ಹೊಸ ವರ್ಷಕ್ಕೆ ಹೊಸ ನಿರ್ಧಾರ, ದುಶ್ಚಟಗಳನ್ನು ಬಿಡುವುದು ಸುಲಭ! New Year
2026 ಶುರುವಾಗಿದ್ದು ನಾವೆಲ್ಲಾ ಹೊಸ ವರ್ಷಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದೇವೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಹೊಸ ವರ್ಷಾಚರಣೆ ಭರ್ಜರಿಯಾಗಿ ನೆರವೇರಿದೆ. ಕೋಟ್ಯಂತರ ಜನರು ಹೊಸ ವರ್ಷಾಚರಣೆ ಮಾಡಿ ಖುಷಿಯಲ್ಲಿ ಕುಣಿದಾಡಿದ್ದಾರೆ. ಅಲ್ಲದೆ ಹೊಸ ವರ್ಷದಲ್ಲಿ ಏನೋ ಹೊಸ ಹುಮ್ಮಸ್ಸು ಸಿಗಲಿದೆ ಅಂತಾ ಕೂಡ ಕಾಯುತ್ತಿದ್ದಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆಯೇ ದುಶ್ಚಟಗಳು ಹಲವರ ನೆಮ್ಮದಿಗೆ ಕೊಳ್ಳಿ ಇಟ್ಟಿರುತ್ತದೆ. ಹಾಗಾದರೆ, ದುಶ್ಚಟಗಳನ್ನು ಬಿಡುವುದು ಹೇಗೆ? ಬನ್ನಿ ತಿಳಿಯೋಣ.
ಹ್ಯಾಪಿ ನ್ಯೂ ಇಯರ್... ಹೀಗಂತ ಸಂಭ್ರಮಾಚರಣೆ ಮಾಡುವವರು ಕೈಯಲ್ಲಿ ಎಣ್ಣೆ & ಬಾಯಲ್ಲಿ ಸಿಗರೇಟ್ ಹಿಡಿದು ಸ್ಟೈಲ್ ಆಗಿ ಕುಣಿದಾಡಿರುತ್ತಾರೆ. ಅದರಲ್ಲೂ ಹೊಸ ವರ್ಷದ ದಿನ ಲಕ್ಷ ಲಕ್ಷ ಜನರು ಹೊಸದಾಗಿ ಎಣ್ಣೆ & ಸಿಗರೇಟು ಕಲಿತು ಅದರ ಮಾಯಾಜಾಲಕ್ಕೆ ಸಿಲುಕುವುದು ಗ್ಯಾರಂಟಿ. ಆದರೆ ಮುಂದೆ ಇದು ಅವರ ಭವಿಷ್ಯದ ಮೇಲೆ ಭಾರಿ ದೊಡ್ಡ ಅಡ್ಡ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ದುಶ್ಚಟಗಳಿಂದ ದೂರ ಇರಬೇಕು ಅನ್ನೋ ಮಾತನ್ನು ಹೇಳುತ್ತಾರೆ ದೊಡ್ಡವರು. ಹೀಗೆ ಇದ್ದಾಗ ಹೊಸ ವರ್ಷಕ್ಕೆ ದುಶ್ಚಟಗಳನ್ನು ಬಿಡುವುದು ಸುಲಭ...

1) ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ
ಮೊದಲಿಗೆ ನಿಮ್ಮ ಬದುಕಿನಲ್ಲಿ ದುಶ್ಚಟ ಬಿಟ್ಟು ಸುಂದರ ಜೀವನ ನಡೆಸಲು ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ. ಯೋಗ, ಜಿಮ್, ವಾಕಿಂಗ್... ಹೀಗೆ ಹಲವು ರೀತಿಯಲ್ಲಿ ನಿಮ್ಮ ಮನಸ್ಸು ಬೇರೆ ಕಡೆ ಡೈವರ್ಟ್ ಆಗುವಂತೆ ಮಾಡಿ. ತಕ್ಷಣಕ್ಕೆ ಇದು ಯಶಸ್ಸು ಕಾಣದೇ ಇದ್ದರೂ, ಹಂತ ಹಂತವಾಗಿ ಇದು ನಿಮ್ಮ ಜೀವನ ಬದಲಾಯಿಸುತ್ತದೆ.
2) ಊಟ, ನಿದ್ದೆ, ನೀರು ಅಚ್ಚುಕಟ್ಟಾಗಿರಲಿ
ನೀವು ದುಶ್ಚಟ ಬಿಟ್ಟ ತಕ್ಷಣ ನಿಮ್ಮ ದೇಹ ರಿಕವರಿ ಆಗಲ್ಲ, ಹೀಗಾಗಿ ಊಟ, ನಿದ್ದೆ ಮತ್ತು ನೀರು ಅಚ್ಚುಕಟ್ಟಾಗಿರಲಿ. ಪ್ರತಿದಿನ ಹಂತ ಹಂತವಾಗಿ ನಿಮ್ಮ ದೇಹಕ್ಕೆ ಅಗತ್ಯ ಇರುವ ಪ್ರಮಾಣದಲ್ಲಿ ನೀರು ಕುಡಿಯಿರಿ. ಆಗ ದುಶ್ಚಟಗಳ ಕಲ್ಮಶ ದೇಹದಿಂದ ಹೊರ ಹೋಗಿ ನಿಮ್ಮ ದೇಹ ಹಗುರಾಗಿ ಮನಸ್ಸು ಹಾಯಾಗಿ ಇರಲಿದೆ.
3) ದುಷ್ಟರ ಸಹವಾಸ ಬಿಟ್ಟರೆ ಒಳ್ಳೆಯದು
ಜೀವನದಲ್ಲಿ ಕಷ್ಟಕ್ಕೆ ಆಗುವವರು ಸ್ನೇಹಿತರು, ಆದರೆ ಕೆಲವು ಸ್ನೇಹಿತರಿಂದಲೇ ಜೀವನಕ್ಕೆ ಕಷ್ಟ ಎದುರಾಗುತ್ತದೆ. ಅಂತಹ ಸ್ನೇಹಿತರಿಂದ ದೂರ ಇರಿ ಮತ್ತು ದುಷ್ಟರ ಸಹವಾಸ ಬಿಟ್ಟರೆ ಒಳ್ಳೆಯದು. ಹೀಗಿದ್ದಾಗ ಮಾತ್ರ ನೀವು ದುಶ್ಚಟ ಬಿಟ್ಟು ಜೀವನದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ. ಸಂಜೆಯ ಸಮಯದಲ್ಲಿ ಕುಟುಂಬ ಸದಸ್ಯರ ಜೊತೆ ಖುಷಿ ಖುಷಿಯಾಗಿ ಸಮಯ ಕಳೆಯಿರಿ, ಅನಗತ್ಯವಾಗಿ ಸಂಜೆ ವೇಳೆ ಹೊರಗೆ ಹೋಗುವುದನ್ನು ತಪ್ಪಿಸಿ.
4) ವೈದ್ಯರನ್ನು ಸಂಪರ್ಕ ಮಾಡುವುದು
ದುಶ್ಚಟಗಳನ್ನು ದಿಢೀರ್ ಬಿಟ್ಟುಬಿಟ್ಟರೆ ಕೆಲವರಿಗೆ ಅದರಿಂದ ಅಡ್ಡಪರಿಣಾಮಗಳು ಶುರುವಾಗುವ ಭೀತಿ ಇರುತ್ತದೆ. ಈ ಬಗ್ಗೆ ನೀವು ಎಚ್ಚರದಿಂದ ಇರಿ, ನೀವು ದುಶ್ಚಟ ಬಿಟ್ಟಾಗ ನಿಮ್ಮ ದೇಹದಲ್ಲಿ ಏರುಪೇರು ಉಂಟಾದರೆ ತಕ್ಷಣವೇ ವೈದ್ಯರ ಸಂಪರ್ಕ ಮಾಡಿ. ಅಗತ್ಯ ಔಷಧಗಳನ್ನು ಕೊಡುತ್ತಾರೆ ಮತ್ತು ಇದರಿಂದ ನಿಮ್ಮ ದೇಹ ಸುಧಾರಿಸಲಿದೆ.
5) ಕೆಲಸದ ಒತ್ತಡವನ್ನು ನಿಭಾಯಿಸಿ
ಬಹುತೇಕರು ದುಶ್ಚಟ ಬಿಟ್ಟು ಮತ್ತೆ ಶುರು ಮಾಡುವುದೇ ಕೆಲಸದ ಒತ್ತಡಕ್ಕೆ ಎಂದು ಹೇಳುತ್ತಾರೆ. ಆದರೆ ಇದು ಸರಿಯಾದ ಮಾರ್ಗವಲ್ಲ, ಕೆಲಸದ ಒತ್ತಡವನ್ನು ಸೂಕ್ತವಾಗಿ ನಿಭಾಯಿಸಲು ನೀವು ಕಲಿಯಿರಿ. ಈ ಜಗತ್ತಿನಲ್ಲಿ ಕೆಲಸದ ಒತ್ತಡಕ್ಕೆ ಎಲ್ಲರೂ ದುಶ್ಚಟ ಮಾಡುವುದಿಲ್ಲ, ಆದರೆ ಇದೇ ರೀತಿ ನೀವು ದುಶ್ಚಟ ಮುಂದುವರಿಸಿದರೆ ಭವಿಷ್ಯದಲ್ಲಿ ನಿಮಗೇ ಕಂಟಕ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications