ಕಚೇರಿಯಲ್ಲಿ ಅಮೆರಿಕ ನೂತನ ಅಧ್ಯಕ್ಷರ ಮೊದಲ ದಿನ ಹೇಗಿತ್ತು?

Posted By:
Subscribe to Oneindia Kannada

ಅಮೆರಿಕದಲ್ಲಿ ನೂತನ ಅಧಿಕಾರದ ಯುಗ ಆರಂಭವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಆ ದೇಶದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಈ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷರ ಮೊದಲ ದಿನ ಹೇಗಿತ್ತು.

ಅಧಿಕಾರ ಸ್ವೀಕಾರದ ನಂತರ ಮಾಡಿದ ಭಾಷಣದಲ್ಲಿ ನಮಗೆ ಕೇವಲ ಮಾತನಾಡುವ ರಾಜಕಾರಣಿಗಳು ಬೇಡ, ಕೆಲಸ ಮಾಡಿ ತೋರಿಸುವ ರಾಜಕಾರಣಿಗಳು ಬೇಕು ಎಂದು ಹೇಳಿರುವ ಅವರ ಮಾತುಗಳು ಅವರಿಗೂ ಅನ್ವಯವಾಗುತ್ತವಲ್ಲವೇ?

ಇರಲಿ. ಆದರೆ, ಮೊದಲ ದಿನ ಟ್ರಂಪ್ ಅವರ ಕೆಲಸ ಹೇಗಿತ್ತು, ಏನಿತ್ತು? ಕಚೇರಿಯಲ್ಲಿ ಅವರು ಮೊದಲ ದಿನವನ್ನು ಹೇಗೆ ಕಳೆದರು ಎಂಬುದರ ಕೆಲವಾರು ಮಾಹಿತಿಗಳು ಇಲ್ಲಿವೆ.

ಒಬಾಮಕೇರ್ ನಲ್ಲಿ ಬದಲಾವಣೆ

ಒಬಾಮಕೇರ್ ನಲ್ಲಿ ಬದಲಾವಣೆ

ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವಾಗಲೂ ಹೇಳುತ್ತಿದ್ದಂತೆ, ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊರೆ ಎನ್ನುವಂತಿದ್ದ, ಒಬಾಮಕೇರ್ ಎಂದೇ ಅಡ್ಡಹೆಸರು ಪಡೆದಿರುವ ವೈದ್ಯಕೀಯ ಕಾಯ್ದೆಯನ್ನು ಸರಳೀಕರಣಗೊಳಿಸುವತ್ತ ಹೆಜ್ಜೆಯಿಟ್ಟಿದ್ದಾರೆ.

ಕ್ಲೈಮೇಟ್ ಚೇಂಜ್ ನಿಯಮಕ್ಕೆ ತಿಲಾಂಜಲಿ?

ಕ್ಲೈಮೇಟ್ ಚೇಂಜ್ ನಿಯಮಕ್ಕೆ ತಿಲಾಂಜಲಿ?

ಹವಾಮಾನ ಬದಲಾವಣೆ (ಕ್ಲೈಮೇಟ್ ಚೇಂಜ್) ಕುರಿತಂತೆ ಒಬಾಮ ಸರ್ಕಾರ ರೂಪಿಸಿದ್ದ ನಿಯಮಗಳನ್ನು ಹಿಂಪಡೆದಿದ್ದಾರೆ ಟ್ರಂಪ್. ಅದರ ಜಾಗದಲ್ಲಿ ಅವರ ಮೂಲಮಂತ್ರವಾದ ಅಮೆರಿಕವನ್ನು ಮತ್ತೊಮ್ಮೆ ದೈತ್ಯ ರಾಷ್ಟ್ರವನ್ನಾಗಿಸುವ ನಿಯಮಗಳನ್ನು ಅಳವಡಿಸಲಾಗುವುದಂತೆ.

ಚರ್ಚಿಲ್ ಪ್ರತಿಮೆ ಮತ್ತೆ ಪುನರ್ ಪ್ರತಿಷ್ಠಾಪನೆ

ಚರ್ಚಿಲ್ ಪ್ರತಿಮೆ ಮತ್ತೆ ಪುನರ್ ಪ್ರತಿಷ್ಠಾಪನೆ

ಅಧಿಕಾರ ಸ್ವೀಕಾರದ ನಂತರ ಮೊದಲು ವೈಟ್ ಹೌಸ್ ಗೆ ತೆರಳಿದ್ದ ಟ್ರಂಪ್, ಆನಂತರ ಓವಲ್ ಕಚೇರಿಗೆ ತೆರಳಿದರು. ಅಲ್ಲಿ ಅವರು, ತಮ್ಮ ಚೇಂಬರಿನಲ್ಲಿ ತಮಗಾಗಿ ಪ್ರತಿಷ್ಠಾಪಿಸಿರುವ ಬ್ರಿಟನ್ ನ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಪ್ರತಿಮೆ ವೀಕ್ಷಿಸಿದರು.

ಒಬಾಮ ಸಂಪ್ರದಾಯ ತಿರುಗು ಮುರುಗು

ಒಬಾಮ ಸಂಪ್ರದಾಯ ತಿರುಗು ಮುರುಗು

ಈ ಹಿಂದೆ, ಬರಾಕ್ ಒಬಾಮ ಅವರು ಅಧ್ಯಕ್ಷರ ಕಚೇರಿ ಕೊಠಡಿಯಲ್ಲಿದ್ದ ಚರ್ಚಿಲ್ ಪ್ರತಿಮೆಯನ್ನು ವೈಟ್ ಹೌಸ್ ನಲ್ಲೇ ಇರುವ ತಮ್ಮ ಖಾಸಗಿ ನಿವಾಸವಾದ ಟ್ರಿಟಿ ಕೊಠಡಿಗೆ ರವಾನಿಸಿದ್ದರು. ಅವರ ಆ ಕ್ರಮ ಸಂಪ್ರದಾಯವಾದಿಗಳ ಟೀಕೆಗಳಿಗೆ ಕಾರಣವಾಗಿತ್ತು.

ಲೂಥರ್ ಪ್ರತಿಮೆ ಅಬಾಧಿತ

ಲೂಥರ್ ಪ್ರತಿಮೆ ಅಬಾಧಿತ

ಆದರೆ, ಒಬಾಮ ಅವರು, ತಮ್ಮ ಕಚೇರಿಯಲ್ಲಿ ಇರಿಸಿಕೊಂಡಿದ್ದ ಅಮೆರಿಕದ ಜನಪ್ರಿಯ ನಾಯಕ ಮಾರ್ಟಿನ್ ಕಿಂಗ್ ಲೂಥರ್ ಜೂನಿಯರ್ ಅವರ ಪ್ರತಿಮೆಯನ್ನು ತಮ್ಮ ಕಚೇರಿಯಲ್ಲೇ ಇರಲು ಟ್ರಂಪ್ ಅನುವು ಮಾಡಿಕೊಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How was the fist day of Trump in his official office? Soon after his oath taking ceremony he went to his office to implement what he wanted to.
Please Wait while comments are loading...