ಸೆಪ್ಟೆಂಬರ್ 3: ಅಫ್ಘಾನಿಸ್ತಾನದಲ್ಲಿ ಇಂದೇ ತಾಲಿಬಾನ್ ಸಂಘಟನೆ ಸರ್ಕಾರ ರಚನೆ

ಕಾಬೂಲ್, ಸಪ್ಟೆಂಬರ್ 3: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿ ಎರಡು ವಾರಗಳೇ ಕಳೆದಿವೆ. ಶುಕ್ರವಾರದ ಪ್ರಾರ್ಥನೆ ಬಳಿಕ ತಾಲಿಬಾನ್ ಸಂಘಟನೆಯು ಅಧಿಕೃತವಾಗಿ ಸರ್ಕಾರ ರಚನೆ ಮಾಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಆಗಸ್ಟ್ 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿತು. ಎರಡು ದಶಕಗಳ ಕಾಲ ಅಫ್ಘಾನಿಸ್ತಾನದಲ್ಲಿ ಸಂಘರ್ಷದ ಯುದ್ಧವನ್ನು ಯುಎಸ್ ಅಂತ್ಯಗೊಳಿಸಿತು. ಕಳೆದ ಆಗಸ್ಟ್ 31ರವರೆಗೂ ಯುಎಸ್ ಸೇನೆ ತಮ್ಮ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ಕಾರ್ಯಾಚರಣೆ ನಡೆಸಿತು. ಯುಎಸ್ ಸೇನೆಯು ದೇಶದಿಂದ ವಾಪಸ್ ಆಗುತ್ತಿದ್ದಂತೆ ಇಡೀ ಅಫ್ಘಾನಿಸ್ತಾನ ತಾಲಿಬಾನ್ ಸಂಘಟನೆಯ ಕೈವಶವಾಯಿತು.

ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರ ಹಿಡಿಯಲು ಮುಂದಾಗಿರುವ ತಾಲಿಬಾನ್ ಸಪ್ಟೆಂಬರ್ 3ರಂದು ಸರ್ಕಾರ ರಚಿಸಲಿದೆ. ಅಂತಾರಾಷ್ಟ್ರೀಯ ಸಮುದಾಯದ ನೆರವಿನೊಂದಿಗೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶದ ಆಳ್ವಿಕೆಯ ಚುಕ್ಕಾಣಿ ಹಿಡಿಯಲು ತಾಲಿಬಾನ್ ಸಿದ್ಧವಾಗಿದೆ. ತಾಲಿಬಾನ್ ಸರ್ಕಾರ ರಚನೆ ಹಾಗೂ ಅದರ ಸುತ್ತಲಿನ ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ದಾನಿಗಳು ಮತ್ತು ಹೂಡಿಕೆದಾರರ ಮೇಲೆ ದೃಷ್ಟಿ

ದಾನಿಗಳು ಮತ್ತು ಹೂಡಿಕೆದಾರರ ಮೇಲೆ ದೃಷ್ಟಿ

ಅಫ್ಘಾನಿಸ್ತಾನದಲ್ಲಿ ಬರ ಮತ್ತು ಸಂಘರ್ಷದ ವಿನಾಶದಿಂದ ಅಂದಾಜು 2,40,000 ಅಫ್ಘನ್ನರ ಜೀವವನ್ನು ತೆಗೆದುಕೊಂಡಿದೆ. ಈ ಮಧ್ಯೆ ಸರ್ಕಾರ ರಚಿಸಲು ಹೊರಟಿರುವ ತಾಲಿಬಾನ್ ಎದುರಿಗೆ ಸಾಕಷ್ಟು ಸವಾಲುಗಳಿವೆ. ಅಂತಾರಾಷ್ಟ್ರೀಯ ಹೂಡಿಕೆದಾರರು ಮತ್ತು ದಾನಿಗಳ ಮೇಲೆ ತಾಲಿಬಾನ್ ದೃಷ್ಟಿ ನೆಟ್ಟಿದೆ. ಸಾಮೂಹಿಕ ಸ್ಥಳಾಂತರ ಪ್ರಕ್ರಿಯೆ ನಂತರದಲ್ಲಿ ಅಫ್ಘನ್ನರು ಮತ್ತು ವಿದೇಶಿ ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿತ್ತು. ಆದರೆ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂದಿಗೂ ಮುಚ್ಚಿದ್ದು, ನೆರೆರಾಷ್ಟ್ರಗಳಿಗೆ ಪ್ರಯಾಣಿಸಲು ಆಗದೇ ಜನರು ಪರಿತಪಿಸುವಂತಾ ಸ್ಥಿತಿಯಿದೆ.

ಕಾಬೂಲ್ ಏರ್‌ಪೋರ್ಟ್‌ನ ಪುನಾರಂಭದ ಬಗ್ಗೆ ವಿಶ್ವಾಸ

ಕಾಬೂಲ್ ಏರ್‌ಪೋರ್ಟ್‌ನ ಪುನಾರಂಭದ ಬಗ್ಗೆ ವಿಶ್ವಾಸ

ಗಲ್ಫ್ ರಾಜ್ಯಗಳು ತಾಲಿಬಾನ್ ಜೊತೆಗೆ ಚರ್ಚೆ ನಡೆಸುತ್ತಿದೆ. ಟರ್ಕಿಯೊಂದಿಗೆ ತಾಂತ್ರಿಕ ಬೆಂಬಲ ಪಡೆದುಕೊಂಡು ಕಾಬೂಲ್ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪುನಾರಂಭಿಸಲಾಗುವುದು. ಮಾನವೀಯ ನೆರವು ಹಾಗೂ ಹೆಚ್ಚಿನ ಜನರ ಸ್ಥಳಾಂತರಕ್ಕೆ ಸಹಕರಿಸಲಾಗುವುದು ಎಂದು ಕ್ವಾತಾರ್ ವಿದೇಶಾಂಗ ವ್ಯವಹಾರಗಳ ಸಚಿವ ಶೇರ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥನಿ ಹೇಳಿದ್ದಾರೆ.

ದೋಹಾದಲ್ಲಿ ಕ್ವಾತಾರ್ ಸಚಿವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಜನರಿಗೆ ಮೂರನೇ ದೇಶಗಳ ಮೂಲಕ ಸುರಕ್ಷಿತ ಮಾರ್ಗವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಪ್ರಾದೇಶಿಕ ದೇಶಗಳೊಂದಿಗೆ ಮಾತನಾಡುವುದಾಗಿ ಹೇಳಿದರು. "ಕಾಬೂಲ್ ವಿಮಾನ ನಿಲ್ದಾಣವನ್ನು ಕಾರ್ಯರೂಪಕ್ಕೆ ತರುವ ಮತ್ತು ವಿದೇಶಿ ಪ್ರಜೆಗಳು ಮತ್ತು ಅಫ್ಘಾನಿಸ್ತಾನಗಳಿಗೆ ಭೂ ಗಡಿಯುದ್ದಕ್ಕೂ ಸುರಕ್ಷಿತ ಮಾರ್ಗಗಳು (ಅಜೆಂಡಾ) ಅಗ್ರಸ್ಥಾನದಲ್ಲಿದೆ" ಎಂದು ಬ್ರಿಟಿಷ್ ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಅಫ್ಘಾನಿಸ್ತಾನ ಹೊಸ ಸರ್ಕಾರದಲ್ಲಿ ತಾಲಿಬಾನ್‌ನ ಅತ್ಯುನ್ನತ ನಾಯಕ ಹೈಬತುಲ್ಲಾ ಅಖುಂಡಜಾದ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದ್ದು, ಅವರ ಅಧೀನದಲ್ಲಿ ಅಧ್ಯಕ್ಷರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಫ್ಘಾನ್ ಆರ್ಥಿಕತೆಗೆ ಭಾರಿ ಹೊಡೆತ

ಅಫ್ಘಾನ್ ಆರ್ಥಿಕತೆಗೆ ಭಾರಿ ಹೊಡೆತ

ಅಫ್ಘಾನಿಸ್ತಾನದಲ್ಲಿ ಒಂದು ಕಡೆ ಬರಗಾಲ ಮತ್ತೊಂದು ಕಡೆ ಯುದ್ಧ ಸನ್ನಿವೇಶ. ಇಂಥ ಪರಿಸ್ಥಿತಿಯಲ್ಲಿ ಸಾವಿರಾರು ಕುಟುಂಬಗಳು ಸ್ವದೇಶವನ್ನೇ ತೊರೆದು ಬೇರೆ ರಾಷ್ಟ್ರಗಳಿಗೆ ಪಲಾಯನ ಮಾಡಿರುವುದು ಮಾನವೀಯತೆ ದುರಂತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಫ್ಘಾನಿಸ್ತಾನಕ್ಕೆ ಹಣದ ಅವಶ್ಯಕತೆಯಿದೆ. ಆದರೆ ತಾಲಿಬಾನ್‌ಗಳು ಅಫ್ಘಾನ್ ಸೆಂಟ್ರಲ್ ಬ್ಯಾಂಕ್‌ನಿಂದ ವಿದೇಶದಲ್ಲಿ ಹೊಂದಿರುವ ಸುಮಾರು 10 ಬಿಲಿಯನ್ ಡಾಲರ್ ಸ್ವತ್ತುಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ತಾಲಿಬಾನ್ ಹೊಸತಾಗಿ ನೇಮಿಸಿದ ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥರು ಬ್ಯಾಂಕುಗಳ ಸಂಪೂರ್ಣ ಕಾರ್ಯನಿರ್ವಹಣೆಗೆ ಅಗತ್ಯವಿರುವ ಹಣಕಾಸು ವ್ಯವಸ್ಥೆಯನ್ನು ಬಯಸುತ್ತಾರೆ. ಆದರೆ ಅಗತ್ಯವಿರುವ ಸವಲತ್ತುನ್ನು ಹೇಗೆ ಒದಗಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ದೇಶದಲ್ಲಿ ಉತ್ಪಾದನೆ ಪ್ರಮಾಣ ಕುಸಿತದ ನಿರೀಕ್ಷೆ

ದೇಶದಲ್ಲಿ ಉತ್ಪಾದನೆ ಪ್ರಮಾಣ ಕುಸಿತದ ನಿರೀಕ್ಷೆ

ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಒಟ್ಟು ಆಂತರಿಕ ಉತ್ಪನ್ನವು ಈ ಆರ್ಥಿಕ ವರ್ಷದಲ್ಲಿ ಶೇ.9.7ರಷ್ಟು ಕುಸಿಯುವ ನಿರೀಕ್ಷೆಯಿದೆ. ಅಲ್ಲದೇ ಮುಂದಿನ ವರ್ಷವೂ ಶೇ.5.2ರಷ್ಟು ಕುಸಿತ ಕಂಡುಬರುತ್ತದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ಗ್ರೂಪ್‌ನ ಸಂಶೋಧನಾ ವಿಭಾಗವಾದ ಫಿಚ್ ಸೊಲ್ಯೂಷನ್ಸ್‌ನ ವರದಿಯಲ್ಲಿ ವಿಶ್ಲೇಷಕರು ಉಲ್ಲೇಖಿಸಿದ್ದಾರೆ. ಈ ಹಂತದಲ್ಲಿ ಹೆಚ್ಚು ಆಶಾವಾದದ ದೃಷ್ಟಿಕೋನ ಬೆಂಬಲಿಸಲು ವಿದೇಶಿ ಹೂಡಿಕೆಯ ಅಗತ್ಯವಿದೆ. "ಚೀನಾ ಮತ್ತು ಸಂಭಾವ್ಯ ರಷ್ಯಾದಂತ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರಗಳು ತಾಲಿಬಾನ್ ಅನ್ನು ಕಾನೂನುಬದ್ಧ ಸರ್ಕಾರವೆಂದು ಒಪ್ಪಿಕೊಳ್ಳುತ್ತವೆ" ಎಂದು ಫಿಚ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+