Breaking News: ಅಫ್ಘಾನ್ ರಾಜಧಾನಿ ಕಾಬೂಲ್‌ಗೆ ಲಗ್ಗೆಯಿಟ್ಟ ತಾಲಿಬಾನ್!

ಕಾಬೂಲ್, ಆಗಸ್ಟ್ 15: ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯು ಭಾನುವಾರ ರಾಜಧಾನಿ ಕಾಬೂಲ್ ಹೊರವಲಯಕ್ಕೆ ಲಗ್ಗೆ ಇಟ್ಟಿದೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡುವುದಕ್ಕೆ ಯಾವುದೇ ರೀತಿ ಅಧಿಕಾರ ಇಲ್ಲದಿರುವ ತಮ್ಮ ಅನಾಮಧೇಯ ಸ್ಥಿತಿಯ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಹೋರಾಟ ನಡೆಸುವುದಕ್ಕೆ ಏನೂ ಉಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಉಗ್ರ ಸಂಘಟನೆಯು ಕ್ವಾರಾಬಾಗ್, ಕಲಕನ್ ಮತ್ತು ಪಾಘಮನ್ ಜಿಲ್ಲೆಗಳಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಬಂಡಾಯ ಎದ್ದಿರುವ ತಾಲಿಬಾನ್ ಸಂಘಟನೆಯವರು ರಾಜಧಾನಿಯಲ್ಲಿ ತಮ್ಮ ಇರುವಿಕೆ ಬಗ್ಗೆ ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. ಆದಾಗ್ಯೂ, ಭಾನುವಾರ ಮುಂಜಾನೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಮತ್ತು ಕೆಲಸಗಾರರನ್ನು ಮನೆಗೆ ವಾಪಸ್ ಕಳುಹಿಸಲು ಆರಂಭಿಸಿದವು ಎಂದು ತಿಳಿದು ಬಂದಿದೆ.

ಅಧಿಕಾರ ವರ್ಗಾವಣೆ ನಿರೀಕ್ಷೆಯಲ್ಲಿ ತಾಲಿಬಾನ್

ಅಧಿಕಾರ ವರ್ಗಾವಣೆ ನಿರೀಕ್ಷೆಯಲ್ಲಿ ತಾಲಿಬಾನ್

ಭಾನುವಾರ ತಾಲಿಬಾನ್ ಸಂಘಟನೆಯ ಹೋರಾಟಗಾರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯವನ್ನು ಪ್ರವೇಶಿಸಿದರು. ನಾವು ಬಲವಂತವಾಗಿ ನಗರವನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ ನಂತರ "ಶಾಂತಿಯುತ ವರ್ಗಾವಣೆ"ಗಾಗಿ ಕಾಯುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಇದರ ಮಧ್ಯೆ ಯುಎಸ್ ರಾಯಭಾರ ಕಚೇರಿಯಲ್ಲಿ ಹೆಲಿಕಾಪ್ಟರ್‌ಗಳು ಬಂದಿಳಿಯುತ್ತಿದ್ದಂತೆ ಅನಿಶ್ಚಿತತೆಯ ಭೀತಿಯಲ್ಲಿ ಸರ್ಕಾರಿ ಕಚೇರಿಗಳಿಂದ ಸಿಬ್ಬಂದಿಯು ಓಡಿ ಹೋಗಿದ್ದಾರೆ.

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ತಾಲಿಬಾನ್ ಹಿಡಿತ

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ತಾಲಿಬಾನ್ ಹಿಡಿತ

ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಯುಎಸ್ ವಾಯುಸೇನೆ ಬೆಂಬಲದ ಹೊರತಾಗಿಯೂ ತಾಲಿಬಾನ್ ಶಕ್ತಿಶಾಲಿ ಆಗುತ್ತಿದೆ. ಕಳೆದ ಒಂದೇ ವಾರದಲ್ಲಿ ದೇಶದ ಪ್ರಮುಖ ಪ್ರದೇಶಗಳ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ. ಆದರೆ ತಾಲಿಬಾನ್ ಬಂಡುಕೋರರಿಗೆ ಬೆದರಿ ವಾಪಸ್ಸಾದ ಅಫ್ಘಾನ್ ಸೇನೆ ಮತ್ತು ಯೋಧರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಶತಕೋಟಿಗಳನ್ನು ಖರ್ಚು ಮಾಡಿ ಅಮೆರಿಕಾದ ಸೇನೆಗಳಿಂದ ಅಫ್ಘಾನ್ ಅದೆಂಥಾ ತರಬೇತಿಗಳನ್ನು ಪಡೆದುಕೊಂಡಿದೆ ಎಂಬು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ತಾಲಿಬಾನ್ ಮತ್ತು ಸರ್ಕಾರದ ನಡುವಿನ ಶಾಂತಿ ಮಾತುಕತೆ

ತಾಲಿಬಾನ್ ಮತ್ತು ಸರ್ಕಾರದ ನಡುವಿನ ಶಾಂತಿ ಮಾತುಕತೆ

"ನಾವು ಕಾಬೂಲ್ ನಗರದ ಅಧಿಕಾರವನ್ನು ಶಾಂತಿಯುತವಾಗಿ ವರ್ಗಾಯಿಸುವ ನಿರೀಕ್ಷೆಯಲ್ಲಿದ್ದೇವೆ," ಎಂದು ತಾಲಿಬಾನ್ ವಕ್ತಾರ ಸುಶೈಲ್ ಶಾಹೀನ್ ಹೇಳಿದ್ದಾರೆ. ಕ್ವಾತಾರ್ ಪ್ರದೇಶದಲ್ಲಿ ಜಾಗತಿಕ ಸುದ್ದಿ ಸಂಸ್ಥೆ ಅಲ್-ಜಜಿರಾಗೆ ಅವರು ಪ್ರತಿಕ್ರಿಯೆ ನೀಡಿದ್ದು, ಶಾಂತಿಯುತ ಅಧಿಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ಸರ್ಕಾರ, ಸೇನೆ ಮತ್ತು ತಾಲಿಬಾನ್ ನಡುವಿನ ಶಾಂತಿ ಮಾತುಕತೆ ಬಗ್ಗೆ ತಿಳಿಸಲು ನಿರಾಕರಿಸಿದ್ದಾರೆ. "ಯಾರೊಬ್ಬರ ಜೀವನ, ಆಸ್ತಿ ಮತ್ತು ಘನತೆಗೆ ಹಾನಿಯಾಗುವುದಿಲ್ಲ ಮತ್ತು ಕಾಬೂಲ್ ನಾಗರಿಕರ ಜೀವಕ್ಕೆ ಅಪಾಯವಿಲ್ಲ" ಎಂದು ತಾಲಿಬಾನ್ ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.

ತಾಲಿಬಾನ್ ಕೈಗೆ ಅಧಿಕಾರ ಸಿಗುವುದು ಯಾವಾಗ?

ತಾಲಿಬಾನ್ ಕೈಗೆ ಅಧಿಕಾರ ಸಿಗುವುದು ಯಾವಾಗ?

ಕಾಬೂಲ್ ಅಧಿಕಾರ ವರ್ಗಾವಣೆಯ ಕುರಿತು ಚರ್ಚಿಸಲು ತಾಲಿಬಾನ್ ಸಂಧಾನಕಾರರು ಭಾನುವಾರ ಅಫ್ಘಾನಿಸ್ತಾನ ಅಧ್ಯಕ್ಷರ ಅರಮನೆಗೆ ತೆರಳಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಈ ವರ್ಗಾವಣೆ ಪ್ರಕ್ರಿಯೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ಮಧ್ಯೆ ಹಂಗಾಮಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಸಾರ್ವಜನಿಕರಿಗೆ ಧೈರ್ಯ ತುಂಬಲು ನಿಟ್ಟಿನಲ್ಲಿ ವಿಡಿಯೋ ಸಂದೇಶವೊಂದನ್ನು ನೀಡಿದ್ದಾರೆ. "ಅಫ್ಘಾನಿಸ್ತಾನದ ಬಗ್ಗೆ ಒಪ್ಪಂದಕ್ಕೆ ಬರಲು ನಾಳೆ ದೋಹಾ (ಕತಾರ್) ಗೆ ಹೋಗುವ ನಿಯೋಗಕ್ಕೆ ಅಧಿಕಾರ ನೀಡಲಾಗಿದೆ" ಎಂದು ಅವರು ಹೇಳಿದರು. "ಕಾಬೂಲ್‌ನ ಭದ್ರತೆಯ ಬಗ್ಗೆ ನಾನು ನಿಮಗೆ ಭರವಸೆ ನೀಡುತ್ತೇನೆ." ಎಂದು ಹೇಳಿದ್ದರು.

ಭಯದಲ್ಲೇ ಅಫ್ಘಾನ್ ತೊರೆಯುತ್ತಿರುವ ಸಾರ್ವಜನಿಕರು

ಭಯದಲ್ಲೇ ಅಫ್ಘಾನ್ ತೊರೆಯುತ್ತಿರುವ ಸಾರ್ವಜನಿಕರು

ತಾಲಿಬಾನ್ ಆಕ್ರಮಣಕಾರಿ ನೀತಿಯಿಂದ ಬೆದರಿದ ಸಾವಿರಾರು ಜನರು ಅಫ್ಘಾನಿಸ್ತಾನವನ್ನು ತೊರೆದು ಹೋಗುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಮೂಲಕ ಬೇರೆ ಬೇರೆ ರಾಜ್ಯ ಮತ್ತು ರಾಷ್ಟ್ರಗಳಿಗೆ ಹೊರಡುತ್ತಿದ್ದಾರೆ. ಈ ಮಧ್ಯೆ ದೇಶದ ಪ್ರತಿಯೊಂದು ಗಡಿ ಪ್ರದೇಶಗಳಲ್ಲೂ ತಾಲಿಬಾನ್ ಹದ್ದಿನಗಣ್ಣು ಇಟ್ಟಿದೆ. ಬಿಯೋಂಗ್ ಸಿಎಚ್-47 ಚಿನ್ನೋಕ್ ಹೆಲಿಕಾಪ್ಟರ್ ವಿಮಾನವು ರಾಯಭಾರಿ ಕಚೇರಿಯಿಂದ ಹೊರಟ ಕೆಲವೇ ಗಂಟೆಗಳಲ್ಲಿ ಜಬಲಬಾದ್ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.

ಅಫ್ಘಾನ್ ರಾಯಭಾರಿ ಕಚೇರಿಗಳ ಬಳಿ ಬೆಂಕಿ

ಅಫ್ಘಾನ್ ರಾಯಭಾರಿ ಕಚೇರಿಗಳ ಬಳಿ ಬೆಂಕಿ

ಯುಎಸ್ ರಾಜ್ಯ ಇಲಾಖೆಯು ಚಳುವಳಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಲಿಲ್ಲ. ಆದಾಗ್ಯೂ, ರಾಯಭಾರಿ ಕಚೇರಿ ಮೇಲ್ಛಾವಣಿಯ ಬಳಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ರಾಜತಾಂತ್ರಿಕ ಅಧಿಕಾರಿಗಳು ತಕ್ಷಣವೇ ಸೂಕ್ಷ್ಮ ದಾಖಲೆಗಳನ್ನು ನಾಶಪಡಿಸಿದರು. ಅಮೆರಿಕಾದ ಇಬ್ಬರು ಸೇನಾ ಅಧಿಕಾರಿಗಳು ತಮ್ಮ ಅನಾಮಧೇಯ ಸ್ಥಿತಿಯ ಬಗ್ಗೆ ಯಾವುದೇ ರೀತಿ ಮಾತನಾಡಲಿಲ್ಲ. ಏಕೆಂದರೆ ಪರಿಸ್ಥಿತಿಯ ಬಗ್ಗೆ ವಿವರಿಸುವ ಅಥವಾ ಮಾತನಾಡುವ ಅಧಿಕಾರವನ್ನು ಅವರು ಹೊಂದಿರುವುದಿಲ್ಲ. ಇದರ ಬೆನ್ನಲ್ಲೇ ಇತರೆ ರಾಷ್ಟ್ರಗಳ ರಾಯಭಾರ ಕಚೇರಿ ನೆಲೆಯಾದ ಈ ಪ್ರದೇಶದಲ್ಲಿ ಹೊಗೆ ಹೆಚ್ಚಾಯಿತು. ಸಾಮಾನ್ಯವಾಗಿ ಸಶಸ್ತ್ರ ಪಡೆಗಳನ್ನು ಹೊತ್ತೊಯ್ಯುವ ಸಿಕೋರ್ಸ್ಕಿ ಯುಹೆಚ್ -60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ರಾಯಭಾರ ಕಚೇರಿಯ ಬಳಿ ಇಳಿದವು. ಕೆಲ ದಿನಗಳ ಹಿಂದೆಯಷ್ಟೇ ಯುಎಸ್ ತನ್ನ ರಾಯಭಾರ ಕಚೇರಿಯಿಂದ ಸಿಬ್ಬಂದಿಯನ್ನು ಸ್ಥಳಾಂತರಿಸಲು ಸಾವಿರಾರು ಸೈನಿಕರನ್ನು ಕಳುಹಿಸಲು ನಿರ್ಧರಿಸಿತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಅಮೆರಿಕಾ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಅಮೆರಿಕಾ ಎಚ್ಚರಿಕೆ

ತಾಲಿಬಾನ್ ಮುಷ್ಠಿಗೆ ಸಿಲುಕಿರುವ ಪ್ರದೇಶಗಳಿಂದ ಅಮೆರಿಕಾದ ಅಧಿಕಾರಿಗಳು ಮತ್ತು ಪ್ರಜೆಗಳನ್ನು ಸ್ಥಳಾಂತರಿಸಲು ಜೋ ಬೈಡನ್ ತೀರ್ಮಾನಿಸಿದ್ದಾರೆ. ಈ ಸ್ಥಳಾಂತರ ಪ್ರಕ್ರಿಯೆ ವೇಳೆ ಅಡ್ಡಿಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾಲಿಬಾನ್ ಸಂಘಟನೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆ ಜೊತೆಗಿನ ಸಭೆ ನಂತರದಲ್ಲಿ ಅವರು ಮಾತನಾಡಿದ್ದಾರೆ. ಅಫ್ಘಾನಿಸ್ತಾನದ ಜೊತೆಗೆ ಮಾಡಿಕೊಂಡ 20 ವರ್ಷಗಳ ಒಪ್ಪಂದ ಅಂತ್ಯಗೊಂಡ ಹಿನ್ನೆಲೆ ಆ ದೇಶದಲ್ಲಿರುವ ತಮ್ಮವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. "ಸ್ಥಳಾಂತರ ಪ್ರಕ್ರಿಯೆ ನಡೆಸುವುದಕ್ಕೆ 3,000 ದಿಂದ ಸುಮಾರು 5,000 ಭದ್ರಾತ ಸಿಬ್ಬಂದಿಯನ್ನು ರವಾನಿಸಲಾಗಿದೆ. ಅಲ್ಲಿ ಯುಎಸ್ ಸೇನಾ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಎದುರಾದಲ್ಲಿ ಯುಎಸ್ ಸೇನಾ ಪಡೆಗಳಿಂದ ಕಠಿಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಎಂದು ತಾಲಿಬಾನ್ ಸಂಘಟನೆಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ಕಾಬೂಲ್‌ನಲ್ಲಿ ತಾಲಿಬಾನ್‌ನ ಮೆರವಣಿಗೆಯಲ್ಲಿ ಬ್ಲಿಂಕನ್ "ಪ್ರಮುಖ ಪ್ರಾದೇಶಿಕ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವ" ನಿರೀಕ್ಷೆಯಿದೆ ಎಂದು ಬೈಡೆನ್ ಹೇಳಿದ್ದಾರೆ. ಇದಕ್ಕೂ ಮೊದಲು ಯುಎಸ್ ಕೇಂದ್ರ ಸೇನೆಯು, ಅಫ್ಘಾನಿಸ್ತಾನದಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿ ಉದ್ಯೋಗಿಗಳು ಮತ್ತು ಯುಎಸ್ ಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಜನರು ಹಾಗೂ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದಕ್ಕಾಗಿ ಅಮೆರಿಕಾದಿಂದ ಹೆಚ್ಚುವರಿ ಸೇನೆಯನ್ನು ಕಾಬೂಲ್‌ಗೆ ಕಳುಹಿಸಲಾಗುವುದು ಎಂದು ಬೈಡನ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+