ಕೊವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ದುರಂತ, 10 ಮಂದಿ ಸಾವು
ಬುಚಾರೆಸ್ಟ್, ನ.15: ರೊಮೇನಿಯಾದ ಕೋವಿಡ್-19 ಆಸ್ಪತ್ರೆಯಲ್ಲಿಸಂಭವವಿಸಿದ ಅಗ್ನಿ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದು, 7 ಮಂದಿಗೆ ತೀವ್ರ ಗಾಯಗಳಾಗಿವೆ. ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಬೆಂಕಿ ಕಿಡಿ ಕಾಣಿಸಿಕೊಂಡು, ವ್ಯಾಪಿಸಿದೆ, ದಟ್ಟ ಹೊಗೆಯಿಂದ ಅಲ್ಲಿದ್ದವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ರೊಮೇನಿಯಾ ಉತ್ತರದಲ್ಲಿರುವ ಪಿಯಾಟ್ರಾ ನೀಮ್ ಆಸ್ಪತ್ರೆಯ ಕೋವಿಡ್ ಸೋಂಕಿತರ ಚಿಕಿತ್ಸಾ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ವೈದ್ಯರು ಸೇರಿದಂತೆ 7 ಮಂದಿ ಗಾಯಗೊಂಡಿದ್ದು, ಅಗ್ನಿ ಶಾಮಕ ದಳ ಸಿಬ್ಬಂದಿ ಎಲ್ಲರನ್ನು ರಕ್ಷಿಸಿ, ಬೆಂಕಿ ನಂದಿಸಿದ್ದಾರೆ. ವೈದ್ಯರಲ್ಲಿ ಹಲವರಿಗೆ ಶೇ 40ರಷ್ಟು ಸುಟ್ಟಗಾಯಗಳಾಗಿವೆ ಎಂದು ತುರ್ತು ಪರಿಸ್ಥಿತಿ ತನಿಖಾಧಿಕಾರಿ ವಕ್ತಾರ ಐರಿನಾ ಪೋಪಾ ಹೇಳಿದ್ದಾರೆ
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಎಲ್ಲಾ ರೋಗಿಗಳನ್ನು ಸ್ಥಳಾಂತರಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ರೊಮೇನಿಯಾದ ಆರೋಗ್ಯ ಮಂತ್ರಿ ನೆಲ್ಲು ಟಾಟಾರು ಹೇಳಿದ್ದಾರೆ.

Recommended Video
2015ರಲ್ಲಿ ರೊಮೇನಿಯಾದ ನೈಟ್ ಕ್ಲಬ್ಬೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 65 ಮಂದಿ ಸುಟ್ಟು ಕರಕಲಾಗಿದ್ದರು. ಇದಾದ ಬಳಿಕ ಆಸ್ಪತ್ರೆ ದುರಂತವೇ ಅತಿ ದೊಡ್ಡ ಅಗ್ನಿ ಅಪಘಾತ ಎಂದು ತಿಳಿದು ಬಂದಿದೆ.












Click it and Unblock the Notifications