Ukraine War: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೂ ಡೋಂಟ್ ಕೇರ್?
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಎಲ್ಲವೂ ಕೈಮೀರಿ ಹೋಗುವ ಹಂತಕ್ಕೆ ಬಂದಿದೆ. ಯಾವ ಕ್ಷಣದಲ್ಲಿ ಇಬ್ಬರ ನಡುವೆ ನ್ಯೂಕ್ಲಿಯರ್ ಅಂದ್ರೆ ಪರಮಾಣು ಯುದ್ಧ ಶುರುವಾಗುತ್ತದೆಯೋ? ಅನ್ನೋ ಟೆನ್ಷನ್ ಕೂಡ ಕಾಡುತ್ತಿದೆ. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಖುದ್ದಾಗಿ ಎಂಟ್ರಿ ಕೊಟ್ಟು ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಇಷ್ಟಾದರೂ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವುದು ಬಿಡಿ, ಸರಿಯಾಗಿ ಈ ಬಗ್ಗೆ ಚರ್ಚೆ ಕೂಡ ಆಗುತ್ತಿಲ್ಲ!
ರಷ್ಯಾ & ಉಕ್ರೇನ್ ಯುದ್ಧ ಜಾಗತಿಕ ಮಟ್ಟದ ದೊಡ್ಡ ತಲೆನೋವಾಗಿದ್ದು, ಈ ಯುದ್ಧವೇ ಮನುಷ್ಯರ ಯುಗವನ್ನೇ ಅಂತ್ಯ ಮಾಡುವ ಅಸ್ತ್ರವಾಗುವ ಸಾಧ್ಯತೆ ಇದೆ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಈಗಾಗಲೇ ಅತ್ಯಂತ ವಿನಾಶಕಾರಿ ಹಂತಕ್ಕೂ ಬಂದು ತಲುಪಿದೆ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ರಷ್ಯಾ ನಡೆ ಬಗ್ಗೆ ಟ್ರಂಪ್ ಕೂಡ ಅಸಮಾಧಾನದ ಹೊಗೆ ಹೊರ ಹಾಕುತ್ತಿದ್ದಾರೆ ಎಂಬ ಮಾಹಿತಿ ಹಬ್ಬಿದೆ. ಹಾಗಾದ್ರೆ ರಷ್ಯಾ ಹೀಗೆ ಆಡುತ್ತಿರುವುದು ಯಾಕೆ?

ರಷ್ಯಾ & ಉಕ್ರೇನ್ ಫೈಟಿಂಗ್ ಜೋರು!
ಅಂದಹಾಗೆ ರಷ್ಯಾ ಈ ಯುದ್ಧವನ್ನ ಸೋತು ಹೋಗಲು ಸಿದ್ಧವಿಲ್ಲ, ಅದೇ ರೀತಿ ಉಕ್ರೇನ್ ಕೂಡ ಸೋತು ಶರಣಾಗಲು ಸಿದ್ಧವಿಲ್ಲ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ತಿಕ್ಕಾಟವೇ ಇದೀಗ ಕದನ ಭೀಕರತೆಗೆ ಸಾಕ್ಷಿ ಕೂಡ ಆಗುತ್ತಿದೆ. ರಷ್ಯಾ & ಉಕ್ರೇನ್ ಯುದ್ಧ ಈಗ ಒಂದು ಲೆಕ್ಕದಲ್ಲಿ ಜಾಗತಿಕ ಸಮಸ್ಯೆಯೇ ಆಗಿ ಹೋಗಿದೆ. ಇಬ್ಬರ ನಡುವೆ ಶಾಂತಿ ಮೂಡದೇ ಇದ್ದರೆ, ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆ ಗ್ಯಾರಂಟಿ. ಆದರೆ ಯುದ್ಧ ನಿಲ್ಲಿಸಲು ಇಬ್ಬರೂ ಸಿದ್ಧವಿಲ್ಲದ ಕಾರಣಕ್ಕೆ ಜಗಳ ಜೋರಾಗುತ್ತಿದೆ!












Click it and Unblock the Notifications