Taliban Fight: ಪಾಕಿಸ್ತಾನಕ್ಕೆ ಒದ್ದು ಯುದ್ಧ ಟ್ಯಾಂಕರ್ ಕಿತ್ತುಕೊಂಡ ತಾಲಿಬಾನ್ ಪಡೆ!

ಅಫ್ಘಾನಿಸ್ತಾನ ರೊಚ್ಚಿಗೆದ್ದು ಪಾಪಿ ಪಾಕಿಸ್ತಾನದ ಹುಟ್ಟಡಗಿಸಲು ನಿರ್ಧಾರ ಮಾಡಿದೆ. ಪದೇ, ಪದೇ ತಮ್ಮ ತಂಟೆಗೆ ಬರುತ್ತಿರುವ ಪಾಕಿಸ್ತಾನ ಸೇನೆಗೆ ಸರಿಯಾಗಿ ಪಾಠ ಕಲಿಸಲು ಮುಂದೆ ನುಗ್ಗಿದೆ ತಾಲಿಬಾನ್ ಪಡೆ. ಈ ಮೂಲಕ ಪಾಕಿಸ್ತಾನ ಭೂಪಟದ ಮೇಲೆ ಇಲ್ಲದಂತೆ ನಾಶ ಮಾಡಲು ತಾಲಿಬಾನ್ ನಿರ್ಧಾರ ಮಾಡಿತ್ತು. ಆದರೆ ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳು ಮಧ್ಯಪ್ರವೇಶ ಮಾಡಿದ ನಂತರ ಶಾಂತಿ ಒಪ್ಪಂದ ಮಾಡಿಕೊಂಡು ಎಲ್ಲವೂ ತಣ್ಣಗಾಗಿದೆ. ಇಂತಹ ಸಮಯದಲ್ಲೇ ವಿಡಿಯೋ ವೈರಲ್ ಆಗುತ್ತಿದ್ದು, ಹಲ್‌ಚಲ್ ಎಬ್ಬಿಸಿದೆ.

ಪಾಕಿಸ್ತಾನದ ಜನರಿಗೆ ತುತ್ತು ಅನ್ನ ಸಿಕ್ಕರೆ ಅದೇ ಪುಣ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಹೌದು, ಪಾಕಿಸ್ತಾನಕ್ಕೆ ತಿನ್ನಲು ಅನ್ನ ಇಲ್ಲ ಅಂದ್ರೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಶಸ್ತ್ರಾಸ್ತ್ರ ಖರೀದಿ ಮಾಡಬೇಕು ಅನ್ನೋ ಮನಸ್ಥಿತಿ ಹೊಂದಿದೆ. ಹೀಗಿದ್ದರೂ ಪಾಕಿಸ್ತಾನದ ಸೇನೆ ಮಾತ್ರ ಶಕ್ತಿಯುತವಾಗಿ ಇಲ್ಲ. ತಾಲಿಬಾನ್ ಕೊಡುತ್ತಿರುವ ಏಟನ್ನು ಕೂಡ ತಡೆದುಕೊಳ್ಳಲು ಪಾಕಿಸ್ತಾನಕ್ಕೆ ಈಗ ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ದಿಢೀರ್ ಪಾಕಿಸ್ತಾನದ ಯುದ್ಧ ಟ್ಯಾಂಕರ್ ಕಳೆದು ಹೋಗಿದೆ!

Taliban Claims Capture of Tanks in Afghanistan from Pakistan Forces

ಪಾಕಿಸ್ತಾನದ ಯುದ್ಧ ಟ್ಯಾಂಕರ್ ಉಡೀಸ್!

ಅಂದಹಾಗೆ ಹೀಗೆ ಕಳೆದು ಹೋಗಿರುವ ಪಾಕಿಸ್ತಾನದ ಯುದ್ಧ ಟ್ಯಾಂಕರ್ ಸ್ವತಃ ತಾಲಿಬಾನ್ ಕೈಯಲ್ಲೇ ಸಿಲುಕಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಗಮನ ಸೆಳೆದಿದ್ದು, ವಿಡಿಯೋದಲ್ಲಿ ತಾಲಿಬಾನ್ ಪಡೆಗಳು ನೇರವಾಗಿ ಪಾಕಿಸ್ತಾನದ ಟ್ಯಾಂಕರ್ ಕದ್ದು ಅದರ ಮೇಲೆಯೇ ಹತ್ತಿಕೊಂಡು ಹೋಗಿವೆ.

ಅಫ್ಘಾನಿಸ್ತಾನ ದಕ್ಷಿಣ ಪೂರ್ವ ಸ್ಪಿನ್ ಬೊಲ್ಡಕ್ ಪ್ರಾಂತ್ಯದ ಬೀದಿ ಬೀದಿಗಳಲ್ಲಿ ಈಗ ಪಾಕಿಸ್ತಾನದ ಯುದ್ಧ ಟ್ಯಾಂಕರ್ಸ್ ಓಡಾಡುತ್ತಿವೆ. ಅಲ್ಲದೆ ಪಾಕಿಸ್ತಾನದ ಧ್ವಜ ಕೂಡ ಟ್ಯಾಂಕರ್ ಮೇಲೆ ಇದ್ದು, ಅವುಗಳನ್ನು ಪಾಕಿಸ್ತಾನದ ಸೈನಿಕರಿಗೆ ಒದ್ದು ಕಿತ್ತುಕೊಂಡು ಬಂದಿರುವುದಾಗಿ ಇದೀಗ ತಾಲಿಬಾನ್ ಪಡೆ ಯೋಧರು ಹೇಳುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನ ಎಷ್ಟು ನಿಶ್ಯಕ್ತವಾಗಿದೆ ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗಿದೆ!

ಮತ್ತೆ ಶುರುವಾಗುತ್ತಾ ಭೀಕರ ಕದನ?

ಪಾಕಿಸ್ತಾನ & ತಾಲಿಬಾನ್ ಪಡೆಗಳ ನಡುವೆ ಸದ್ಯಕ್ಕೆ ಶಾಂತಿ ಒಪ್ಪಂದ ನಡೆದಿದ್ದರೂ ಅದು ಸರಿಯಾಗಿ ಜಾರಿಗೆ ಬಂದಂತೆ ಕಾಣುತ್ತಿಲ್ಲ. ಮತ್ತೊಂದು ಕಡೆ ಭೀಕರವಾಗಿ ಗಲಾಟೆ ಕೂಡ ನಡೆಯುತ್ತಿದ್ದು, ಭಾರಿ ಹಿಂಸಾಚಾರ ಭುಗಿಲೇಳುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಎರಡೂ ದೇಶಗಳ ನಡುವೆ ಮತ್ತೊಮ್ಮೆ ಭೀಕರ ಯುದ್ಧ ಶುರುವಾಗುವ ಆತಂಕ ಆವರಿಸಿದೆ. ಪಾಕಿಸ್ತಾನ ಸುಮ್ಮನೆ ಇರದೆ ಉರಿಯುವ ಬೆಂಕಿಗೆ ತುಪ್ಪ ಸುರಿದು ಆಟ ನೋಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+