ಮಕ್ಕಳನ್ನು ಮಾಡಿಕೊಳ್ಳುವ ಉದ್ಯೋಗಿಗಳಿಗೆ 62 ಲಕ್ಷ ರೂಪಾಯಿ, ಮನೆ ನೀಡುತ್ತಿರುವ ಕಂಪನಿ- ಇದು ಯಾವುದು, ಎಲ್ಲಿದೆ? ಮಾಹಿತಿ, ವಿವರ
ಭಾರತವು ಈಗಾಗಲೇ ಜನಸಂಖ್ಯಾ ಸ್ಫೋಟದಿಂದ ಬಳಲುತ್ತಿದೆ. ಆದರೆ, ಇಲ್ಲೊಂದು ಕಂಪನಿಯು ತನ್ನ ಮಕ್ಕಳಿಗೆ ವಿಚಿತ್ರ ಆಫರ್‌ವೊಂದನ್ನು ನೀಡಿದೆ. ಮಕ್ಕಳನ್ನು ಮಾಡಿಕೊಳ್ಳುವ ನೌಕರರಿಗೆ ಲಕ್ಷಾಂತರ ರೂಪಾಯಿ ನೀಡುತ್ತಿದೆ. ಇದು ಯಾವ ಕಂಪನಿ, ಎಲ್ಲಿದೆ ಎಂದು ತಿಳಿದುಕೊಳ್ಳಲು ಈ ಲೇಖನ ಓದಿ.
ಮಕ್ಕಳನ್ನು ಮಾಡಿಕೊಳ್ಳುವ ನೌಕರರಿಗೆ ಲಕ್ಷಾಂತರ ರೂಪಾಯಿ ನೀಡುವ ಕಂಪನಿ ಭಾರತದಲ್ಲಿ ಇದೆ ಎಂದು ನೀವು ಗಾಬರಿ ಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಈ ಕಂಪನಿಯು ದಕ್ಷಿಣ ಕೊರಿಯಾದಲ್ಲಿದೆ. ದೇಶದಲ್ಲಿ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಈ ಕಂಪನಿ ತೊಡಗಿದೆ.

ದಕ್ಷಿಣ ಕೊರಿಯಾದ ಕಂಪನಿಯೊಂದು ವಿಶಿಷ್ಟವಾದ ಕುಟುಂಬ ಪರವಾದ ಯೋಜನೆಯನ್ನು ಹೊರತಂದಿದೆ. ಬೂಯೋಂಗ್ ಗ್ರೂಪ್ ಎಂಬ ಕಂಪನಿಯು ತನ್ನ ಉದ್ಯೋಗಿಗಳಿಗೆ ಮಗುವನ್ನು ಪಡೆದವರಿಗೆ ಬಹುಮಾನವನ್ನು ಘೋಷಿಸಿದೆ. ನವಜಾತ ಶಿಶುವನ್ನು ಹೊಂದುವ ಪ್ರತಿಯೊಬ್ಬ ಉದ್ಯೋಗಿಗೆ ಕಂಪನಿಯು 62 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.
ದಕ್ಷಿಣ ಕೊರಿಯಾದ ಕಂಪನಿಯ ವಿಶಿಷ್ಟ ಯೋಜನೆ
ಇದು ಮಾತ್ರವಲ್ಲದೆ, ಕಂಪನಿಯು 2021 ರಿಂದ ಒಟ್ಟಾರೆಯಾಗಿ 70 ಮಕ್ಕಳನ್ನು ಹೊಂದಿರುವ ಉದ್ಯೋಗಿಗಳಿಗೆ 43 ಲಕ್ಷ ರೂಪಾಯಿಗಳನ್ನು ವಿತರಿಸುವುದಾಗಿ ಹೇಳಿದೆ. ದಕ್ಷಿಣ ಕೊರಿಯಾವು ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಈ ಸಂಕಷ್ಟದ ಸಮಯದಲ್ಲಿ ಕಂಪನಿಯು ಹೊಸ ಯೋಜನೆಯನ್ನು ತಂದಿರುವುದು ದೇಶಕ್ಕೆ ಒಳಿತಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಪ್ರಸ್ತುತ ದಕ್ಷಿಣ ಕೊರಿಯಾವು ಶೇ 0.78 ರಷ್ಟು ಜನಸಂಖ್ಯೆ ದರವನ್ನು ಹೊಂದಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಫಲವತ್ತತೆ ದರವನ್ನು ಹೊಂದಿದೆ ಎಂದು ವರದಿಯಾಗಿದೆ. 2025 ರ ವೇಳೆಗೆ, ಫಲವತ್ತತೆಯ ದರವು 0.65 ಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿದೆ.

ಮಗುವನ್ನು ಬೆಳೆಸುವುದು, ಪಾಲನೆ ಪೋಷಣೆ ಮಾಡುವುದು ಕಷ್ಟಕರವೆಂದು ಪೋಷಕರು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಹೆಣಗಾಡುತ್ತಿರುವ ಹೊಸ ಪೋಷಕರಿಗೆ ಈ ಉಪಕ್ರಮವು ಬಲವಾದ ಸಹಾಯವನ್ನು ಮಾಡುತ್ತದೆ ಎಂದು Booyoung ಗ್ರೂಪ್ ಮುಖ್ಯಸ್ಥರು ಹೇಳಿದ್ದಾರೆ.
ಕಂಪನಿಯ ಹಣಕಾಸಿನ ನೆರವು
ಮೂರು ಮಕ್ಕಳನ್ನು ಹೊಂದಿರುವ ಉದ್ಯೋಗಿಗಳಿಗೆ 1.8 ಕೋಟಿ ರೂಪಾಯಿ ನಗದು ಅಥವಾ ಬಾಡಿಗೆ ಮನೆ ನೀಡಲಾಗುವುದು. ಮನೆ ನಿರ್ಮಾಣಕ್ಕಾಗಿ ಸರ್ಕಾರ ಹೊಂದಿರುವ ಭೂಮಿಯನ್ನು ನಾವು ಖರೀಧಿಸಿ ಕೊಡಲಿದ್ದೇವೆ ಎಂದು ಕಂಪನಿಯ ಮುಖ್ಯಸ್ಥರು ತಿಳಿಸಿದ್ದಾರೆ.
ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ಕಂಪನಿಗಳು ಮುಂದಾಗಿರುವುದು ಇದೇ ಮೊದಲಲ್ಲ ಎಂದು ಅವರು ಹೇಳಿದ್ದಾರೆ. ಚೀನಾದಲ್ಲಿ ಇದೇ ರೀತಿಯ ನಡೆ ಕಂಡುಬಂದಿದೆ. ಅಲ್ಲಿ ದೇಶದ ಜನಸಂಖ್ಯೆಯು ಕ್ಷೀಣಿಸುತ್ತಿರುವ ನಡುವೆ ಮಕ್ಕಳನ್ನು ಹೊಂದಲು ಜನರನ್ನು ಒತ್ತಾಯಿಸಲಾಗುತ್ತಿದೆ.












Click it and Unblock the Notifications