ಫಿನ್ಲೆಂಡ್: ನಾಪತ್ತೆಯಾಗಿದ್ದ ಚೆನ್ನೈ ಮೂಲದ ಟೆಕ್ಕಿ ಶವವಾಗಿ ಪತ್ತೆ

ಹೆಲ್ಸಿಂಕಿ (ಫಿನ್ಲೆಂಡ್), ಸೆಪ್ಟೆಂಬರ್ 23: ಇದೇ ತಿಂಗಳು 8ರಿಂದ ಕಾಣೆಯಾಗಿದ್ದ ಚೆನ್ನೈ ಮೂಲದ ಭಾರತೀಯ ಟೆಕ್ಕಿ ಹರಿ ಸುಧಾನ್ (26), ಶವವಾಗಿ ಸಿಕ್ಕಿರುವುದು ತಡವಾಗಿ ವರದಿಯಾಗಿದೆ. ಫಿನ್ಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ವಾಣಿ ರಾವ್ ಅವರೂ ಈ ವರದಿಯನ್ನು ಖಾತ್ರಿಪಡಿಸಿದ್ದಾರೆ.

ಹೆಲ್ಸಿಂಕಿಯ ಸಮುದ್ರ ತೀರದಲ್ಲಿ ಆತನ ಶವ ಸೆ. 21ರ ಮಧ್ಯಾಹ್ನ ಗೋಚರಿಸಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆಯು, ತನ್ನಲ್ಲಿನ ಗಂಭೀರ ಪ್ರಕರಣಗಳ ತನಿಖಾ ವಿಭಾಗಗಕ್ಕೆ ವರ್ಗಾಯಿಸಿದೆ ಎಂದು ಅವರು ತಿಳಿಸಿದ್ದಾರೆ.

TCS techie from Chennai went missing in Finland found dead

ಹರಿ ಸುಧಾನ್, ಹೆಲ್ಸಿಂಕಿಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈತನ ನಾಪತ್ತೆ ಹಾಗೂ ಸಾವು ನಿಗೂಢವಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಫಿನ್ಲೆಂಡ್ ಪೊಲೀಸ್ ಇಲಾಖೆ ತಿಳಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹೆಲ್ಸಿಂಕಿಯ ಟಿಸಿಎಸ್ ಶಾಖೆಯ ವಕ್ತಾರರು, ''ಟೆಕ್ಕಿಯ ಸಾವಿನ ವಿಚಾರವನ್ನು ಚೆನ್ನೈನಲ್ಲಿರುವ ಆತನ ಕುಟುಂಬಸ್ಥರಿಗೆ ತಿಳಿಸಲಾಗಿದೆ. ಈ ಪ್ರಕರಣದ ತನಿಖೆಗೆ ಟಿಸಿಎಸ್ ಸಂಸ್ಥೆ ಸಹಕಾರ ನೀಡಲಿದೆ'' ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+