ವಿಶ್ವದ ಅತಿದೊಡ್ಡ ಭೂಭಾಗ ಮಾರಾಟಕ್ಕೆ ಸಿದ್ಧ
ಅಡಿಲೇಡ್, ಜೂ. 24: ವಿಶ್ವದ ಅತಿದೊಡ್ಡ ಭೂಭಾಗ ಮಾರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಬರೋಬ್ಬರಿ 325 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ!
ಆಸ್ಟ್ರೇಲಿಯಾದ ಜಾನುವಾರು ಮೇಯಿಸುವ ಜಾಗಗಳನ್ನು ಒಟ್ಟು ಸೇರಿಸಿ ಮಾರಾಟ ಮಾಡಲು ಒಡೆತನ ಹೊಂದಿರುವ ಕಂಪನಿ ಮುಂದಾಗಿದೆ. 23 ಸಾವಿರ ಘನ ಕಿಲೋಮೀಟರ್ ಪ್ರದೇಶ ಮಾರಾಟಕ್ಕೆ ಅಣಿಯಾಗಿದೆ.[ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು!?]

ಕೇವಲ 150 ಜನ ದನಗಾಹಿಗಳು ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಈಗಾಗಲೇ 11 ಮಿಲಿಯನ್ ಹೇಕ್ಟೇರ್ ಪ್ರದೇಶವನ್ನು ವಿಶ್ವದ 30 ಜನ ದೊಡ್ಡ ಬಿಡ್ಡರ್ ಗಳಿಗೆ ಮಾರಾಟ ಮಾಡಲಾಗಿದೆ.
ಸರ್ ಸಿಡ್ನಿ ಕಿಡ್ ಮ್ಯಾನ್ ಎಂಬುವರ ಕುಟುಂಬಕ್ಕೆ ಸೇರಿದ ಭೂಮಿ ಇದಾಗಿದೆ. ಕಳೆದ 100 ವರ್ಷಗಳಿಂದ ಇವರ ಕುಟುಂಬದ ಒಡೆತನದಲ್ಲೇ ಅಪಾರ ಪ್ರಮಾಣದ ಭೂಮಿ ಇದೆ. ವಿಮಾನ ಯಾನದ ಮೂಲಕ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಆರಂಭವಾದ ಭೂಮಿ ಪರಿವೀಕ್ಷಣೆ ಉತ್ತರ ಆಸ್ಟ್ರೇಲಿಯಾವನ್ನು ಸೇರಿದ ಮೇಲೆ ಅಂತ್ಯವಾಗಿದೆ. ಸದ್ಯ ಎಸ್ ಕಿಡ್ ಮ್ಯಾನ್ ಆಂಡ್ ಕೊ ಹೆಸರಿನಲ್ಲಿ ಆಸ್ತಿಯಿದೆ. 1899 ರಲ್ಲಿ ಸರ್ ಸಿಡ್ನಿ ಕುಡ್ ಮ್ಯಾನ್ ಈ ಕಂಪನಿಯನ್ನು ಆರಂಭ ಮಾಡಿದ್ದರು.
ಭೂಮಿ ಮಾರಾಟಕ್ಕೆ ನಿರ್ಧಾರ ಮಾಡಿದ ಕಂಪನಿ ವಿಶ್ವದ ಹಲವು ರಾಷ್ಟ್ರಗಳಿಂದ ಬಿಡ್ಡರ್ ಗಳನ್ನು ಆಹ್ವಾನಿಸಿತ್ತು. ಚೀನಾ, ಅಮೆರಿಕ, ಕೆನಡಾ, ಇಂಗ್ಲೆಂಡ್, ಸೌತ್ ಅಮೆರಿಕಾ, ಇಂಡೋನೇಷಿಯಾ ಮತ್ತು ಆಸ್ಟ್ರೇಲಿಯಾದ ಅರ್ಧಕ್ಕೂ ಹೆಚ್ಚು ಬಿಡ್ಡರ್ ಗಳಿಗೆ ಆಹ್ವಾನ ನೀಡಲಾಗಿತ್ತು.
'ಜಾನುವಾರು ಸಾಕಾಣಿಗೆ ಈಗ ತುಂಬಾ ತ್ರಾಸದಾಯಕವಾಗಿದೆ. ಹಾಗಾಗಿ ಭೂ ಭಾಗವನ್ನು ಮಾರಾಟ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಪರಂಪರೆಯನ್ನುಮುಂದುವರಿಸಿಕೊಂಡು ಹೋಗವವರು ನಮ್ಮ ಕುಟುಂಬದಲ್ಲಿ ಇಲ್ಲವಾಗಿದ್ದಾರೆ' ಎಂದು ಕಿಡ್ ಮ್ಯಾನ್ ಕುಟುಬದ ಸದಸ್ಯರೊಬ್ಬರು ತಿಳಿಸಿದ್ದಾರೆ.












Click it and Unblock the Notifications