ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಂಜೇನಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಾಮಿಯಾ ಹಸನ್

|
Google Oneindia Kannada News

ತಾಂಜೇನಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಾಮಿಯಾ ಸುಳುಹು ಹಸನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಹಿಂದಿನ ಅಧ್ಯಕ್ಷ ಜಾನ್ ಮಾಗುಫೆಲ್ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಸಾಮಿಯಾ ನೇಮಕಗೊಂಡಿದ್ದಾರೆ.61 ವರ್ಷದ ಹಸನ್ ಮುಸ್ಲಿಂ ಮಹಿಳೆಯಾಗಿದ್ದು, ಜಾನ್ಜಿಬಾರ್ ಮೂಲದವರಾಗಿದ್ದಾರೆ. ಇವರು ಮಗುಫುಲಿಯವರ ಐದು ವರ್ಷದ ಅಧಿಕಾರವನ್ನು ಪೂರೈಸಲಿದ್ದಾರೆ.

ತಾಂಜೇನಿಯಾ ಅಧ್ಯಕ್ಷ 'ಬುಲ್ಡೋಜರ್' ಜಾನ್ ಮಗುಫುಲಿ ನಿಧನತಾಂಜೇನಿಯಾ ಅಧ್ಯಕ್ಷ 'ಬುಲ್ಡೋಜರ್' ಜಾನ್ ಮಗುಫುಲಿ ನಿಧನ

ಹಸನ್ ಅವರು ತಾಂಜೇನಿಯಾದ ಸಂವಿಧಾನವನ್ನು ಪಾಲಿಸುವುದಾಗಿ ಪ್ರಮಾಣ ಮಾಡಿದ್ದಾರೆ. ಜಾನ್ ಮಗುಫುಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ ಸಾವಿಗೆ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ.

Tanzanias Samia Suluhu Hassan Sworn In As First Female President

ಮಗುಫುಲಿ 1995ರಲ್ಲಿ ಮೊದಲ ಬಾರಿಗೆ ಪಾರ್ಲಿಮೆಂಟ್​ಗೆ ಆಯ್ಕೆಯಾಗಿದ್ದರು. 2010ರಲ್ಲಿ ಎರಡನೇ ಬಾರಿಗೆ ಸಾರಿಗೆ ಮಂತ್ರಿಯಾದ ನಂತರ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ರಸ್ತೆ ನಿರ್ಮಾಣ ಉದ್ಯಮದಲ್ಲಿ ಅವರ ನಾಯಕತ್ವದ ಶೈಲಿ ಮತ್ತು ಹೋರಾಟವು ತಾಂಜೇನಿಯಾ ಜನರನ್ನು ಆಕರ್ಷಿಸಿತ್ತು. ಅದಕ್ಕೆ ಅವರನ್ನು ಬುಲ್ಡೋಜರ್​ ಎಂದು ಕರೆಯಲಾಗುತ್ತಿತ್ತು.

ಪ್ರತಿ ಭಾನುವಾರ ಸಾರ್ವಜನಿಕವಾಗಿ ಚರ್ಚ್​ ​ಆಗಮಿಸುತ್ತಿದ್ದ ದಿವಂಗತ ಮಗುಫುಲಿ, ಫೆಬ್ರವರಿ 27ರಿಂದ ಅನಾರೋಗ್ಯದ ಕಾರಣ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. 2015 ರಲ್ಲಿ ಅಧ್ಯಕ್ಷರಾಗಿದ್ದ ಅವರು ಮತ್ತೆ 2020 ರಲ್ಲಿ ನಡೆದ ಚುನಾವಣೆಯಲ್ಲೂ ಗೆದ್ದು ಆಯ್ಕೆಯಾಗಿದ್ದರು.

English summary
Tanzania's Samia Suluhu Hassan was on Friday sworn in as the country's first female president after the sudden death of John Magufuli from an illness shrouded in mystery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X