ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಿಡಿಸಿದ ಸಂಭ್ರಮದ ಗುಂಡಿಗೆ 17 ಸಾವು, 41 ಮಂದಿಗೆ ಗಾಯ

|
Google Oneindia Kannada News

ಕಾಬೂಲ್, ಸಪ್ಟೆಂಬರ್ 4: ಅಫ್ಘಾನಿಸ್ತಾನದಲ್ಲಿ ಪಂಜ್ ಶೀರ್ ಅನ್ನು ಮಣಿಸಿದ ಸಂಭ್ರಮದಲ್ಲಿ ತಾಲಿಬಾನ್ ಸಂಘಟನೆ ಸಿಡಿಸಿದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದು, 41ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಸುದ್ದಿ ಸಂಸ್ಥೆ ಅಸ್ವಕಾ ವರದಿ ಮಾಡಿದೆ.

ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧಕ ತಂಡವನ್ನು ಸೋಲಿಸಿದ ಖುಷಿಯಲ್ಲಿ ತಾಲಿಬಾನ್ ಉಗ್ರರು ಮನಸೋ-ಇಚ್ಛೆ ಗುಂಡಿನ ಸುರಿಮಳೆಗೈದರು. ಈ ವೇಳೆಯಲ್ಲಿ ಮಕ್ಕಳು ಸೇರಿದಂತೆ ಗುಂಡು ತಗುಲಿದ 17ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

 ಪಂಜ್‌ಶೀರ್ ಇನ್ನೂ ಸೋತಿಲ್ಲ, ನಾನು ದೇಶದಿಂದ ಓಡಿಯೂ ಹೋಗಿಲ್ಲ: ಅಮ್ರುಲ್ಲಾ ಪಂಜ್‌ಶೀರ್ ಇನ್ನೂ ಸೋತಿಲ್ಲ, ನಾನು ದೇಶದಿಂದ ಓಡಿಯೂ ಹೋಗಿಲ್ಲ: ಅಮ್ರುಲ್ಲಾ

ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ, ನಾವು ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತೇವೆ. ನಮಗೆ ಅಡ್ಡಿಯಾದವರನ್ನು ಈಗಾಗಲೇ ಸೋಲಿಸಿದ್ದೇವೆ. ಪಂಜಶೀರ್ ಈಗ ನಮ್ಮ ಅಧೀನದಲ್ಲಿದೆ ಎಂದು ತಾಲಿಬಾನ್ ಕಮಾಂಡರ್ ಒಬ್ಬರು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Taliban Celebratory Firing Kills 17 People Including Children, 41 injured

ಪಾಕಿಸ್ತಾನ ವಾಹಿನಿಗಳಲ್ಲಿನ ಸುದ್ದಿ ಸುಳ್ಳು:

ಪಂಜಶೀರ್‌ನಲ್ಲಿ ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ತಮ್ಮ ಹಕ್ಕುಗಳನ್ನು ತಳ್ಳಿಹಾಕಿದರು. ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಪಂಜಶೀರ್ ವಿಜಯದ ಸುದ್ದಿಗಳೆಲ್ಲ ಸುಳ್ಳಾಗಿವೆ. ಪಂಜ್ ಶೀರ್ ಅನ್ನು ವಶಪಡಿಸಿಕೊಂಡ ದಿನವೇ ನನ್ನ ಕೊನೆಯ ದಿನವಾಗುತ್ತದೆ ಎಂದು ಹೇಳಿದ್ದಾರೆ.

ಅನಗತ್ಯ ಫೈರಿಂಗ್ ನಡೆಸದಂತೆ ಸೂಚನೆ:

ಅಫ್ಘಾನಿಸ್ತಾನದಲ್ಲಿ ಸಂಭ್ರಮದಿಂದ ಫೈರಿಂಗ್ ನಡೆಸಿದ ವೇಳೆ 17 ಜನರು ಜೀವ ಕಳೆದುಕೊಂಡಿರುವ ಬಗ್ಗೆ ವರದಿಯಾಗುತ್ತಿದ್ದಂತೆ ತಾಲಿಬಾನ್ ಎಚ್ಚೆತ್ತುಕೊಂಡಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅನಗತ್ಯವಾಗಿ ಗುಂಡು ಹಾರಿಸದಂತೆ ಸಂಘಟನೆಯವರಿಗೆ ಸೂಚನೆ ನೀಡಿದ್ದಾರೆ. "ಗಮನಿಸಿ, ಕಾಬೂಲ್ ನಗರ ಮತ್ತು ದೇಶದಾದ್ಯಂತ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ತಪ್ಪಿಸಿ, ಅದರ ಬದಲಾಗಿ ಅಲ್ಲಾಗೆ ಧನ್ಯವಾದ ಸಲ್ಲಿಸಿ. ಆಯುಧಗಳು ಮತ್ತು ಮದ್ದುಗುಂಡುಗಳು ನಿಮ್ಮ ಕೈಯಲ್ಲಿದೆ. ಅವುಗಳನ್ನು ಹಾಳುಮಾಡುವ ಹಕ್ಕು ಯಾರಿಗೂ ಇಲ್ಲ. ಗುಂಡುಗಳು ನಾಗರಿಕರಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಅನಗತ್ಯವಾಗಿ ಶೂಟ್ ಮಾಡಬೇಡಿ ಎಂದು ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ:

ಕಳೆದ ಆಗಸ್ಟ್ 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿತು. ಎರಡು ದಶಕಗಳ ಕಾಲ ಅಫ್ಘಾನಿಸ್ತಾನದಲ್ಲಿ ಸಂಘರ್ಷದ ಯುದ್ಧವನ್ನು ಯುಎಸ್ ಅಂತ್ಯಗೊಳಿಸಿತು. ಕಳೆದ ಆಗಸ್ಟ್ 31ರವರೆಗೂ ಯುಎಸ್ ಸೇನೆ ತಮ್ಮ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ಕಾರ್ಯಾಚರಣೆ ನಡೆಸಿತು. ಯುಎಸ್ ಸೇನೆಯು ದೇಶದಿಂದ ವಾಪಸ್ ಆಗುತ್ತಿದ್ದಂತೆ ಇಡೀ ಅಫ್ಘಾನಿಸ್ತಾನ ತಾಲಿಬಾನ್ ಸಂಘಟನೆಯ ಕೈವಶವಾಯಿತು. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರ ಹಿಡಿಯಲು ಮುಂದಾಗಿರುವ ತಾಲಿಬಾನ್ ಸಪ್ಟೆಂಬರ್ 3ರಂದು ಸರ್ಕಾರ ರಚಿಸಿತು.

English summary
Taliban Celebratory Firing Kills 17 People Including Children, 41 injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X