ಕಳೆದುಕೊಂಡಿದ್ದಾರೆ. ಇಷ್ಟೆಲ್ಲದರ ನಡುವೆ, ಹೊಸ ಸರ್ಕಾರ ರಚನೆ ಮಾಡೋಕೆ ಸಿದ್ಧತೆ ನಡೆಸಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಹೊಸ ತಲೆನೋವು ಶುರುವಾಗಿದೆ.
ಡೊನಾಲ್ಡ್ ಟ್ರಂಪ್‌ಗೆ ಈಗಾಗಲೇ ಸರ್ಕಾರ ನಡೆಸಿ ಅಭ್ಯಾಸ ಇದೆ. 2016 ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದರು ಡೊನಾಲ್ಡ್ ಟ್ರಂಪ್. ಆ ನಂತರ ಡೊನಾಲ್ಡ್ ಟ್ರಂಪ್ ತಮ್ಮ ಎಡವಟ್ಟುಗಳ ಮೂಲಕ, ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ದೊಡ್ಡ ಸದ್ದು ಮಾಡಿದ್ದರು. 2020ರ ಸಮಯದಲ್ಲಿ ಕೊರೊನಾ ಅಪ್ಪಳಿಸಿದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಮಾಸ್ಕ್ ವಿಚಾರಕ್ಕೂ ಯುದ್ಧ ಮಾಡಿಬಿಟ್ಟರು. ಹೀಗೆ ಎಲ್ಲವೂ ಅಮೆರಿಕದ ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು.

ಟ್ರಂಪ್‌ಗೆ ಶುರುವಾದ ತಲೆನೋವು ಏನು?
ಡೊನಾಲ್ಡ್ ಟ್ರಂಪ್ ತಾವೆ ಮಾಡಿಕೊಂಡ ಎಡವಟ್ಟಿನ ಫಲವಾಗಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರು. ಆದರೆ ಇದೀಗ ಅಂದ್ರೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಗೆಲುವು ದಾಖಲಿಸಿದ್ದಾರೆ. ಹಾಗೇ ಅಮೆರಿಕದಲ್ಲಿ ತಮ್ಮ ಬಿಗಿಯಾದ ಹಿಡಿತ ಇರುವ ಸರ್ಕಾರ ರಚನೆಗೆ ಕೂಡ ಸಿದ್ಧತೆ ನಡೆಸಿದ್ದಾರೆ, ಟ್ರಂಪ್ ಅವರು. ಹೀಗಿದ್ದರೂ ಡೊನಾಲ್ಡ್ ಟ್ರಂಪ್‌ಗೆ ಹೊಸ ತಲೆನೋವು ಶುರುವಾಗಿದೆಯಂತೆ!
ಟ್ರಂಪ್ ಹೀಗೆ ಮಾಡುತ್ತಿರುವುದು ಏಕೆ?
ಅಂದಹಾಗೆ ಭಾರತ ಮೂಲದ ಅಮೆರಿಕನ್ನರಿಗೆ ಪ್ರಮುಖ ಹುದ್ದೆಗಳನ್ನ ನೀಡಿರುವ ಟ್ರಂಪ್ ಅವರು, ಭಾರತೀಯರ ಬೆನ್ನಿಗೆ ನಿಂತಿದ್ದಾರೆ. ಇದರ ಜೊತೆಗೆ ಅಳೆದು ತೂಗಿ ಪ್ರಮುಖವಾದ ಹುದ್ದೆಗಳಿಗೆ ಪ್ರತಿನಿಧಿಗಳ ಆಯ್ಕೆ ಮಾಡುತ್ತಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಹೀಗಿದ್ದಾಗ ಬಾಕಿ ಇರುವ ಉನ್ನತ ಹುದ್ದೆಗಳಿಗೆ ಪ್ರತಿನಿಧಿಗಳನ್ನ ಆಯ್ಕೆ ಮಾಡುವಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದಾರೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಈ ರೀತಿ ವರ್ತಿಸುತ್ತಿರುವುದು ಯಾಕಂದ್ರೆ 2016ರ ಮೊದಲ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ತಮ್ಮ ಸ್ವಂತ ಪಕ್ಷದವರೇ ಮುಜುಗರ ಉಂಟು ಮಾಡಿದ್ದರು. ಅಲ್ಲದೆ ಒಳಗೊಳಗೆ ದೊಡ್ಡ ಮಟ್ಟದ ಕಿತ್ತಾಟ ಕೂಡ ನಡೆದಿತ್ತು. ಹೀಗಾಗಿ ಅದನ್ನ ಇದೀಗ ಸರಿ ಮಾಡಲು ಮಾಸ್ಟರ್ ಪ್ಲಾನ್ ನಡೆದಿದೆ ಎನ್ನಲಾಗಿದೆ.
ಹೀಗೆ ತಮ್ಮ ಜೊತೆಗೆ ಹೊಂದಿಕೊಂಡು ಹೋಗುವವರನ್ನ ಡೊನಾಲ್ಡ್ ಟ್ರಂಪ್ ಅವರು ಈಗ ಸಾಕಷ್ಟು ಚಿಂತನೆ ನಡೆಸಿ ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದ್ದು. ಈ ಮೂಲಕ, ಫೆಡರಲ್ ಸರ್ಕಾರದ ವರ್ಚಸ್ಸು ಹೆಚ್ಚಿಸುವರಿಗೆ ಟ್ರಂಪ್ ಅವರು ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈಗಾಗಲೇ ಭಾರತ ಮೂಲದ ವಿವೇಕ್ ರಾಮಸ್ವಾಮಿ ಅವರಿಗಾಗಿ, ವಿಶೇಷ ಉದ್ದೆಯನ್ನ ಮೀಸಲಾಗಿ ಇಟ್ಟಿರುವ ಡೊನಾಲ್ಡ್ ಟ್ರಂಪ್ ಭಾರತ ಮೂಲದವರಿಗಾಗಿ ಪ್ರಮುಖ ಹುದ್ದೆಗಳನ್ನ ನೀಡಿ ಗಮನ ಸೆಳೆದಿದ್ದಾರೆ.












Click it and Unblock the Notifications