Breaking News: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಯಾವಾಗ?

ಕಾಬೂಲ್, ಆಗಸ್ಟ್ 20: ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆಯು ಸರ್ಕಾರ ರಚಿಸುವುದು ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸರ್ಕಾರ ರಚನೆ ಬಗ್ಗೆ ತಾಲಿಬಾನ್ ಯಾವುದೇ ರೀತಿ ನಿರ್ಧಾರ ಮತ್ತು ಘೋಷಣೆಯನ್ನು ಹೊರಡಿಸಿಲ್ಲ ಎಂದು ಗೊತ್ತಾಗಿದೆ.

Recommended Video

      ತಾಲಿಬಾನಿಗಳಿಗೆ ಹೆದರಿ ನಾವೇನು ಓಡಿ ಹೋಗಲ್ಲ ಅಂದ್ರು ಜೋ ಬೈಡನ್ | Oneindia Kannada

      ಯುಎಸ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದಂತೆ ಯುಎಸ್ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೂ ಅಂದರೆ ಆಗಸ್ಟ್ 30ರವರೆಗೂ ಯಾವುದೇ ರೀತಿ ಸರ್ಕಾರ ರಚನೆಯ ಪ್ರಕ್ರಿಯೆಗಳನ್ನು ನಡೆಸುವುದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

      ಯುಎಸ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಅಂತಿಮ ವಾಪಸಾತಿ ದಿನಾಂಕ ಮುಗಿಯುವವರೆಗೂ ತಾಲಿಬಾನ್ ಸಂಘಟನೆ ಬಂಡಾಯಕಾರರು ಯಾವುದೇ ರೀತಿ ಕಾರ್ಯಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ತಾಲಿಬಾನ್ ಮತ್ತು ಹಿಂದಿನ ಸರ್ಕಾರದ ನಡುವೆ ಸಂಧಾನಕಾರರಾದ ಅನಾಸ್ ಹಕ್ಕಾನಿ ತಿಳಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಏನನ್ನೂ ಮಾಡದಿರುವ ಬಗ್ಗೆ ಉಲ್ಲೇಖಿಸಲಾಗಿದೆಯೇ ಎಂಬ ಪ್ರಶ್ನೆಗೆ ಅರು ಉತ್ತರಿಸಲಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

      ಸರ್ಕಾರದಲ್ಲಿ ತಾಲಿಬಾನ್ ಹೊರತಾಗಿ ಇರುವವರಿಗೂ ಸ್ಥಾನ?

      ಸರ್ಕಾರದಲ್ಲಿ ತಾಲಿಬಾನ್ ಹೊರತಾಗಿ ಇರುವವರಿಗೂ ಸ್ಥಾನ?

      ಹಕ್ಕಾನಿಯ ಹೇಳಿಕೆಯ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಮುಂದಿನ ಆಗಸ್ಟ್ 31ರ ನಂತರ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಚಳುವಳಿಯು ಯೋಜನೆ ಹೇಗಿರುತ್ತದೆ. ಮುಂದಿನ ಸರ್ಕಾರದಲ್ಲಿ ತಾಲಿಬಾನ್ ಹೊರತಾದ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಆಡಿದ ಮಾತಿಗೆ ವಿರುದ್ಧವಾಗಿ ತಾಲಿಬಾನಿಗಳು ವರ್ತಿಸುತ್ತಿರುವುದು ಜಗತ್ಜಾಹೀರಾಗಿದೆ. ಅಷ್ಟಾಗ್ಯೂ, ತಾಲಿಬಾನ್ ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತದೆಯೇ ಇಲ್ಲವೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ಇಲ್ಲಿಯವರೆಗೆ ತಾಲಿಬಾನ್‌ಗಳು ಅಫ್ಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳ ಬದಲಾವಣೆ ಪ್ರಕ್ರಿಯೆ ಹೇಗಿರುತ್ತದೆ ಅಥವಾ ಬದಲಿಸಲಾಗುತ್ತದೆಯೇ ಎಂಬ ಬಗ್ಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

      5,200 ಯುಎಸ್ ಪಡೆ ಯೋಧರ ನಿಯೋಜನೆ

      5,200 ಯುಎಸ್ ಪಡೆ ಯೋಧರ ನಿಯೋಜನೆ

      ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದಲ್ಲಿ ಈವರೆಗೂ 5,200 ಯುಎಸ್ ಸೇನಾ ಪಡೆ ಯೋಧರನ್ನು ನಿಯೋಜಿಸಲಾಗಿತ್ತು ಎಂದು ಯುಎಸ್ ಆರ್ಮಿ ಮೇಜರ್ ಜನರಲ್ ವಿಲಿಯಮ್ ಹಂಕ್ ಮಾಹಿತಿ ನೀಡಿದ್ದಾರೆ. "ಕಾಬೂಲ್ ವಿಮಾನ ನಿಲ್ದಾಣ ಇಂದಿಗೂ ಸುರಕ್ಷಿತವಾಗಿದ್ದು ವಿಮಾನಗಳ ಸಂಚಾರಕ್ಕೆ ಮುಕ್ತವಾಗಿದೆ. ಯುಎಸ್ ಪ್ರಜೆಗಳನ್ನು ಮತ್ತು ಸೇನೆಯನ್ನು ವಾಪಸ್ ಕರೆ ತರುವ ಕಾರ್ಯಾಚರಣೆ ಆರಂಭಿಸಿದ ಆಗಸ್ಟ್ 14ರಿಂದ ಈವರೆಗೂ 7,000 ಜನರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲಾಗಿದೆ," ಎಂದಿದ್ದಾರೆ.

      ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳುವ ದಿನಾಂಕ ವಿಸ್ತರಣೆ

      ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳುವ ದಿನಾಂಕ ವಿಸ್ತರಣೆ

      ಅಫ್ಘಾನಿಸ್ತಾನದಲ್ಲಿ ನಿಯೋಜಿಸಿದ ಯುಎಸ್ ಸೇನೆಯನ್ನು ದಿಢೀರನೇ ವಾಪಸ್ ಕರೆಸಿಕೊಂಡ ಅಧ್ಯಕ್ಷ ಜೋ ಬೈಡನ್ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬೆಳವಣಿಗೆ ಮಧ್ಯೆ ಸೇನೆ ವಾಪಸ್ ತೆಗೆದುಕೊಳ್ಳುವ ದಿನಾಂಕವನ್ನುವಿಸ್ತರಿಸುವ ಸಾಧ್ಯತೆಗಳಿವೆ. ಆಗಸ್ಟ್ 31ಕ್ಕೆ ಸ್ಥಳಾಂತರ ಕಾರ್ಯಾಚರಣೆ ಅಂತ್ಯವಾಗಲಿದ್ದು, ಅದಾಗ್ಯೂ ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಪ್ರಜೆಗಳು ಸಿಲುಕಿದ್ದೇ ಆದರೆ ಅವರೆಲ್ಲರನ್ನು ವಾಪಸ್ ಕರೆ ತರುವವರೆಗೂ ಕಾರ್ಯಾಚರಣೆ ನಡೆಸಲಾಗುವುದು ಎಂದು ಬೈಡನ್ ಹೇಳಿದ್ದಾರೆ. ಆ ಮೂಲಕ ಸ್ಥಳಾಂತರ ಕಾರ್ಯಾಚರಣೆಯನ್ನು ವಿಸ್ತರಿಸುವ ಸುಳಿವು ನೀಡಿದ್ದಾರೆ.

      ಆಂತರಿಕ ಮತ್ತು ಸಾರ್ವಜನಿಕ ಮತದಾರನ್ನು ಆಧರಿಸಿ ಈ ತಂತ್ರ ಹೆಣೆಯಲಾಗಿದ್ದು, ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳುವುದು ಬೈಡೆನ್ ತೆಗೆದುಕೊಂಡ ಅತ್ಯಂತ ಜನಪ್ರಿಯ ನಿರ್ಧಾರವಾಗಿದೆ. ಆದರೂ ಹೆಚ್ಚಿನ ಮತದಾರರಿಗೆ ಇದು ಮುಖ್ಯ ವಿಷಯವಾಗಿಲ್ಲ. "ಅಮೆರಿಕನ್ನರು ನಡೆಯುತ್ತಿರುವ ಯುದ್ಧದಿಂದ ಹೊರಬರಲು ಬಯಸುತ್ತಾರೆ ಮತ್ತು ಮರಳಿ ಪ್ರವೇಶಿಸಲು ಬಯಸುವುದಿಲ್ಲ ಎಂಬುದು ಸಾರ್ವಜನಿಕ ಅಭಿಪ್ರಾಯದಿಂದ ಸ್ಪಷ್ಟವಾಗಿದೆ. ಇದು ಇಂದು ಅಥವಾ ಮುಂದಿನ ಆರು ತಿಂಗಳಲ್ಲಿ ನಿಜವಾಗಲಿದೆ" ಎಂದು ಬೈಡೆನ್ ಮಿತ್ರ ಹೇಳಿದ್ದಾರೆ.

      ತಾಲಿಬಾನ್ ಉಗ್ರರ ವಶವಾಗಿದ್ದು ಹೇಗೆ ಅಫ್ಘಾನಿಸ್ತಾನ?

      ತಾಲಿಬಾನ್ ಉಗ್ರರ ವಶವಾಗಿದ್ದು ಹೇಗೆ ಅಫ್ಘಾನಿಸ್ತಾನ?

      ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.

      ಅಫ್ಘಾನ್ ಮೇಲೆ ಅಮೆರಿಕಾ ಹಿಡಿತ ಸಾಧಿಸಿದ ಕಾಲ:

      ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+