ಸಾವಿಗೂ ಮೊದಲು ಶಕೀಲ್ - ದಾವೂದ್ ಭೇಟಿಯಾದ ಗೌಪ್ಯ ಮನೆ ಇದು

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಇಸ್ಲಮಾಬಾದ್, ಜನವರಿ 5: ಛೋಟಾ ಶಕೀಲ್ ನಿಧನದೊಂದಿಗೆ ದಾವೂದ್ ಇಬ್ರಾಹಿಂ ಪಾಕಿಸ್ತಾನ ಬಿಡಲು ಯೋಜನೆ ರೂಪಿಸಿದ್ದಾನಾ? ಡಾನ್ ಭಾರತಕ್ಕೆ ವಾಪಾಸಾಗಲು ಯೋಚಿಸಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ದಾವೂದ್ ಮುಂದೆ ಬೇರೆ ಆಲೋಚನೆಗಳೂ ಇವೆ.

ದಾವೂದ್ ಹಲವು ಸಮಸ್ಯೆಯಿಂದ ಬಳಲುತ್ತಿದ್ದಾನೆ. ಛೋಟಾ ಶಕೀಲ್ ನನ್ನು ಕಳೆದುಕೊಂಡಿದ್ದು ಆತನಿಗೆ ಭಾರೀ ಹೊಡೆತ ನೀಡಿದೆ. ಜತೆಗೆ ಆರೋಗ್ಯವೂ ಕೈಕೊಡುತ್ತಿದೆ. ಕಳೆದ ವರ್ಷದ ಮಾರ್ಚ್ ನಲ್ಲಿ ದಾವೂದ್ ಐಸಿಯು ಕೂಡ ಸೇರಿದ್ದ. ಆದರೆ ನಂತರ ಚೇತರಿಕೆ ಕಂಡಿದ್ದ. ಮೂಲಗಳ ಪ್ರಕಾರ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಆತ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಜತೆಗೆ ಹೈಪರ್ ಟೆನ್ಷನ್ ಮತ್ತು ಮಧುಮೇಹದ ಖಾಯಿಲೆಯೂ ಆತನಿಗಿದೆ.

ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ!

ಇತ್ತೀಚಿನ ಮಾಹಿತಿಗಳ ಪ್ರಕಾರ ದಾವೂದ್ ಕೇಂದ್ರ ಅಮೆರಿಕಾದ ಕೋಸ್ಟರಿಕಾ ಅಥವಾ ಡೋಮಿನಿಕ್ ರಿಪಬ್ಲಿಕ್ ದೇಶಗಳಿಗೆ ಹೋಗಲು ಯೋಜನೆ ಹಾಕಿಕೊಂಡಿದ್ದಾನೆ.

The safe house that Shakeel met Dawood before he died

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಜತೆ ದಾವೂದ್ ನಿರಂತರ ಸಂಪರ್ಕದಲ್ಲಿದ್ದು ಪಾಕಿಸ್ತಾನದಿಂದ ಹೊರಹೋಗದಂತೆ ಅದು ಆತನಿಗೆ ಸಲಹೆ ನೀಡಿದೆ. ಹೀಗಾಗಿ ಸದ್ಯಕ್ಕೆ ದಾವೂದ್ ನಡೆ ನಿಗೂಢವಾಗಿದೆ.

ಹಾಗೆ ನೋಡಿದರೆ ದಾವೂದ್ ನನ್ನು ಬೆನ್ನತ್ತುವುದು ಅಷ್ಟು ಸುಲಭವಲ್ಲ. ಆತ ಯಾವತ್ತೂ ಫೋನ್ ಬಳಸುವುದಿಲ್ಲ. ಆತ ಬಳಸುವುದು ಏನಿದ್ದರೂ ಸ್ಯಾಟಲೈಟ್ ಫೋನ್. ಜತೆಗೆ ಶಕೀಲ್ ಫೋನ್ ನೀಡಿದರೆ ಮಾತ್ರ ಆತ ಅದಕ್ಕೆ ಕಿವಿಗೊಡುತ್ತಿದ್ದ.

ಭೂಗತ ಪಾತಕಿಗಳ ನಡುವೆ ಕಡಿದುಹೋಯಿತೇ ಸಂಬಂಧ?

ಆತ ಎನ್ಕ್ರಿಪ್ಟೆಡ್ ಸ್ಯಾಟಲೈಟ್ ಫೋನ್ ಬಳಸುವುದರಿಂದ ತನಿಖಾ ಸಂಸ್ಥೆಗಳಿಗೂ ಅದನ್ನು ಬೆನ್ನಟ್ಟುವುದು ಕಷ್ಟವಾಗಿದೆ. ಶಕೀಲ್ ಬದುಕಿದ್ದಾಗ ಆತ ದಾವೂದ್ ಇಬ್ರಾಹಿಂನನ್ನು 6/ಎ, ಕಜವಬಾಮ್ ತನ್ಜೀಮ್, ಫೇಸ್ 5, ಡಿಫೆನ್ಸ್ ಹೌಸಿಂಗ್ ಏರಿಯಾ, ಕರಾಚಿಯಲ್ಲಿ (6/A Kjauabam Tanzeem, Phase-5, Defence Housing Area, Karachi) ಅಥವಾ ಇಸ್ಲಮಾಬಾದ್ ನ ಸೇಫ್ ಹೌಸ್ ನಲ್ಲಿ ಭೇಟಿಯಾಗುತ್ತಿದ್ದ. ಆ ಮನೆಯ ಚಿತ್ರ ಇಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When Chhota Shakeel was alive he would meet with Dawood Ibrahim only at the following address- 6/A Kjauabam Tanzeem, Phase-5, Defence Housing Area, Karachi or at their safehouse in Islamabad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ