ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಮುಲ್ಲಾ, ಹಕ್ಕಾನಿ ನಡುವೆ ತೀವ್ರ ಪೈಪೋಟಿ

ಕಾಬೂಲ್, ಸೆಪ್ಟೆಂಬರ್ 06: ಅಫ್ಘಾನಿಸ್ತಾನದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಮುಲ್ಲಾ ಬರಾದರ್ ಹಾಗೂ ಹಕ್ಕಾನಿ ನಡುವೆ ಪೈಪೋಟಿ ನಡೆಯುತ್ತಿದೆ.

ಶನಿವಾರವೇ ಬರಾದರ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಬೇಕಿತ್ತು ಆದರೆ, ಈ ಸಂಬಂಧ ಮಾತುಕತೆ ಇನ್ನೂ ಪೂರ್ಣಗೊಳ್ಳದ ಕಾರಣ ಮುಂದಿನ ವಾರ ಸರ್ಕಾರ ಸ್ಥಾಪಿಸುವುದಾಗಿ ತಾಲಿಬಾನ್ ಸ್ಪಷ್ಟಪಡಿಸಿದೆ.

ಹಕ್ಕಾನಿ ಗುಂಪನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ. ಈ ಗುಂಪು ಅತ್ಯಂತ ಸಾಂಪ್ರದಾಯಿಕ ಸುನ್ನಿ ಪಶ್ತೂನ್ ಸರ್ಕಾರ ರಚನೆಯಾಗಬೇಕು ಎಂದು ಹಠ ಹಿಡಿದಿದೆ.

Taliban, Haqqani Faction Fight Amid Differences Over Afghan Govt Formation

ದೋಹಾ ಶಾಂತಿ ಮಾತುಕತೆಯ ವೇಳೆ ತಾಲಿಬಾನ್ ಸಹ ಸಂಸ್ಥಾಪಕ, ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ಕೈಗೊಂಡ ನಿರ್ಣಯದ ವಿರುದ್ದ ಅದು ವ್ಯವಹರಿಸುತ್ತಿದೆ.

ಅಂತಾರಾಷ್ಟ್ರೀಯ ಸಮುದಾಯದ ಮಾನ್ಯತೆ ಪಡೆಯಬೇಕೆಂದರೆ, ಅಲ್ಪಸಂಖ್ಯಾತರು ಸರ್ಕಾರದ ಭಾಗವಾಗಬೇಕೆಂದು ಬರಾದರ್‌ ಬಯಸಿದ್ದಾರೆ. ಆದರೆ ಹಕ್ಕಾನಿ ಮುಖ್ಯಸ್ಥ, ತಾಲಿಬಾನ್‌ ಉಪ ನಾಯಕ ಸಿರಾಜುದ್ದೀನ್‌ ಹಾಗೂ ಅವರ ಬಂಡಕೋರ ಮಿತ್ರರು ಮಾತ್ರ ಯಾರೊಂದಿಗೂ ಸರ್ಕಾರ ಹಂಚಿಕೊಳ್ಳಲು ಬಯಸುತ್ತಿಲ್ಲ.

ನೂರಕ್ಕೆ ನೂರರಷ್ಟು ತಾಲಿಬಾನ್ ಸರ್ಕಾರ ರಚನೆಯಾಗಬೇಕು ಎಂದು ಹೇಳುತ್ತಿದ್ದಾರೆ. ತಾವು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಅಫ್ಘಾನ್ ರಾಜಧಾನಿಯ ಮೇಲೆ ತಮ್ಮ ಪ್ರಾಬಲ್ಯವಿದೆ ಹಾಗಾಗಿ ಉಳಿದರವರು ಹಿಂದೆ ಸರಿಯಬೇಕು ಎಂದು ಬರದರ್‌ ಕೋರಿದ್ದಾರೆ.

ಅಮೆರಿಕಾದ ಸೇನೆ ಆಫ್ಘಾನಿಸ್ತಾನವನ್ನು ತೊರೆದು ಐದು ದಿನಗಳು ಗತಿಸಿದ್ದರೂ ಕೂಡ ತಾಲಿಬಾನ್ ಇನ್ನೂ ಹೊಸ ಸರ್ಕಾರವನ್ನು ರಚಿಸಿಲ್ಲ. ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ನಾಯಕರು ಇದೀಗ ಅಧಿಕಾರ ಹಂಚಿಕೆಗಾಗಿ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಮತ್ತು ಹಕ್ಕಾನಿ ಬಣದ ನಡುವೆ ಶೂಟೌಟ್ ನಡೆದಿದೆ ಎಂದು ವರದಿಯಾಗಿದೆ. ಅಫ್ಘಾನ್ ಪತ್ರಿಕೆ ಪಂಜ್‌ಶಿರ್ ಅಬ್ಸರ್ವರ್ ಪ್ರಕಾರ, ಅನಸ್ ಹಕ್ಕಾನಿ ಕಡೆಯಿಂದ ಗುಂಡು ಹಾರಿಸಲಾಗಿದ್ದು, ಇದರಲ್ಲಿ ಮುಲ್ಲಾ ಬರಾದರ್ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಪ್ರಸ್ತುತ ಬರಾದರ್ ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ. ಆದರೆ, ಸದ್ಯಕ್ಕೆ ಈ ಕುರಿತಾದ ಯಾವುದೇ ಮಾಹಿತಿ ದೃಢಪಟ್ಟಿಲ್ಲ.

ಏತನ್ಮಧ್ಯೆ, ಪಾಕಿಸ್ತಾನವು ತನ್ನ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಕಾಬೂಲ್‌ಗೆ ಕಳುಹಿಸಿದೆ. ಜಗಳವನ್ನು ಇತ್ಯರ್ಥಗೊಳಿಸಲು ಆತನನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಹಕ್ಕಾನಿ ನೆಟ್ವರ್ಕ್ ರಕ್ಷಣಾ ಮಂತ್ರಿ ಹುದ್ದೆಯನ್ನು ಕೋರಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಹಕ್ಕಾನಿ ನೆಟ್ವರ್ಕ್ನ ಮುಖ್ಯ ಉಸ್ತುವಾರಿ. ಅಲ್-ಖೈದಾ ಜೊತೆಗಿನ ನಿಕಟ ಸಂಬಂಧದಿಂದಾಗಿ ಈ ಸಂಘಟನೆಯನ್ನು ವಿಶ್ವಸಂಸ್ಥೆಯು ಭಯೋತ್ಪಾದಕ ಗುಂಪು ಎಂದು ವರ್ಗೀಕರಿಸಿದೆ.

ವರದಿಗಳ ಪ್ರಕಾರ ISI ಆಫ್ಘಾನಿಸ್ತಾನದಲ್ಲಿ ತನ್ನ ಲೆಕ್ಕಾಚಾರಕ್ಕೆ ತಕ್ಕಂತೆ ಸರ್ಕಾರ ರಚನೆಯನ್ನು ಬಯಸುತ್ತಿದೆ. ಎನ್ನಲಾಗಿದೆ. ಮೂಲಭೂತವಾದಿ ಮುಸ್ಲಿಂ ಸಂಘಟನೆ ಇರಾನ್ ಮಾಡೆಲ್ ಆಧಾರದ ಮೇಲೆ ಒಂದು ಸರ್ಕಾರ ರಚಿಸುವ ಯೋಜನೆಯನ್ನು ರೂಪಿಸುತ್ತಿದೆ.

ಇಸ್ಲಾಮಿಕ್ ಗಣರಾಜ್ಯದಲ್ಲಿ ರಾಜ್ಯದ ಮುಖ್ಯಸ್ಥನೆ ಸರ್ವೋಚ್ಛ ನಾಯಕನಾಗಿರುತ್ತಾನೆ ಹಾಗೂ ರಾಜಕೀಯ ಹಾಗೂ ಧಾರ್ಮಿಕ ಪ್ರಾಧಿಕಾರ ರಾಷ್ಟ್ರಪತಿಗಿಂತಲೂ ಸರ್ವೋಚ್ಛ ಅಧಿಕಾರ ಹೊಂದಿರುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಫೈಜ್ ಹಮೀದ್ ಅವರ ಕಾಬೂಲ್ ಭೇಟಿಯ ಮುಖ್ಯ ಉದ್ದೇಶವೆಂದರೆ ಮುಲ್ಲಾ ಅಬ್ದುಲ್ ಘನಿ ಬರಾದರ್, ಕ್ವೆಟ್ಟಾ ಶೂರಾದ ಮುಲ್ಲಾ ಯಾಕೂಬ್, ಮುಲ್ಲಾ ಒಮರ್ ಅವರ ಹಿರಿಯ ಮಗ ಮತ್ತು ಹಕ್ಕಾನಿ ನೆಟ್ವರ್ಕ್ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದಾಗಿದೆ ಎನ್ನಲಾಗಿದೆ.

ಏತನ್ಮಧ್ಯೆ, ಇರಾನಿನ ಪತ್ರಕರ್ತ ಟ್ಜುಡೆನ್ ಸೊರೌಶ್ ಪ್ರಕಾರ, ತಾಲಿಬಾನ್ ಬಣಗಳ ನಡುವೆ ಆಳವಾದ ಬಿರುಕುಗಳು ಹುಟ್ಟಿಕೊಂಡಿವೆ, ಇದು ಅವರ ಸರ್ಕಾರ ರಚನೆಯನ್ನುವಿಳಂಬವನ್ನಾಗಿಸುತ್ತಿದೆ.

ಈ ಹಿಂದೆ ಮುಲ್ಲಾ ಬರದಾರ್ ತಾಲಿಬಾನ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಮುಲ್ಲಾ ಬರದಾರ್ ಬಣ ಮತ್ತು ಹಕ್ಕಾನಿ ನೆಟ್ವರ್ಕ್ ನಡುವಿನ ಉದ್ವಿಗ್ನತೆಯಿಂದಾಗಿ ವಿಳಂಬವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+